*ಬೆಳಕಿನ ಸಿರಿ ದೀಪಾವಳಿ*
ಇನ್ನೇನು ದೀಪಾವಳಿ ಆಗಮಿಸಿಯೇ ಬಿಟ್ಟಿತು ಎಲ್ಲಾ ಕಡೆಗೂ ದೀಪಾವಳಿಯನ್ನು ಸ್ವಾಗತಿಸಲು ಭರ್ಜರಿ ಸಿದ್ಧತೆಯೇ ನಡೆಯುತ್ತದೆ ಎಂದರೆ ತಪ್ಪಾಗಲಾರದು. ಎಲ್ಲರಿಗೂ ಅಪಾರ ಖುಷಿಯ ಸವಿಯನ್ನು ಉಣಬಡಿಸುವ ಹಬ್ಬವಿದು. ಹೀಗಾಗಿ ಉತ್ಸಾಹ ಚೈತನ್ಯದ ದರ್ಶನ ಎಲ್ಲೆಲ್ಲೂ ಬಲು ಅದ್ಭುತ ಹದಿನೈದು ದಿನ ಇರುವಾಗಲೇ ತಯಾರಿ ಆರಂಭ ಪಡೆದಿರುತ್ತದೆ. ನಾನಾ ಯೋಚನೆಗಳು,ಯೋಜನೆಗಳು ಮನದ ಮೂಲೆಯಲ್ಲಿ ಬೆಳಕು ಚೆಲ್ಲಿ ಪ್ರಕಾಶಿಸಲಾರಂಭಿಸುತ್ತದೆ. ಪರಿಣಾಮ ಕಾಯಕದ ರೂಪದಲ್ಲೂ ಬೆರಕೆಯಾಗಿ ಬೆಳಕಿನ ಹಬ್ಬ ದೀಪಾವಳಿ ರಂಗು ಮಿಂಚಲು ಶುರುವಿರುತ್ತದೆ. ದೀಪಾವಳಿಯ ವಿಶೇಷವೆಂದರೆ ಬೆಳಕು ಎಲ್ಲಾ ಅಂಗಡಿ ಮುಂಗಟ್ಟುಗಳು ಸಹ ಬೆಳಕಿನಲ್ಲಿ ಅಲಂಕೃತಗೊಳ್ಳುತ್ತವೆ.
ಬೆಳಕು ತನ್ನ ಲೀಲೆಯನ್ನು ತೋರ್ಪಡಿಸಿ ಎಲ್ಲರ ಪ್ರೀತಿಗೆ ಭಾಜನವಾಗುತ್ತದೆ. ಎನ್ನುವುದಕ್ಕೆ ಚಂದದ ಉದಾಹರಣೆ ಎಂದರೆ ಅದು ಸಿಡಿಮದ್ದು ಪ್ರದರ್ಶನದ ಸಮಯ. ಆಗ ಬಾನಂಗಳದಲ್ಲಿ ಮೂಡುವ ಬಗೆ ಬಗೆಯ ಬೆಳಕಿನ ಚಿತ್ತಾರಕ್ಕೆ ಮರುಳಾಗದವರೇ ಇಲ್ಲ ಸಂತಸದ ಉದ್ಗಾರ ಕೆಕೆ ನಲಿವು ಎಲ್ಲವೂ ಬೆಳಕಿನಡಿಯಲ್ಲಿ ಮನೆ ಮಾಡುತ್ತದೆ ನಕ್ಷತ್ರ ಕಡ್ಡಿಯಲ್ಲಿ ಮೂಡುವ ಬೆಳಕಂತು ಚಿಕ್ಕ ಮಕ್ಕಳಲ್ಲಿ ಸಂಭ್ರಮ ತರುತ್ತದೆ ಆದರೆ ಸಿಡಿಮದ್ದುಗಳಲ್ಲಿ ಅಪಾಯಕಾರಿ ಎನಿಸಿದ್ದು ಬಳಸುವಾಗ ಎಚ್ಚರಿಕೆ ಬಲು ಅಗತ್ಯವಾಗಿರುತ್ತದೆ,ಇಲ್ಲವಾದಲ್ಲಿ ಖುಷಿ ಕೊಡುವ ಬೆಳಕೆ ಬಾಳಿನ ಬೆಳಕನ್ನು ಕಸಿಯುವ ಸಾಧ್ಯತೆಗಳು ಇರುತ್ತವೆ. ಜಾಗೃತೆ ಮತ್ತು ಜಾಣ್ಮೆ ಇದ್ದಲ್ಲಿ ಬೆಳಕಿನ ಸಂಪೂರ್ಣ ಮನರಂಜನೆಯ ಸ್ವಾದ ಹೀರಬಹುದು.
ಬೆಳಕಿನ ಬಗ್ಗೆ ಇಷ್ಟೆಲ್ಲಾ ಮಾತನಾಡುವಾಗ ಒಮ್ಮೆ ಇರುಳಿನಲ್ಲಿ ಬೆಳಕಿಲ್ಲದಿದ್ದರೆ ಹೇಗಿದ್ದಿತು ಎಂದು ಊಹಿಸಿಕೊಂಡರೆ ಆ ಕ್ಷಣ ಎಲ್ಲವೂ ಮೌನ, ಅಲ್ಲದೆ ಕತ್ತಲೆಯ ನಡುವೆ ಕಾಣುವುದಾದರೂ ಏನನ್ನು ಎಲ್ಲಾ ಕೆಲಸಕಾರ್ಯಗಳಿಗೆ ತೊಡಕು ಆಗ ಬಂಧನದ ಭೀತಿ ಕಾಣುತ್ತದೆ. ಭಯ ಎಲ್ಲೆಡೆ ಆವರಿಸುತ್ತದೆ ಕಳ್ಳ ಕಾಕರ ಕಾಟದ ಚಿಂತೆ ಕಾಡಲು ಶುರುವಾಗುತ್ತದೆ. ಮನೆಯಲ್ಲಿ ಅರೆಘಳಿಗೆ ವಿದ್ಯುತ್ ನಿಲುಗಡೆಗೊಂಡರೆ ಸಾಕು ಪರ್ಯಾಯ ವ್ಯವಸ್ಥೆ ಇಲ್ಲದಿದ್ದರೆ ಬೆಳಕಿನ ಮಹತ್ವದ ಅರಿವು ಆಗುತ್ತದೆ. ಆದ್ದರಿಂದ ಬೆಳಕು ಬದುಕಿನಲ್ಲಿ ಬಹಳ ಪ್ರಾಮುಖ್ಯತೆ ಪಡೆದಿದೆ ಹೀಗಿರುವಾಗ ಬೆಳಕಿನದೇ ಹಬ್ಬ ದೀಪಾವಳಿ ಎದುರಿಗಿದೆ ಎಂದರೆ ಕಮ್ಮಿಯೇ.
ಇನ್ನು ದೀಪಾವಳಿಯಂದು ಕೆಲವು ಊರುಗಳಲ್ಲಿ ಗೂಡು ದೀಪಗಳ ಅಲಂಕಾರವನ್ನು ಕಾಣುತ್ತೇವೆ. ಮನೆಯದ್ದು ಹೊರತುಪಡಿಸಿ ಸಂಘ ಸಂಸ್ಥೆಗಳು ಬೇರೆ ಬೇರೆ ವಿನ್ಯಾಸದ ಗೂಡು ದೀಪಗಳ ರಚನಾ ಸ್ಪರ್ಧೆಯನ್ನು ಏರ್ಪಡಿಸುತ್ತವೆ. ಎಲ್ಲಾ ಅಂಶಗಳು ದೀಪಾವಳಿ ಪ್ರಯುಕ್ತ ಅನಾವರಣಗೊಂಡು ಹಬ್ಬಕ್ಕೆ ಹೊಸ ಕಳೆಗಟ್ಟುವಂತೆ ಮಾಡುತ್ತದೆ.
ಇಲ್ಲಿ ಗಮನಾರ್ಹ ಅಂಶವೆಂದರೆ ದೀಪಗಳು ಕೇವಲ ಬೆಳಗಿ ಬೆಳಕು ಚೆಲ್ಲುವುದಕ್ಕಷ್ಟೇ ಸೀಮಿತವಾಗಿರದೆ ಅರ್ಥಪೂರ್ಣ ಸಾರವನ್ನು ಒಳಗೊಂಡು ಬದುಕಿನ ಮೌಲ್ಯವನ್ನು ಹೆಚ್ಚಿಸುವ ಸಂದೇಶವನ್ನು ಸಹ ನೀಡುತ್ತದೆ. ಅದೆಷ್ಟೋ ಸಂದರ್ಭದಲ್ಲಿ ಹಿರಿಯರು ಹಣತೆಯ ಉದಾಹರಣೆಯನ್ನಿತ್ತು ಜೀವನ ವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ಮನದಟ್ಟು ಮಾಡಿಕೊಡುತ್ತಾರೆ.
ವಿನಾಯಕಹೆಗಡೆ
ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ
ಶಿರಸಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ