ಭಾರತವು ಸಾಮಾನ್ಯವಾಗಿ ಹಬ್ಬ - ಹರಿದಿನಗಳ ನಾಡು ಎಂದು ಪ್ರಸಿದ್ದಿ ಪಡದಿದೆ.ಇಲ್ಲಿ ಆಚರಿಸುವ ಪ್ರತಿಯೊಂದು ಹಬ್ಬವು ತನ್ನದೇ ಆದ ಧಾರ್ಮಿಕ, ಸಂಸ್ಕೃತಿಕ, ಹಾಗೂ ಸಾಮಾಜಿಕ ಮಹತ್ವವನ್ನು ಹೊಂದಿದೆ. ಅಂತಹ ಮಹತ್ವದ ಹಬ್ಬಗಳಲ್ಲಿ ನವರಾತ್ರಿ ಅತ್ಯಂತ ಮುಖ್ಯವಾದದ್ದು, ಒಟ್ಟಿನಲ್ಲಿ 10 ದಿನಗಳ ಕಾಲ ಈ ಹಬ್ಬ ನಡೆಯುವುದನ್ನು ನಾವು ಕಾಣುತ್ತೇವೆ. ಸಾಮಾನ್ಯವಾಗಿ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಬರುವ ಅಶ್ವಯಜ ಮಾಸದಲ್ಲಿ ನವರಾತ್ರಿಯನ್ನು ದೇಶದಾದ್ಯಂತ ವಿಶೇಷ ಭಕ್ತಿ, ಶ್ರದ್ಧೆಯಿಂದ ಆಚರಿಸಲಾಗುತ್ತದೆ.
ಈ ಒಂದು ನವರಾತ್ರಿಯ ಹಬ್ಬ ಸತ್ಯದ ಜಯ ಮತ್ತು ಅಸತ್ಯದ ಸೋಲಿನ ಸಂಕೇತವಾಗಿದೆ. ಪುರಾಣಗಳ ಪ್ರಕಾರ ರಾಕ್ಷಸ ಮಹಿಶಾಸುರನು ದೇವತೆಗಳ ಮೇಲೆ ದಾಳಿ ಮಾಡಿದಾಗ, ದೇವತೆಗಳು ದುರ್ಗಾದೇವಿಯನ್ನು ರಚಿಸಿ ಅವಳಿಗೆ ಅಪಾರ ಶಕ್ತಿಯನ್ನು ನೀಡಿದರು. ದುರ್ಗಾದೇವಿ ಒಂಬತ್ತು ದಿನಗಳ ಕಾಲ ಮಹಿಷಾಸುರನೊಂದಿಗೆ ಯುದ್ಧ ಮಾಡಿ ದಶಮಿಯಂದು ಅವನನ್ನು ಸಂಹರಿಸಿದಳು. ಈ ಘಟನೆಯ ನೆನಪಿಗಾಗಿ ನವರಾತ್ರಿಯನ್ನು ಆಚರಿಸಲಾಗುತ್ತದೆ. ಹೀಗಾಗಿ ಈ ಹಬ್ಬವು ಶಕ್ತಿಯ ಆರಾಧನೆ ಎಂದು ಪರಿಗಣಿಸಲ್ಪಟ್ಟಿದೆ. ದೇವಿಯ ಒಂಬತ್ತು ರೂಪಗಳಾದ ಶೈಲಪುತ್ರಿ, ಬ್ರಹ್ಮಚಾರಿ, ಚಂದ್ರಘಂಟೆ, ಕುಷ್ಕಾಂಡ, ಸ್ಕಂದಮಾತೆ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ, ಮತ್ತು ಸಿದ್ಧಿದಾತ್ರಿ, ಇವು ಪ್ರತಿದಿನವೂ ವಿಭಿನ್ನವಾಗಿ ಪೂಜಿಸಲ್ಪಡುತ್ತದೆ.
ಇದು ಭಾರತದ ಪ್ರತಿಯೊಂದು ರಾಜ್ಯದಲ್ಲೂ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ಪಶ್ಚಿಮ್ ಬಂಗಾಳದಲ್ಲಿ ದುರ್ಗಾ ಪೂಜೆ ವಿಶೇಷ ಪ್ರಸಿದ್ಧಿ ಪಡೆದಿದೆ. ಇಲ್ಲಿ ದುರ್ಗಾದೇವಿಯನ್ನ, ಸುಂದರಮೂರ್ತಿಗಳನ್ನ ಅಲಂಕರಿಸಿ ಭಕ್ತಿಗೀತೆಗಳು ನೃತ್ಯ ಸಂಗೀತ ಹೀಗೆ ಮುಂತಾದವುಗಳು ನಡೆಯುತ್ತವೆ. ಹಾಗೂ ಗುಜರಾತ್ ನಲ್ಲಿ ಗರ್ಭಾ ಮತ್ತು ದಾಂಡಿಯಾ ನೃತ್ಯಗಳು ಅತ್ಯಂತ ಜನಪ್ರಿಯ ಹಾಗೆಯೇ ಕರ್ನಾಟಕದಲ್ಲೂ ವಿಶೇಷವಾಗಿ ಮೈಸೂರು ದಸರಾ ಜಗದ್ವಿಖ್ಯಾತವಾಗಿದೆ. ಅಲಂಕೃತ ಆನೆಗಳ ಮೆರವಣಿಗೆ, ಜಂಬೂಸವಾರಿ,ಮೈಸೂರು ಅರಮನೆಯ ಅದ್ಭುತ ದೀಪಾಲಂಕಾರವು ಲಕ್ಷಾಂತರ ಜನರನ್ನು ಆಕರ್ಷಿಸುತ್ತದೆ. ಜೊತೆಗೆ ನಮ್ಮ ರಾಜ್ಯದಲ್ಲಿ ದಸರಾ ಉದ್ಘಾಟನೆ ಮಾಡಲು ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದ ಹಾಗೂ ಪ್ರಸಿದ್ಧಿ ಹೊಂದಿರುವಂತಹ ವ್ಯಕ್ತಿಯನ್ನು ಮುಖ್ಯ ಅತಿಥಿಯಾಗಿ ಸರ್ಕಾರವು ನೇಮಕ ಮಾಡುತ್ತದೆ.
ಈ ಹಬ್ಬವು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಅದು ಸಮಾಜವನ್ನು ಒಗ್ಗೂಡಿಸುವ ಒಂದು ಸಾಂಸ್ಕೃತಿಕ ಉತ್ಸವವೂ ಆಗಿದೆ. ಈ ಸಂದರ್ಭದಲ್ಲಿ ಜನರು ಹೊಸ ಬಟ್ಟೆಗಳನ್ನು ಧರಿಸಿ ಮನೆಗಳಲ್ಲಿ ಸಾಂಪ್ರದಾಯಿಕ ಆಹಾರಗಳನ್ನು ತಯಾರಿಸುತ್ತಾರೆ. ಸ್ನೇಹ ಸಂಬಂಧಗಳು ಗಟ್ಟಿಯಾಗುತ್ತವೆ, ಉಪವಾಸ ಜಪ - ಧ್ಯಾನಗಳಿಂದ ಮನಸ್ಸು ಶಾಂತಿಯಾಗುತ್ತದೆ.
ನವರಾತ್ರಿ ಹಬ್ಬವು ಭಕ್ತಿ, ಶಕ್ತಿ, ಮತ್ತು ಸಂಸ್ಕೃತಿಯ ಅದ್ಭುತ ಸಂಯೋಜನೆಯಾಗಿದೆ. ಇದು ನಮಗೆ ಧೈರ್ಯ ಶ್ರದ್ಧೆ ಮತ್ತು ಸತ್ಯದ ಮಾರ್ಗದಲ್ಲಿ ನಡೆಯುವ ಪ್ರೇರಣೆಯನ್ನು ನೀಡುತ್ತದೆ. ಹಾಗೂ ದುಷ್ಟರ ಮೇಲಿನ ದೈವ ಶಕ್ತಿ ಸದಾ ಜಯಶಾಲಿ ಎಂಬ ಸಂದೇಶವನ್ನು ಸಾರುತ್ತದೆ.
ವಿನಾಯಕ ಪಾಟೀಲ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ