ನಗರನೈರ್ಮಲ್ಯಕಾಪಾಡುವಲ್ಲಿ ನಾಗರೀಕರಪಾತ್ರ - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಶನಿವಾರ, ಜುಲೈ 9, 2022

ನಗರನೈರ್ಮಲ್ಯಕಾಪಾಡುವಲ್ಲಿ ನಾಗರೀಕರಪಾತ್ರ

 -  ಸುಮಾ  ಬಡಿಗೇರ್



                                                                

          ಮನುಷ್ಯ  ಅರೋಗ್ಯಕರವಾಗಿರಬೇಕಾದರೆ  ಅವನು ವಾಸಿಸುವ ಪ್ರದೇಶವು ಶುದ್ದ ಮತ್ತು ರೋಗಮುಕ್ತವಾಗಿರಬೇಕಾದದು ಅತ್ಯಗತ್ಯ. ಹಾಗಾಗಿ ನಮ್ಮ ನಗರ ಗಳು ನಿರ್ಮಲವಾಗಿರಬೇಕು.ನಗರದ ನೈರ್ಮಲ್ಯವನು ಜವಬ್ದಾರಿ  ಕೇವಲ  ಪುರಸಭೇ ,ನಗರಸಭೇ or ಮಹಾನಗರಪಾಲಿಕೆಯ ಅಧಿಕಾರಿಗಳು ಮಾತ್ರ  ಅಲ್ಲ ಅವರಷ್ಟ ಹೊಣೆಗಾರಿಕೆ ಆಯಾ ಪ್ರದೇಶಗಳಲ್ಲಿ ವಾಸಿಸುವ ನಾಗರೀಕರ  ಮೇಲೆಯು ಇರುತ್ತದೆ ಎನುವುದನ್ನು ಪ್ರತಿಯೊಬ್ಬ ನಾಗರೀಕನು ಮರೆಯುವಂತಿಲ್ಲ.
    
         ತ್ಯಾಜ್ಯ ವಸ್ತುಗಳನ್ನು ನಾಗರೀಕರು ಎಲ್ಲೆಂದರಲ್ಲಿ ಎಸೆಯುವುದರಿಂದ ಅದನ್ನು ಸಂಗ್ರಹಿಸುವುದು ಪಾಲಿಕೆಯ ನೌಕರರಿಗೆ  ಕಷ್ಟವಾಗುತ್ತದೆ. ಇದರಿಂದಾಗಿ ಎಲ್ಲ ಕಡೆಗಳಲ್ಲೂ ಕಸದ  ಗುಡ್ಡೆ ಬೆಳೆದು ರೋಗಗಳು ಹರಡಲು ಕಾರಣವಾಗುತ್ತದೆ. ಆದ್ದರಿಂದ  ನಾಗರೀಕರು ಕಸವನ್ನು ಎಲ್ಲೆಂದರಲ್ಲಿ  ಬಿಸಾಡುವ ಬದಲು ಅದನ್ನು ಬೇರೆ ಬೇರೆ ಗುಂಪುಗಳಾಗಿ ವಿಂಗಡಿಸಿ ಕಸ ಸಂಗ್ರಹಿಸುವ ಗಾಡಿಗೆ ನೀಡಬೇಕು.ಇದರಿಂದ ನಮ್ಮ ನಗರದ  ನೈರ್ಮಲ್ಯ ಹೆಚ್ಚಿಸಲು ಸಾದ್ಯವಾಗುತ್ತದ. ನಗರ ಪ್ರದೇಶದಲ್ಲಿ  ಕಟ್ಟಡ  ನವೀಕರಣ ಮತ್ತು ನಿರ್ಮಾಣದ  ಕಾರ್ಯ ನಿರಂತರವಾಗಿ ನಡೆಯುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ  ಕಲ್ಲು, ಮರಳು,ಜಲ್ಲಿ ಮುಂತಾದ ವಸ್ತುಗಳನ್ನು ರಸ್ತೆ or ಪುಟಬಾತ್  ಗಳ ಮೇಲೆ ರಾಶಿ ಹಾಕಿರುತ್ತಾರೆ. ಇವೆಲ್ಲವು ರಸ್ತೆ ಬದಿಯ ಚರಂಡಿಗೆ ಬೀಳುವುದರಿಂದ  ಕೊಳಚೆ ನೀರು ಹರಿದು ಹೋಗಲು ತೊಂದರೆಯಾಗುತ್ತದೆ. ಇದೇ  ರೀತಿ  ಚರಂಡಿ,ರಾಜ ಕಾಲುವೆ ಎಲ್ಲವನ್ನು ಆಕ್ರಮಿಸಿಕೊಂಡು ಕಟ್ಟಡವನ್ನು ಕಟ್ಟಿದರೆ ಕೊಳಚೆ ನೀರು ಹರಿದು ಹೋಗಲು ಸಾಧ್ಯವಾಗುವುದಿಲ್ಲ .ಆಗ ನಗರ ಪ್ರದೇಶ ಇನ್ನಷ್ಟುಕಲುಷಿತಗೊಳ್ಳುತ್ತದೆ.ಆದ್ದರಿಂದ  ಚರಂಡಿ ಮತ್ತು  ರಾಜಕಾಲುವೆಗಳು ಅಡೆತಡೆಯಿಲ್ಲದಂತೆ  ನೋಡಿಕೊಳ್ಳಬೇಕಿರುವುದು ನಾಗರೀಕರ ಕರ್ತವ್ಯವಾಗಿದೆ.       
        
        ನಗರಗಳಲ್ಲಿ ಆರೋಗ್ಯಕರವಾದ ವಾತಾವರಣವಿರಬೇಕಾದರೆ ಶುದ್ದವಾದ ಗಾಳಿ ಮತ್ತು  ಬೆಳಕಿನ ಸಂಚಾರ ಇರಬೇಕು .ಹೀಗಾಗಬೇಕಾದಲ್ಲಿ ಕಟ್ಟಡಗಳ ನಡುವೆ ಸಾಕಷ್ಟು ಅಂತರವಿರಬೇಕಾದ್ದು ಮುಖ್ಯ . ಆದರೆ  ಇತ್ತೀಚೆಗೆ  ನಗರ ಪ್ರದೇಶದಲ್ಲಿ  ಸರ್ಕಾರದ  ನೀತಿನಿಯಮಗಳನ್ನು ಉಲ್ಲಂಘಿಸಿ ಗಾಳಿ ಬೆಳಕುಗಳ ಸಂಚಾರಕ್ಕೆ ಅವಕಾಶವೇ  ಇಲ್ಲದಂತೆ ಒತ್ತೊತ್ತಾಗಿ  ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ಅಲ್ಲದೆ ಉದ್ಯಾನವನ , ಕ್ರೀಡಾಂಗಣ,ಕೆರೆ ಬಯಲು ಮುಂತಾದ ಪ್ರದೇಶವನ್ನು  ಆಕ್ರಮಿಸಿ ಕಟ್ಟಡವನ್ನು  ಎಲ್ಲೆಂದರಲ್ಲಿ  ನಿರ್ಮಿಸುವ ಪದ್ದತಿ ರೂಡಿಯಾಗಿದೆ. ಇದರಿಂದಾಗಿ ನಗರ  ನೈರ್ಮಲ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಹೊಡೆತವುಂಟಾಗುತ್ತಿದೆ.   

         ಒಟ್ಟಾರೆಯಾಗಿ ನಗರ  ನೈರ್ಮಲ್ಯ ಕಾಪಾಡುವಲ್ಲಿ  ನಾಗರೀಕರ  ಪಾತ್ರ   ತುಂಬಾ ಮಹತ್ವವುಳ್ಳದಾಗಿದೆ. ಪ್ರತಿಯೊಬ್ಬ ನಾಗರೀಕರನ್ನು  ತನ್ನ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಡಬೇಕು. ಕೇವಲ  ತಾನು ತನ್ನ ಕುಟುಂಬ ಎನ್ನದೇ ಪ್ರತಿಯೊಂದು ಜೀವರಾಶಿಗಳ  ಕುರಿತು ಯೋಚನೆ  ಮಾಡಬೇಕು   ಆಗ ಮಾತ್ರ ನಗರದ  ನೈರ್ಮಲ್ಯ ಕಾಪಾಡುಲು ಸಾಧ್ಯಾವಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ