- ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಶುಕ್ರವಾರ, ಆಗಸ್ಟ್ 29, 2025

 *ಶಿಕ್ಷಣ ಜೀವನದ ದೀಪ*


ಸರ್ವತೋಮುಖ ಅಭಿವೃದ್ದಿಗೆ ಶಿಕ್ಷಣವೇ ಬುನಾದಿ ಎಂಬುದು ಸಾಮಾನ್ಯವಾಗಿ ನಂಬಿಕೆ. ಜೀವನವು ಅಭಿವೃದ್ದಿಯನ್ನು ಆಧರಿಸಿದೇ & ಅಭಿವೃದ್ಧಿ & ಬೆಳೆಯುವುದು ಜೀವನ. ನಾವು ಈ ದೃಷ್ಟಿಕೋನವನ್ನು ಶಿಕ್ಷಣದ ದೃಷ್ಟಿಕೋನದಲ್ಲಿ ವಿವರಿಸಿದರೆ, ಶಿಕ್ಷಣವು ವ್ಯಕ್ತಿಯ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯಾಗಿದೆ.  ಶಿಕ್ಷಣವು ಮನುಷ್ಯನನ್ನು ರೂಪಿಸುವ ಪ್ರಕ್ರಿಯೆ. ಹಾಗಾಗಿ ಎಲ್ಲರಿಗೂ ಶಿಕ್ಷಣ ಅಗತ್ಯ. ಶಿಕ್ಷಣವು ಪ್ರತಿಯೊಬ್ಬರಲ್ಲೂ ನಾಗರಿಕ & ಸಾಮಾಜಿಕ ಜವಾಬ್ದಾರಿಯನ್ನು ರೂಡಿಸುತ್ತದೆ. ಭಾರತ ವೈವಿದ್ಯಗಳ ನಾಡು. ಆದ್ದರಿಂದ ಏಕೈತ್ಯೆಯನ್ನು ತರಲು ಶಿಕ್ಷಣವು ಭಾವನಾತ್ಮಕ ಏಕೀಕರಣದ ಸಾಧನವಾಗಿದೆ. ಹೀಗಾಗಿ ಶಿಕ್ಷಣ ಎಲ್ಲರಿಗೂ ಅತ್ಯಗತ್ಯ. ಶಿಕ್ಷಣವಿಲ್ಲದೆ ಉತ್ತಮ ಜೀವನ ಸಾಧ್ಯವಿಲ್ಲ ಸಾಧ್ಯವಿಲ್ಲ.


         ಶಿಕ್ಷಣವು ಜಗತ್ತನ್ನು ಬದಲಾಯಿಸಲು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿದೆ. ಇದು ಜನರು ಉತ್ತಮ ಪ್ರಜೆಗಳಾಗಲು ಸಹಾಯ ಮಾಡುತ್ತದೆ ಶಿಕ್ಷಣವು ಕಠಿಣ ಪರಿಶ್ರಮದ ಮಹತ್ವವನ್ನು ನಮಗೆ ತೋರಿಸುತ್ತದೆ  & ಅದೇ ಸಮಯದಲ್ಲಿ, ನಮಗೆ ಬೆಳೆಯಲು & ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಉತ್ತಮ ಸಮಾಜದ ಬೆಳವಣಿಗೆಗೆ ಸಮಾಜವು ಪೂರಕವಾಗಿದೆ.


            ಈಗೀನ ಕಾಲದಲ್ಲಿ ಮಕ್ಕಳಿಗೆ ನೀತಿ, ಧರ್ಮ, ಸಂಸ್ಕಾರ, ಸಂಸ್ಕೃತಿ ಬಹಳ ಮುಖ್ಯವಾಗಿ ಬೇಕಾಗಿದೆ.  ಈಂದಿನ ಮಕ್ಕಳು ನಾಳಿನ ಪ್ರಜೆಗಳು ದೇಶಕಟ್ಟಿ ಉಳಿಸುವ ಬೆಳೆಸುವ ವ್ಯಕ್ತಿಯನ್ನಾಗಿ ಮಾಡಬಹುದು. ಮಕ್ಕಳ ಅಭಿವೃದ್ಧಿಗೆ ಶಿಕ್ಷಕ, ಗುರುಗಳು, ತಂದೆ - ತಾಯಿಗಳು, ಬಂಧುಗಳು, ಸಮಾಜ ಸುತ್ತಮುತ್ತಲಿನ ಜನ ಹೊಣೆಗಾರರು. ನಮ್ಮ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಣವು ಒಂದು ಪ್ರಮುಖ ಸಾಧನವಾಗಿದೆ.. ಶಿಕ್ಷಣದಿಂದ ನಾವು ನಮ್ಮ ಜೀವನದಲ್ಲಿ ಸಾಧನೆ ಮಾಡಲು ಸಹಕಾರಿ. ಶಿಕ್ಷಣ ನಮ್ಮೊಳಗಿನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಆತ್ಮವಿಶ್ವಾಸದಿಂದ ನಮ್ಮ ವ್ಯಕ್ತಿತ್ವ ಉತ್ತಮ ಮಟ್ಟದಲ್ಲಿರುತ್ತದೆ.


           ಹೀಗಾಗಿ ಎಲ್ಲರ ಜೀವನದಲ್ಲಿ ಅತ್ಯಗತ್ಯ ಅಂಶವಾಗಿದೆ.

                                                               

                                                                           - ಸುಶ್ಮಿತಾ ನಾಯ್ಕ

                                                                      ಪತ್ರಿಕೋದ್ಯಮ ವಿಭಾಗ

                                   ಎಂ. ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ