- ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಮಂಗಳವಾರ, ನವೆಂಬರ್ 28, 2023

"ದುಶ್ಚಟಗಳೆಂಬ ಬಲೆಗೆ ಸಿಲುಕದಿರಿ" ಅದೊಂದು ದಿನ, ನಮ್ಮನೆ ಚಾವಡಿಯಲ್ಲಿ ಕಿಟಕಿ ಪಕ್ಕ ಕೂತಿದ್ರೆ ಒಂದು ಜೇಡ ನಿಧಾನವಾಗಿ ನಾನು ಕುಳಿತ ಕುರ್ಚಿಗೂ ಗೋಡೆಗೂ ಮಧ್ಯೆ ಬಲೆ ನೆಯುವುದಕ್ಕೆ ಆರಂಭಿಸಿತ್ತು. ಜೇಡ ತನ್ನದೇ ಶರೀರದಿಂದ ಬರುವ ನೂಲಿನಲ್ಲಿ ಬಲೆ ನೇಯುವ ದೃಶ್ಯ ನಿಜವಾಗಿ ವಿಚಿತ್ರ ಅದರ ವಿನ್ಯಾಸ, ಬಲೆಯನ್ನು ಜೋಡಿಸುವ ಕ್ರಮ ನಿಜವಾಗಿ ಕುತೂಹಲಕಾರಿ. ಜೇಡ ಬಲೆ ನೇಯುತ್ತಾ ಇದ್ರೆ ನಾನು ಸುಮ್ಮನೆ ನೋಡುತ್ತಾ ಕುಳಿತಿದ್ದೆ. ಯಾಕಂದ್ರೆ ನನಗೆ ಗೊತ್ತು ಬೇಡವಾದಾಗ ನಾನು ಈ ಬಲೆಯನ್ನು ಹಾಳು ಮಾಡಿವೆ ಎಂದು ಬದಲಾಗಿ ಜೇಡ ಗಟ್ಟಿಯಾಗಿ ಬಲೆ ನೇಯೋದಾಗಿದೆ ಬಲೆ ನೇಯುತ್ತಿದ್ದಂತೆಯೇ ಅದನ್ನು ಕಿತ್ತೆಸೆಯುವ ಪ್ರಯತ್ನ ಮಾಡ್ತಾ ಇದ್ದೆವು ಮಾತ್ರವಲ್ಲ, ಜೇಡ ಮನೆಯೊಳಗೆ ಸೇರದಂತೆ ಎಲ್ಲಾ ರೀತಿಯ ಮುಂಜಾಗ್ರತೆ ವಹಿಸ್ತಾ ಇದ್ದೆವು. ಈ ದುರಭ್ಯಾಸ, ದುಶ್ಚಟಗಳೂ ಹಾಗೆಯೇ ಅವೆಲ್ಲಾ ಮೊದಲು ಜೇಡರ ಬಲೆಯಂತೆ ಬಲೆಯೊಳಗೆ ನಮ್ಮನ್ನು ಹಗುರಾಗಿ ಬಂಧಿಸುತ್ತವೆ. ಇದೇನು ಬೇಕಾದಾಗ ಬಿಡಿಸಿಕೊಳ್ಳಬಹುದು ಎಂದು ನಾವು ಯೋಚಿಸುತ್ತೇವೆ. ಆದರೆ ಕಾಲಕ್ರಮೇಣ ಅವುಗಳೇ ಕಬ್ಬಿಣದ ಸರಳುಗಳಾಗಿ ನಮ್ಮನ್ನು ಬಂಧಿಸುತ್ತವೆ, ಮಾತ್ರವಲ್ಲ ಅದರ ಬಿಗಿತ ಪ್ರಾಣಕ್ಕೆ ಸಂಚಕಾರವನ್ನೂ ತರುತ್ತದೆ. ಈ ಬಂಧನದಿಂದ ಬಿಡಿಸಿಕೊಳ್ಳುವ ಮನಸ್ಸು ಇದ್ದರೂ ಬಿಡಿಸಿಕೊಳ್ಳುವುದು ಮಾತ್ರ ಅಷ್ಟು ಸುಲಭವಾಗುವುದಿಲ್ಲ. ಬೀಡಿ, ಸಿಗರೇಟು, ನಶ್ಯ, ಎಲೆ ಅಡಿಕೆ, ಸಾರಾಯಿ ಯಾವುದೇ ದುರಭ್ಯಾಸವಿರಲಿ ಅದು ಸಾಂಕ್ರಾಮಿಕ ರೋಗದಂತೆ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಮನೆಯಲ್ಲಿ, ಗದ್ದೆ- ತೋಟದಲ್ಲಿ, ಪೇಟೆಯಲ್ಲಿ ಇಂಥಾ ಅಭ್ಯಾಸದವರಿದ್ದರೆ ನಮಗೆ ಗೊತ್ತಿಲ್ಲದಂತೆ ನಮಗೂ ಈ ದುರಭ್ಯಾಸಗಳನ್ನು ಅಂಟಿಸಿಬಿಡುತ್ತಾರೆ. ಒಬ್ಬ ಬೀಡಿ ಎಳೀತಾ ಇದ್ದಾಗ ಮತ್ತೊಬ್ಬ ಹತ್ತಿರ ಬಂದರೆ ಸಾಕು ಬೀಡಿ ಎಳೀತೀಯಾ ಅಂತ, ಎಲೆ ಅಡಿಕೆ ತಿಂತಾ ಇದ್ರೆ ಎಲೆ ಅಡಿಕೆ ತಿಂತೀಯಾ ಅಂತ ತಮ್ಮ ಉದಾರತನವನ್ನು ಪ್ರದರ್ಶಿಸುತ್ತಾರೆ. ನಾವೇನಾದರೂ ಈ ಉದಾರತನಕ್ಕೆ ಸೋತು, ಬಿಟ್ಟಿಯಾಗಿ ಸಿಗುತ್ತದೆ ಎಂದು ಬೀಡಿ ಸಿಗರೇಟು ಸೇವನೆಗೆ ಕೈ ಜೋಡಿಸಿದೆವೋ ಆ ಚಟ ನಮಗೆ ಅಂಟಿಕೊಂಡೇ ಬಿಡುತ್ತದೆ. ನಮ್ಮ ಜೀವನ ಮತ್ತು ಶರೀರದ ಮೇಲೆ ಅವು ದುಷ್ಪರಿಣಾಮ ಬೀರುತ್ತವೆ ಎಂಬುದರ ಆಲೋಚನೆ ನಮ್ಮಲ್ಲಿರುವುದಿಲ್ಲ. ಈ ಬದುಕು ದೇವರು ಕೊಟ್ಟ ವರ. ನಾವು ಹೇಗೆ ಬದುಕು ತ್ತೇವೆ ಅನ್ನುವುದೇ ನಾವು ಆತನಿಗೆ ಸಲ್ಲಿಸಬಹುದಾದ ಪೂಜೆಯಂತೆ ಆದರೆ ನಾವು ದುಶ್ಚಟಗಳಿಗೆ ಬಲಿ ಬಿದ್ದಲ್ಲಿ ನಮ್ಮ ಬದುಕನ್ನು, ಜೊತೆಗೆ ಶರೀರ, ಆಸ್ತಿ-ಪಾಸ್ತಿ, ಬಂಧು ಬಳಗವನ್ನು ನಾವೇ ಕಳಕೊಳ್ಳುತ್ತೇವೆ. ಕೆಲವೊಂದು ದುಶ್ಚಟಗಳು ಒಮ್ಮೆ ಅಂಟಿಕೊಂಡ್ರೆ ಬಿಡೋದು ಬಹಳ ಕಷ್ಟ ಹೌದು ಆದರೆ ಈ ಚಟಗಳಿಂದಾಗಿ ನಮ್ಮ ಬದುಕಿನ ಮೇಲಾಗುವ ಕಷ್ಟನಷ್ಟಗಳನ್ನು ಸರಿಯಾಗಿ ಲೆಕ್ಕ ಹಾಕಿದ್ದೇ ಆದರೆ ಅದು ಕಷ್ಟವೇ ಅಲ್ಲ ಎಂಬುದು ಮನದಟ್ಟಾಗುತ್ತದೆ ಅಮಲು ವ್ಯಸನಿ ಮದ್ಯಸೇವಿಸಿರುವಾಗ ಪ್ರಾಣಿಯಂತೆ ವರ್ತಿಸಿದರೂ ನಶೆ ಇಳಿದಾಗ ತನ್ನ ಮೇಲೆ ತಾನೇ ಪಶ್ಚಾತ್ತಾಪ ಪಟ್ಟುಕೊಳ್ಳುತ್ತಾನೆ. ತನ್ನ ಬಗ್ಗೆ ತಾನೇ ಜಿಗುಪ್ಪೆ ಹೊಂದುತ್ತಾನೆ. ಆದರೆ ಈ ಕೀಳು ಭಾವನೆಯ ದುಃಖ ನೀಗಿಸಲು ಪುನಃ ಮಾದಕ ಸೇವಿಸುತ್ತಾನೆ. ಹೀಗೆ ತನ್ನವರಿಂದ, ಸಮಾಜದ ದೃಷ್ಟಿಯಿಂದ ಮಾತ್ರವಲ್ಲ ತನ್ನ ದೃಷ್ಟಿಯಲ್ಲೇ ಕೆಳಗೆ ಬೀಳುತ್ತಾನೆ. ಮನೆಯ ಉಪಯೋಗಕ್ಕೆ ಒಂದು ಮಿಕ್ಸಿಯೋ, ಫ್ರಿಡ್ಜ್ ಅಥವಾ ಯಾವುದೇ ಯಂತ್ರೋಪಕರಣ ತಗೋಬೇಕಾದ್ರೆ ಅಂಗಡಿಯವರು ಅದರ ಜೊತೆ ಒಂದು ಕೈಪಿಡಿ ಇಟ್ಟಿದ್ದಾರೆ. ಈ ವಸ್ತುವನ್ನು ಯಾವ ರೀತಿ ಉಪಯೋಗ ಮಾಡೋಕು ಇತ್ಯಾದಿ ವಿವರಗಳಿರುತ್ತವೆ. ಇಷ್ಟೆಲ್ಲಾ ಮಾಹಿತಿಗಳ ಜೊತೆಗೆ 1 ವರ್ಷದ ಗ್ಯಾರಂಟಿ ಕೂಡಾ ನೀಡಿರಬೇಕಾದರೆ ದೇವರು ನಮಗೆ ಕೊಟ್ಟಿರುವ ಇಂತಹ ಉತ್ತಮವಾದ ದೇಹ ಸಂಪತ್ತನ್ನು ಹೇಗೆ ಉಪಯೋಗಿಸಿ ಕೊಳ್ಳಬೇಕು ಹಾಗೂ ಆರೋಗ್ಯವಂತರಾಗಿ ದೀರ್ಘಾಯುಷ್ಯದಿಂದ 100 ವರ್ಷ ಬಾಳಬೇಕೆಂಬುದನ್ನು ಅರಿತುಕೊಳ್ಳಲು ದೇವರು ನಮಗೆ ಬುದ್ಧಿಯನ್ನು ನೀಡಿದ್ದಾನೆ. ದೇಹ ಕ್ಕೇ ಅಲ್ಪಸ್ವಲ್ಪ ವ್ಯತ್ಯಾಸಗಳು ಆದಾಗ ಅದು ತನ್ನನ್ನು ತಾನೇ ಸುಧಾರಿಸಿಕೊಳ್ಳುತ್ತದೆ. ಆದರೆ ಈ ಬುದ್ಧಿ ವಿವೇಕವನ್ನು ಬದಿಗಿಟ್ಟು ಬರೀ ದುಶ್ಚಟದ ದಾಸರಾದಾಗ ದೇವರು ನೀಡಿದ ದೇಹ ರೋಗದ ಗೂಡಾಗುತ್ತದೆ. ಮುಖ್ಯವಾಗಿ ಮನೆಯ ಮಹಿಳೆಯರು ಎಳೆಯ ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಅವರು ದಾರಿತಪ್ಪದಂತೆ, ಇಂಥ ದುಶ್ಚಟಗಳಿಗೆ ಬಲಿ ಬೀಳದಂತೆ ಮುಂಜಾಗ್ರತೆ ವಹಿಸಬೇಕು. ಒಂದು ವೇಳೆ ಇಂಥ ದುಶ್ಚಟಗಳೆಡೆಗೆ ಮಕ್ಕಳು ವಾಲಿದ್ದಾರೆ ಎಂದಾದರೆ ಎಳವೆಯಲ್ಲೇ ಅದನ್ನು ತಡೆಯೋ ಪ್ರಯ್ನ ಮಾಡಬೇಕು. ಮನೆ, ಮನಸ್ಸು ಕೆಡುವುದು ಅತಿ ಸುಲಭ. ಆದರೆ ಅದನ್ನು ಪುನಃ ಸರಿಪಡಿಸುವುದು ಬಲು ಕಠಿಣ. ಇದೂ ಹಾಗೆ, ದುಶ್ಚಟಗಳಿಗೆ ಬಲಿಯಾಗುವುದು ಸುಲಭ. ಆದರೆ ಅದರಿಂದ ಹೊರಬರುವುದು ಅತಿ ಕಷ್ಟವೆಂಬ ಸತ್ಯಾಂಶ ಎಲ್ಲರೂ ಮನಗಾಣಬೇಕು. - ಸನಾತನ ಎಸ್ ಜಿ. - ಎಂ. ಎಂ. ಕಲಾ ಮತ್ತು ವಿಜ್ಞಾನ ಕಾಲೇಜ್ ಶಿರಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ