ನಾಯಕತ್ವ - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಶನಿವಾರ, ನವೆಂಬರ್ 25, 2023

ನಾಯಕತ್ವ


         ನಾಯಕತ್ವ ಗುಣವು ಈ ಜಗತ್ತಿನಲ್ಲಿ ಕೆಲವೇ ಜನರು ಹೊಂದಿರುವ ವಿಶೇಷ ಗುಣ ಅಥವಾ ಕೌಶಲ್ಯವಾಗಿದೆ. ನಾಯಕತ್ವವು ಇತರಗಿಂತ ಮನುಷ್ಯನನ್ನು ವಿಶೇಷವಾಗಿಸುವ ಗುಣವಾಗಿದೆ. ಪ್ರತಿಯೊಬ್ಬಮನುಷ್ಯನಿಗೂ ನಾಯಕತ್ವದ ಕೌಶಲ್ಯ ಇರುವುದಿಲ್ಲ. ಒಬ್ಬ ನಾಯಕ ಸಮಾಜದಲ್ಲಿ ಅವನ್ನನ್ನು ಜನಪ್ರಿಯಗೊಳಿಸುವ ಅನೇಕ ಉತ್ತಮ ಕೌಶಲ್ಯ ಮತ್ತು ಗುಣಗಳನ್ನು ಹೊಂದಿದ್ದಾನೆ. ಉದ್ಯಮ ಆರಂಬಿಸಲು ಅಥವಾ ಸಂಸ್ಥೆಯನ್ನು ನಡೆಸಲು ಮನುಷ್ಯನಿಗೆ ನಾಯಕತ್ವದ ಗುಣಗಳು ಬೇಕಾಗಿತ್ತದೆ.

                ಉತ್ತಮ ನಾಯಕನಿಗೆ ಕೆಲವು ನಾಯಕತ್ವದ ಗುಣಗಳು ಇರಬೇಕು. ಒಳ್ಳೆಯ ನಾಯಕ ಯಾವಾಗಲೂ ಧ್ಯರ್ಯಶಾಲಿ, ಸಮಯಪ್ರಜ್ಞೆ, ಕಠಿಣ ಪರಿಶ್ರಮ, ನಿರ್ರ್ಗಳತೆ, ಬುದ್ದಿವಂತ ಮತ್ತು ಹೊಂದಿಕೊಳ್ಳುವ ಗುಣ ಇರಬೇಕು.

          ನಾಯಕನು ಸಮಾಜಕ್ಕೆ ಸ್ಫೂರ್ತಿದಾಯಕ ಪಾತ್ರವೆಂದು ಪರಿಗಣಿಸಲಾಗುತ್ತದೆ. ಒಬ್ಬ ನಾಯಕನು ಗುಂಪನ್ನು ಮೊನ್ನೆಡೆಸುವ ಗುಣವನ್ನು ಹೊಂದಿರುತ್ತಾನೆ. ಒಬ್ಬ ಯಶಸ್ವಿ ನಾಯಕನಾಗಲು ಒಬ್ಬ ವ್ಯಕ್ತಿಯು ಕೆಲವು ವಿಶೇಷ ಕೌಶಲ್ಯಗಳನ್ನು ಹೊಂದಿರಬೇಕು. ಅಂದರೆ ಒಳ್ಳೆಯ ವ್ಯಕಿತ್ವ, ಆತ್ಮ ವಿಶ್ವಾಸ, ಸ್ನೇಹಪರತೆ, ಶಿಕ್ಷಣ, ಸಮಸ್ಯೆ ಪರಿಹರಿಸುವ ಸಾಮರ್ಥ್ಯ, ಹಾರ್ಡ್ವರ್ಕಿಂಗ್ ಇರಬೇಕು. ನಾಯಕತ್ವದ ಶೈಲಿಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.

                  ನಾಯಕನಿಲ್ಲದೆ ಉತ್ತಮ ನಿರ್ವಹನೆಯನ್ನು ಕಲ್ಪಿಸಿಕೊಳ್ಳಲಾಗದು. ನಾಯಕತ್ವ ಮತ್ತು ನಿರ್ವಹಣೆ ಒಂದು ನಾಣ್ಯದ ಯರಡೂ ಮುಖಗಳಿಗೆ ಹೋಲಿಸಬಹುದಾದ ಪದಗಳಾಗಿವೆ. ಒಬ್ಬ ದಕ್ಷ ನಾಯಕ ತನ್ನ ನಾಯಕತ್ವದ ಗುಣಗಳಿಂದ ಕಂಪನಿಯನ್ನು ಉತ್ತಮ ಮಟ್ಟಕ್ಕೆ ಕೊಂಡೋಯ್ಯಬಹುದು.

                     ವಿದ್ಯಾರ್ಥಿಗಳು ಶಾಲಾ ದಿನಗಳಿಂದಲೇ ನಾಯಕತ್ವ ಕೌಶಲ್ಯವನ್ನು ಕಲಿಯಬೇಕು. ಒಬ್ಬ ಉತ್ತಮ ನಾಯಕನು ಯಾವಾಗಲು ತನ್ನ ಅನುಯಾಯಿಗಳನ್ನು ಪ್ರೆರೇಪಿಸುತ್ತಾನೆ. ಮತ್ತು ಅವರ ಗುರಿಗಳನ್ನು ಸಾದಿಸಲು ಅವರನ್ನು ಪ್ರೆರೇಪಿಸುತ್ತಾನೆ. ಅವರು ತಮ್ಮ ಗುಂಪಿನೊಂದಿಗೆ ಚರ್ಚೆ ನಡೆಸಲು ಉತ್ತಮ ಸೌವಹನ ಕೌಶಲ್ಯಗಳನ್ನು ಹೊಂದಿರಬೇಕು.

                      ಶ್ರೇಷ್ಠ ನಾಯಕರು ತಮ್ಮ ಗುಂಪನ್ನು ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡುತ್ತಾರೆ. ಅವರು ಸಾಮಾನ್ಯವಾಗಿ ತಮ್ಮ ತಂಡಕ್ಕೆ ಉತ್ತಮ ಸಂಘಟಿತ ಮತ್ತು ಸ್ವಯಂ ಶಿಸ್ತಿನ ಸದಸ್ಯರನ್ನು ಆಯ್ಕೆ ಮಾಡುತ್ತಾರೆ. ಒಬ್ಬ ನಾಯಕನಿಗೆ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಇರಬೇಕು.


         ಸೌಭಾಗ್ಯ ತಳವಾರ್

             ಎಂ ಎಂ ಮಹಾವಿದ್ಯಾಲಯ ಶಿರಸಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ