- ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಮಂಗಳವಾರ, ನವೆಂಬರ್ 28, 2023

 ಪ್ರಾಚೀನ ಅರೆಪ್ರಾಚೀನ ಹಾಗೂ ಆಧುನಿಕ ಇವುಗಳನ್ನು ಕೇವಲ ನಮ್ಮ ಅಧ್ಯಯನಕ್ಕೆ ಉಪಯುಕ್ತವಾಗುವಂತೆ ಮಾಡಿಕೊಂಡ ವಿಭಾಗಗಳು. ರಾಮಾಯಣ, ಮಹಾಭಾರತ, ಭರತಮುನಿ ಹಾಗೂ ಕ್ರಿಸ್ತಪೂರ್ವ ಇವೆಲ್ಲ ಪ್ರಾಚೀನವಾದದ್ದು. ಭಾರತದ ಭೂಪಟವನ್ನು ತೆರೆದು ನೋಡಿದರೆ ಕಾಲಕಾಲಕ್ಕೆ ಭೌಗೋಳಿಕ ಚಿತ್ರಣ ಬದಲಾಗುತ್ತಲಿದೆ. ಭಾರತೀಯ ರಂಗಭೂಮಿ ಉಗಮವಾದದ್ದು ಋಗ್ವೇದದಲ್ಲಿನ ಸಂವಾದ ಸೂಪ್ತಗಳಿಂದ. ಇವುಗಳಿಂದ ಪ್ರೇರಣೆಯನ್ನು ಪಡೆದ ಕಾಳಿದಾಸನು ನಾಟಕಗಳನ್ನು ರಚಿಸಲು ಸಾಧ್ಯವಾಯಿತು. ಅದಿತಿ, ಇಂದ್ರ ವಾಯುದೇವ ಇವುಗಳಲ್ಲದೆ, ಇನ್ನು ಅನೇಕ ಸಂವಾದ ಸೂಪ್ತಗಳು ನಮ್ಮ ರಂಗಭೂಮಿಯಲ್ಲಿ ಇದೆ. ಎಂದು ಕನ್ನಡದ ಖ್ಯಾತ ಸಾಹಿತಿಗಳಾದ ಪ್ರೊ, ಹೆಚ್ ಆರ್ ಅಮರನಾಥ ಹೇಳಿದರು.   

 ಅವರು ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಮತ್ತು ಸಕ್ಕರಿ  ಬಾಳಾಚಾರ್ಯ  ಶಾಂತಕವಿ ಟ್ರಸ್ಟ್ ಧಾರವಾಡ ಹಾಗೂ ಆಂತರಿಕ ಗುಣಮಟ್ಟದ ಭರವಸೆ ಕೋಶ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಆಧುನಿಕ ಕನ್ನಡ ರಂಗಭೂಮಿ ದಿನದ  ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಕೆಎಸ್ ನಾರಾಯಣ ಆಚಾರ್ಯ ರವರು ಮಹಾಭಾರತವು ಕ್ರಿ.ಪೂ ನಾಲ್ಕು ಸಾವಿರ ವರ್ಷದಷ್ಟು ಹಿಂದಿನದು ಎಂದು ಹೇಳಿದ್ದಾರೆ. ಅಂದಿನಿಂದಲೂ ಕೂಡ ನಮ್ಮ ಭಾರತಕ್ಕೆ ನಾಟಕದ ಬಗ್ಗೆ ತಿಳುವಳಿಕೆ ಇತ್ತು.

   ನಾಟಕವನ್ನು ಹಿಂದೆ ರೂಪಕವೆಂದು ಕರೆಯುತ್ತಿದ್ದರು.

          ಭರತನಿಗೆ ಪಿತ್ರವಿಯೋಗ ಸಂಭವಿಸಿದಾಗ ದುಸ್ವಪ್ನ ಕಂಡನು ಆತ ಇದರಿಂದ ಆಚೆ ಬರಲು ಹಾಗೂ ಸಮಯವನ್ನು ಕಳೆಯಲು ಸ್ನೇಹಿತರ ಜೊತೆ ನಾಟಕವನ್ನು ನೋಡಲು ಮೊರೆಹೋದ. ಮತ್ತು ರಾಮನು ವನವಾಸಕ್ಕೆ ಹೋಗುವಾಗ ಸೀತೆಯು ರಾಮನನ್ನು ಶೈಲುಗೆ ಹೋಲಿಸಿದಳು. ಶೈಲೂ ಅಂದಿನ ನಾಟಕ ನಟನಾಗಿದ್ದ. ಈ ರೀತಿಯಾಗಿ ರಾಮಾಯಣದಲ್ಲೂ ಕೂಡ ನಾಟಕದ ಬಗ್ಗೆ ಉಲ್ಲೇಖವಿದೆ. ಮೊದಲು ಬಯಲು ರಂಗಭೂಮಿ ಇದ್ದದ್ದು ನಂತರ ರಂಗ ಮಂಚದ ಆರಂಭವಾಯಿತು. 17ನೇ ಶತಮಾನದಲ್ಲಿ   ಷೇಕ್ಸ್ಪಿಯರ್ ನ ನಾಟಕಗಳಲ್ಲಿ ಇಂಗ್ಲೆಂಡ್ ಹಾಗೂ ಫ್ರಾನ್ಸ್ ನ ಮಹಿಳೆಯರು ನಾಟಕದಲ್ಲಿ ಬಣ್ಣ ಹಚ್ಚಲು ಆರಂಭಿಸಿದರು . ಆದರೆ ಅದಕ್ಕಿಂತ ಮುಂಚೆ ಪುರುಷರೇ ಮಹಿಳೆಯರ ಪಾತ್ರವನ್ನು ನಿರ್ವಹಿಸುತ್ತಿದ್ದರು. ಆದರೆ ಭರತನ ನಾಟ್ಯಶಾಸ್ತ್ರದಲ್ಲಿ ಆತ 24 ಮಹಿಳಾ ನಾಟಕಕಾರರನ್ನು ತನ್ನ ನಾಟಕಗಳಲ್ಲಿ ಪರಿಚಯಿಸಿದ್ದನು. ಸಿನಿಮಾ ಧಾರವಾಹಿಗಳನ್ನು ನಾವು ಕ್ಯಾಮರಾ ಕಣ್ಣಿನಿಂದ ನೋಡಿದರೆ ನಾಟಕಗಳನ್ನು ನಮ್ಮ ಸ್ವಂತ ಕಣ್ಣುಗಳಿಂದ ನೋಡುತ್ತೇವೆ. ಇದೆ ಸಿನಿಮಾ ಹಾಗೂ ನಾಟಕ ರಂಗಕ್ಕೆ ಇರುವ ವ್ಯತ್ಯಾಸ.

          ಗಾಂಧೀ ಜಯಂತಿಯ ದಿನ ಶಾಸ್ತ್ರಿಯವರ ಜಯಂತಿಯನ್ನು ಮರೆಯಬಾರದು ಸ್ವತಂತ್ರ್ಯ ದಿವಸದ ದಿನ ಅರವಿಂದ್ ರವರ ಜಯಂತಿಯನ್ನು ಮರೆಯಬಾರದು ಹಾಗೆ ನವೆಂಬರ್ 14 ಮಕ್ಕಳ ದಿನಾಚರಣೆಯಂದು ಸಕ್ಕರಿ ಬಾಳ ಚಾರ್ಯ ರವರು ಕನ್ನಡದ ಮೊದಲ ನಾಟಕ ಉಷಾಹರಣ ರಚಿಸಿದ್ದನ್ನು ಮರೆಯಬಾರದು. ಮಕ್ಕಳ ದಿನಾಚರಣೆ ಜೊತೆಗೆ ಸಕ್ಕರಿ ಬಾಳಾಚಾರ್ಯರವರನ್ನು ಕೂಡ ಸ್ಮರಿಸುವ ಕೆಲಸ ಆಗಬೇಕು ಎಂದರು.


     ಸಕ್ಕರಿ ಶಾಂತ ಕವಿಗಳ ಕುರಿತು ಉಪನ್ಯಾಸ ನೀಡಿದ  ಕನ್ನಡ ಉಪನ್ಯಾಸಕರಾದ ರಾಜು ಹೆಗಡೆ ರವರು ಮಾತನಾಡಿ  ಶಾಂತ ಕವಿಗಳು ದೊಡ್ಡ ವ್ಯಕ್ತಿತ್ವ ಹೊಂದಿದವರು. ಸಕ್ಕರಿ ಬಾಳಾಚಾರ್ಯರಿಗೆ ಸಕ್ಕರಿ ಎಂಬ ಹೆಸರು ಬಂದಿದ್ದು ಅವರ ಪೂರ್ವಜರಿಂದ. ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷವಾದ ಒಲವನ್ನು ಹೊಂದಿದರು. ಹಿಂದೆ ಗಡಿ ಪ್ರದೇಶಗಳಲ್ಲಿ ಮರಾಠಿ ಭಾಷೆ ಯನ್ನು ಮಾತನಾಡುವವರು  ಹೆಚ್ಚಾದಾಗ ಇವರು ಕನ್ನಡದಲ್ಲಿ ಅನೇಕ ಗ್ರಂಥಗಳನ್ನು , ಕೀರ್ತನೆಗಳನ್ನು ರಚನೆ ಮಾಡಿದರು. ಕನ್ನಡದ ಮೊದಲ ನಾಟಕವಾದ ಉಷಾಹರಣವನ್ನು ರಚಿಸಿ  ಕನ್ನಡ ನಾಟಕ ರಂಗಭೂಮಿಯ ಪಿತಾಮಹ ಎಂದು ಹೆಸರುವಾಸಿಯಾದರು. ಕನ್ನಡದ ಸಂತ ಕವಿಗಳೆಂದು ಹೆಸರಾಗಿದ್ದ ಸಂತ ಶಿಶುನಾಳ ಶರೀಫರಿಂದ ಹೊಗಳಿಕೆಯನ್ನು ಪಡೆದ ವ್ಯಕ್ತಿತ್ವ ಅವರದ್ದು ಎಂದು ಹೇಳಿದರು.

      ಪ್ರಾಚಾರ್ಯ ಡಾ ಟಿ ಎಸ್ ಹಳೆಮನೆ ಸ್ವಾಗತಿಸಿದರು. ಸಂಗೀತ ವಿಭಾಗ ಮುಖ್ಯಸ್ಥ


ಡಾ ಕೆ ಜಿ ಭಟ್ ವಂದಿಸಿದರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ