ಸಂಗೀತದ ಮಹತ್ವ - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಮಂಗಳವಾರ, ಸೆಪ್ಟೆಂಬರ್ 23, 2025

ಸಂಗೀತದ ಮಹತ್ವ

 

ಸಂಗೀತವು  ಪುರಾತನ   ಕಾಲದಿಂದಲೂ ಅಸ್ತಿತ್ವದಲ್ಲಿದೆ. ಸಂಗೀತದಲ್ಲಿ ಭಾವ , ರಾಗ ,ತಾಳ ಮುಖ್ಯವಾಗಿರುತ್ತದೆ.ಈ ಮೂರು ಅಂಶಗಳು ಸಂಗೀತ ಜೀವಾಳವಾಗಿದೆ.

ಈ ಮೂರು ಸೂತ್ರಗಳು ಇಲ್ಲವಾದರೆ ಸಂಗೀತವನ್ನು ರಾಗದ ರೂಪದಲ್ಲಿ ಆಲಿಸಲು ಸಾಧ್ಯವಿಲ್ಲ .ಸನಾತನ ಧರ್ಮದಲ್ಲಿ ಪರಮಾತ್ಮನನ್ನು ನಾದ ಸ್ವರೂಪವೆಂದು ವರ್ಣಿಸಲಾಗಿದೆ.ಆದ್ದರಿಂದಲೇ ನಾವು ಅವನನ್ನು  ನಾದ 

ಬ್ರಹ್ಮನೆಂದು ಕರೆಯುತ್ತೇವೆ.


ಸಂಗೀತದ  ಉತ್ಪತ್ತಿಯ ಕುರಿತು ಹಲವಾರುಸಂಗೀತಜ್ಞರಲ್ಲಿ  ಭಿನ್ನಾಭಿಪ್ರಾಯವನ್ನು ಕಾಣಬಹುದು.

ಮೊದಲನೆಯದಾಗಿ ಆದಿವಿಷ್ಣು ತನ್ನ ಮಗನಾದ ಬ್ರಹ್ಮನಿಗೆ  ಎಲ್ಲರಿಗಿಂತ ಮೊದಲು ಸಂಗೀತದ ವಿದ್ಯೆಯನ್ನು ಕಲಿಸಿದನು. ಅನಂತರ ಬ್ರಹ್ಮ ಈ ವಿದ್ಯೆಯನ್ನು ಸರಸ್ವತಿಗೂ,ಶಿವನಿಗೂ ಹೇಳಿಕೊಟ್ಟನು.ವಿದ್ಯಾಮಾತೆಸರಸ್ವತಿಯು ಈ ವಿದ್ಯೆಯನ್ನು ಲೋಕ ಕಲ್ಯಾಣಾರ್ಥವಾಗಿ ತ್ರಿಲೋಕಸಂಚಾರಿ ನಾರದನಿಗೆ ಹೇಳಿ ಕೊಟ್ಟಳು.ಹಾಗಾಗಿ ನಾರದ ಈ ವಿದ್ಯೆಯನ್ನು ಭೂಲೋಕದಲ್ಲಿಪ್ರಸಾರ ಮಾಡಿದ..ಭೂಲೋಕದಅಪ್ಸರೆಯರು,ಗಾನ ಕಲಾವಿದರು ಹೀಗೆ ಸಂಗೀತವು ಮಾನವ ಕುಲದಲ್ಲಿ ಪ್ರಚಾರಕ್ಕೆ ಬಂದಿತೆಂದು ಸಂಗೀತಜ್ಞರ ಅಭಿಪ್ರಾಯವಾಗಿದೆ.

     

                                   ಸಂಗೀತವನ್ನು ಪ್ರತಿನಿತ್ಯ

ಅಭ್ಯಾಸಮಾಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ.ನಮ್ಮ ಮಾನಸಿಕ ಸ್ಥಿತಿಗತಿ ಉತ್ತಮಾಗಿರುತ್ತದೆ. ಇತ್ತೀಚೆಗೆ ಅತಿಯಾದ ಒತ್ತಡ, ಆತಂಕದಿಂದ ಮಾನಸಿಕ ಸಮಸ್ಯೆಗಳು ಜನರಲ್ಲಿ ಹೆಚ್ಚುತ್ತಿದೆ.ಮುಂಜಾನೆಯಿಂದ

ಸಂಜೆವರೆಗೂ ಅತಿಯಾದ ಕೆಲಸ ಮಾಡುವುದರಿಂದಮಾನಸಿಕ ಸಮಸ್ಯೆಗಳು ಕಂಡುಬರುತ್ತವೆ.

ಸಂಗೀತವನ್ನು ಕೇಳುವುದರಿಂದ ಮನಸ್ಸಿಗೆ ಅತಿಯಾದ ಆನಂದ  ಉಂಟಾಗುತ್ತದೆ. ಸಂಗೀತದಷ್ಟು ಮನಸ್ಸಿಗೆ ಖುಷಿ ಕೊಡುವುದು ಬೇರೊಂದಿಲ್ಲಎನ್ನಬಹುದು..ಸಂಗೀತಕ್ಕೆ ನೋವು, ದುಃಖ,ಆತಂಕ, ಖಿನ್ನತೆ ಮರೆಸುವಶಕ್ತಿಯಿದೆ.ಒಬ್ಬಮನುಷ್ಯನಿಗೆ ದುಡ್ಡು ಎಷ್ಟೇ ಇರಲಿ ಅದರಿಂದ ನಮಗೆಬೇಕಾದ ಮೂಲಸೌಕರ್ಯಗಳನ್ನು ಪಡೆದುಕೊಳ್ಳಬಹುದೇ ಹೊರತು ಮನಸ್ಸಿಗೆ ಬೇಕಾದ ಆನಂದವನ್ನಲ್ಲ. ದಣಿದ ಜೀವಕ್ಕೆ ಆನಂದ ಮುಖ್ಯ. .ಸಂಗೀತ ಕೇಳುವುದರಿಂದ ಆನಂದ ಉಂಟಾಗುವುದು. ಸಂಗೀತಕ್ಕೆ  ಅದರದೇ ಆದ ಭಾಷೆಯಿದೆ. ಅದನ್ನು ಬರೆದು ಹೇಳಲು  ಅಸಾದ್ಯ.ಇದನ್ನು ಹಾಡಿ ಹೇಳಿದರೆ ಮಾತ್ರ ಅದಕ್ಕೊಂದು 

ಸೊಬಗು. ಸಂಗೀತದಲ್ಲಿ ಸಾಧನೆ ಮಾಡಿದ ಹಲವಾರು ಸಂಗೀತಗಾರರಿದ್ದಾರೆ. ಸುಲಭವಾಗಿ ಏನನ್ನುಕಲಿಯಲು ಸಾಧ್ಯವಿಲ್ಲ.ಕಷ್ಟಪಟ್ಟರೆ ಮಾತ್ರ ಸಾಧನೆ ಮಾಡಲು ಸಾಧ್ಯ.


ಸಂಗೀತದಲ್ಲಿ ಮುಖ್ಯವಾಗಿ 2 ಪ್ರಕಾರಗಳಿವೆ

1. ಹಿಂದೂಸ್ತಾನಿ ಸಂಗೀತ

2. ಕರ್ನಾಟಕ ಸಂಗೀತ

ಇವೆರಡಕ್ಕೂ ಅದರದೇ ಆದ ಪ್ರಾಮುಖ್ಯತೆ ಇದೆ. ಕಾಲೇಜುಗಳಲ್ಲೂ ಕೂಡ ಗುಣಮಟ್ಟದ ಸಂಗೀತ ಕಲಿಯಲು ಅವಕಾಶ ನೀಡುತ್ತಿದ್ದಾರೆ .ಇದರಿಂದಮಕ್ಕಳ ಏಕಾಗ್ರತೆ ಪ್ರಮಾಣ ಹೆಚ್ಚಲಿ ಎಂಬುದು ಸರಕಾರದ ಉದ್ದೇಶವಾಗಿದೆ.ಸಂಗೀತವನ್ನು ಕಲಿಯಲು ವಯಸ್ಸಿನ ಮಿತಿ ಬೇಕಿಲ್ಲ.ವಯಸ್ಸು  ಕೇವಲ ಒಂದು ಸಂಖ್ಯೆ , ಅದು ಬರಿ ಮೈಯಿಗಷ್ಟೇ ಸೀಮಿತ  ನಮ್ಮ ಪ್ರತಿಭೆ ಗಲ್ಲ.

 

                   - ಅರ್ಪಿತಾ ಮರಾಠಿ

                    ಎಂ. ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಸಿರ್ಸಿ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ