- ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಶುಕ್ರವಾರ, ಆಗಸ್ಟ್ 21, 2026

 ನಾಗರ ಪಂಚಮಿ.                            

  ನಾಗರ ಪಂಚಮಿ ಹಬ್ಬವು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ಈ ಹಬ್ಬವು ಹಿಂದೂಗಳ ಹಬ್ಬವಾಗಿದೆ.ಈ ಹಬ್ಬದಂದು‌ ಹಾವುಗಳಿಗೆ ಹಾಗೂ ಹುತ್ತಗಳಿಗೆ ಹಾಲೆರೆದು ಪೂಜೆಯನ್ನು ಸಲ್ಲಿಸಲಾಗುತ್ತದೆ.                       

      ಪಂಚಮಿ ಹಬ್ಬವು ಪ್ರಕೃತಿ ಹಾಗೂ ಜೀವ ಜಂತುಗಳ ಬಗ್ಗೆ ಗೌರವ ಬೆಳೆಸುವ ಸಂದೇಶ ನೀಡುತ್ತದೆ. ರೈತರು ಹಾಗೂ ಗ್ರಾಮೀಣ ಜನರಿಗೆ ಈ ಹಬ್ಬ ವಿಶೇಷ ಮಹತ್ವವನ್ನು ಹೊಂದಿದೆ. ನಾಗರ ಪಂಚಮಿಯು ನಮ್ಮ ಸಂಪ್ರದಾಯ, ಸಂಸ್ಕೃತಿ ಮತ್ತು ಪ್ರಕೃತಿಯೊಂದಿಗೆ ಸಂಬಂಧವನ್ನು ಹೊಂದಿದೆ. ಪಂಚಮಿ ಹಬ್ಬವು ಅಣ್ಣ- ತಂಗಿಯರ ಹಬ್ಬವಾಗಿದೆ. ಈ ಹಬ್ಬದಲ್ಲಿ ಹೆಣ್ಣುಮಕ್ಕಳು ತಮ್ಮ ಸಹೋದರರಿಗೆ ರಕ್ಷಣೆಗಾಗಿ ಮತ್ತು ಯೋಗಕ್ಷೇಮಕ್ಕಾಗಿ ನಾಗ ದೇವತೆಗೆ ಪೂಜೆ ಮಾಡುತ್ತಾರೆ ಮತ್ತು ಈ ಹಬ್ಬದಂದು ಹೆಣ್ಣು ಮಕ್ಕಳು ಜೋಕಾಲಿ ಹಾಗೂ ಮದರಂಗಿಯನ್ನು ಹಚ್ಚಿಕೊಂಡು ಸಂಭ್ರಮ ಪಡುತ್ತಾರೆ.                          ನಾಗರ ಪಂಚಮಿಯಂದು ಮನೆಯನ್ನು ಸ್ವಚ್ಛಗೊಳಿಸಿ,ನಾಗ ದೇವರ ಕಲ್ಲು ಅಥವಾ ಹುತ್ತಕ್ಕೆ ಹಾಲೆರೆದು ಅರಿಶಿನ ಕುಂಕುಮ, ಹೂವುಗಳನ್ನು ಅರ್ಪಿಸಿ ಪೂಜೆ ಮಾಡುತ್ತಾರೆ. ನಾಗರ ಪಂಚಮಿ ಹಬ್ಬವನ್ನು ಕುಟುಂಬದ ಸುಖ, ಶಾಂತಿ, ನೆಮ್ಮದಿ ಮತ್ತು ಸಮೃದ್ಧಿಯನ್ನು ಹಾಗೂ ಪ್ರಕೃತಿಯ ಸಂರಕ್ಷಣೆಗಾಗಿ ಕೃಷಿಗೆ ಸಂಬಂಧಿಸಿದ ತೋಟಗದ್ದೆಗಳ ರಕ್ಷಣೆಗಾಗಿ ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಸರ್ಪದೋಷ ನಿವಾರಣೆಗಾಗಿ ಸುಬ್ರಹ್ಮಣ್ಯ ಸ್ವಾಮಿಯ ಕ್ಷೇತ್ರಕ್ಕೆ ಪೂಜೆ ಮಾಡಿ ದೋಷ ನಿವಾರಣೆ ಮಾಡಿಕೊಳ್ಳುತ್ತಾರೆ. ಸುಬ್ರಹ್ಮಣ್ಯ ದೇವರಿಗೆ ಪೂಜೆ ಸಲ್ಲಿಸುವುದರಂದ ಯಾವುದೇ ಸರ್ಪದೋಷ ಇರುವುದಿಲ್ಲ.  ಈ ಹಬ್ಬದಲ್ಲಿ ನಾಗ ದೇವರ ನೈವೇದ್ಯಕ್ಕಾಗಿ ಪಾಯಸ , ಕಾಯಕಡಬು , ಒಬ್ಬಟ್ಟು, ಎಳ್ಳುಂಡೆ ಹೀಗೆ ಮುಂತಾದ ತಿನಿಸುಗಳನ್ನು ಮಾಡುತ್ತಾರೆ. ಹೀಗೆ ನಾಗರ ಪಂಚಮಿಯು ನಮ್ಮ ಹಬ್ಬಗಳಲ್ಲಿ ಸಾಂಪ್ರದಾಯಿಕ ಹಬ್ಬವಾಗಿದೆ.           

         ಹರ್ಷಿತಾ ಗೌಡ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ