ದೀಪಾವಳಿ ಹಬ್ಬದ ವಿಶೇಷತೆ :-
ದೀಪಾವಳಿ ಹಿಂದೂ ಹಬ್ಬವಾಗಿದ್ದು, ಇದು ಭಾರತದ ಪ್ರಸಿದ್ದ ಹಬ್ಬಗಳಲ್ಲಿ ಒಂದಾಗಿದೆ.ಈ ಹಬ್ಬವು ಐದು ದಿನಗಳವರೆಗೂ ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಹಬ್ಬವನ್ನು ಜನರು ತುಂಬಾ ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸುತ್ತಾರೆ.
ದೀಪಾವಳಿ ಹಬ್ಬದ ಸಮಯದಲ್ಲಿ ಜನರು ತಮ್ಮ ಮನೆಗಳು, ಅಂಗಡಿಗಳು ಮತ್ತು ಕಟ್ಟಡಗಳನ್ನು ಸ್ವಚ್ಛಗೋಳಿಸುತ್ತಾರೆ.ಹಾಗೂ ಬಣ್ಣಗಳನ್ನು ಹಚ್ಚುತ್ತಾರೆ. ಈ ಹಬ್ಬದಂದು ಹೊಸ ಬಟ್ಟೆ, ಒಡವೆ ಇತ್ಯಾದಿಗಳನ್ನು ಖರೀದಿಸುತ್ತಾರೆ. ದೀಪಾವಳಿಯಂದು ಜನರು ಪಟಾಕಿ ಸಿಡಿಸಿ, ದೀಪಗಳನ್ನು ಹಚ್ಚುವ ಮೂಲಕ ಹಬ್ಬವನ್ನು ಸಂಭ್ರಮಿಸುತ್ತಾರೆ.
ದೀಪಾವಳಿ ಹಬ್ಬ ಬಹಳ ಹಿಂದಿನಿಂದ ಆಚರಿಸಿಕೊಂಡು ಬಂದ ಹಬ್ಬವಾಗಿದೆ. ಮಕ್ಕಳು ತಮ್ಮ ನೆಚ್ಚಿನ ಸಿಹಿ ತಿಂಡಿಗಳನ್ನು ತಿನ್ನಲು ಮತ್ತು ಬಟ್ಟೆಗಳನ್ನು ಧರಿಸಲು ಇದು ನೆಚ್ಚಿನ ಹಬ್ಬವಾಗಿದೆ. ದೀಪಾವಳಿಯ ಸಂದರ್ಭದಲ್ಲಿ ಹಿಂದೂಗಳ ಪ್ರತಿಯೊಂದು ಮನೆಯಲ್ಲಿ ದೀಪಾವಳಿ ಹಬ್ಬದ ವಾತಾವರಣವನ್ನು ಕಾಣಬಹುದು.
ದೀಪಾವಳಿಯು ಸಂತೋಷ ಮತ್ತು ಸಂಭ್ರಮದಿಂದ ಆಚರಿಸುವ ಹಬ್ಬವಾಗಿದ್ದು, ಕತ್ತಲೆಯ ಮೇಲೆ ಬೆಳಕಿನ ಶಕ್ತಿಗಳ ವಿಜಯವನ್ನು ಸಾಂಕೇತಿಸಲು ಬೆಳಕಿನ ಹಬ್ಬ ಎಂದು ಆಚರಿಸಲಾಗುತ್ತದೆ. ಇದನ್ನು ಪ್ರತಿ ವರ್ಷ ಭಾರತದಲ್ಲಿ ಪ್ರತಿಯೊಂದು ರಾಜ್ಯದಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ಜನರು ಲಕ್ಷ್ಮಿ ಪೂಜೆಯನ್ನು ಮನೆಯಲ್ಲಿ ಮಾಡುತ್ತಾರೆ. ಏಕೆಂದರೆ ಲಕ್ಷ್ಮಿ ಪೂಜೆಯನ್ನು ಮಾಡುವುದರಿಂದ ಅವಳು ಅದೃಷ್ಟ ಮತ್ತು ಸಮೃದ್ಧಿಯನ್ನು ನೀಡುತ್ತಾಳೆ ಎಂದು ಭಾವಿಸಲಾಗಿದೆ.
ಗೋವರ್ಧನ ಪೂಜೆ :-
ದೀಪಾವಳಿಯ ನಂತರದ ದಿನದಂದು ಜನರು ಗೋ ಪೂಜೆಯನ್ನು ಆಚರಿಸುತ್ತಾರೆ. ಗೋ ಪೂಜೆಯನ್ನು ಐದನೇ ದಿನದಂದು ಆಚರಿಸಲಾಗುತ್ತದೆ. ಈ ದಿನದಂದು ಗೋವುಗಳನ್ನು ಅಲಂಕಾರಿಸುತ್ತಾರೆ. ಗೋವುಗಳಿಗೆ ತಿಂಡಿ ತಿನಿಸುಗಳನ್ನು ನೀಡಿ ಗೋವುಗಳಿಗೆ ಪೂಜೆಯನ್ನು ಮಾಡಿ ಹಬ್ಬವನ್ನು ಆಚರಿಸಲಾಗುತ್ತದೆ.
ಹಿಂದೂಗಳು ದೀಪಾವಳಿಯನ್ನು ವಿವಿಧ ಕಾರಣಗಳಿಂದ ಆಚರಿಸುತ್ತಾರೆ. ಈ ಹಬ್ಬವು ದೇಶದ ಸಾಂಸ್ಕೃತಿಕ ಪರಂಪರೆಯನ್ನು ಗುರುತಿಸಬಹುದು. ಇದು ಒಗ್ಗಟ್ಟಿನ ಸಾಂಕೇತಿಕವು ಆಗಿದೆ. ಈ ಶುಭ ಸಂದರ್ಭದಲ್ಲಿ ಜನರು ಹೊಸ ಉದ್ಯಮಗಳು, ವ್ಯವಹಾರಗಳು ಮತ್ತು ಆರ್ಥಿಕ ವರ್ಷವನ್ನು ಪ್ರಾರಂಭಿಸುತ್ತಾರೆ. ಜನರು ತಮ್ಮ ತಮ್ಮ ಮನೆಗಳನ್ನು ದೀಪಗಳು, ಮೆಣದಬತ್ತಿಗಳು ಮತ್ತು ವರ್ಣರಂಜಿತ ದೀಪಗಳಿಂದ ಅಲಂಕರಿಸುತ್ತಾರೆ.
ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ. ಮಣ್ಣಿನಿಂದ ಮಾಡಿದ ದೀಪಗಳನ್ನು ಬೆಳಗುವುದು ಈ ಹಬ್ಬಗಳಲ್ಲಿ ಕಾಣಬಹುದು. ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ದೀಪಾವಳಿಗೆ ಅವರದ್ದೇ ಆದ ಮಹತ್ವವಿದೆ.
ಯಶೋಧಾ ಮಂ ಮರಾಠಿ
ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಶಿರಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ