ಧರೆಯೊಳು ಜನನ,ಅನುಭವಿಸು ನಿನ್ನತನ.... - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಭಾನುವಾರ, ಜುಲೈ 10, 2022

ಧರೆಯೊಳು ಜನನ,ಅನುಭವಿಸು ನಿನ್ನತನ....

   

 ಚಂದರಶೇಖರ. ಎಂ. 



                                                                                          

ಸುಂದರ ಸೃಷ್ಟಿ ಈ ಧರಣಿ. ಅದರೊಳು ಸಿಕ್ಕಿಹುದು ಧರಣಿ ನೋಡುವ, ಅನುಭವಿಸುವ ಭಾಗ್ಯ. ಮನುಜ ತನ್ನ ಎಲ್ಲಾ ಚಟವಟಿಕೆಗಳನ್ನು ನಡೆಸುವ ಗೂಡು, ವೈವಿಧ್ಯಮಯ ವಲಯಗಳಿಂದ ಕೂಡಿರುವ ಈ ಧರೆಯೊಳು ಮನುಜ ತನ್ನಿಷ್ಟದಂತೆ ಬದುಕದಿದ್ದರೆ ತಾ ಹುಟ್ಟಿಯೂ ವ್ಯರ್ಥ. (ತನ್ನಿಷ್ಟದಂತೆ ಅಂದರೆ ಸಮಾಜದ ಕೆಲವು ನೀತಿ ನಿಯಮಗಳಿಗೆ ಗೌರವ ನೀಡುವುದನ್ನು ಒಳಗೊಂಡು). ಧರೆಯೊಳು ಜನಿಸಿದವ ತನ್ನತನವನ್ನು ಸಾಧಿಸಿಯೇ ತೀರಬೇಕು.

ಈ ನಿನ್ನತನಕೆ ಅಡಿಪಾಯ ಹಾಕುವುದು ನಿನ್ನ ಆತ್ಮಬಲ ಹಾಗು ಸಾಧಿಸಿಯೇ ತೀರುವೆ ಎಂಬ ಛಲ. ಪ್ರತಿಯೊಬ್ಬನಿಗೂ ಈ ಧರೆಯಲ್ಲಿ ಆಯ್ಕೆಯ ಅವಕಾಶವಿದೆ. ಈ ನಿಟ್ಟಿನಲ್ಲಿ ಆತ ತನ್ನ ಜೀವನದ ಸುಂದರ ಕ್ಷಣಗಳಿಗೆ ಆದರದ ಸ್ವಾಗತ ನೀಡಬಹುದು.ಮನುಷ್ಯ ತಾ ಹುಟ್ಟಿ ದೊಡ್ಡವನಾಗಿ ತನ್ನ ವ್ಯಕ್ತಿತ್ವ ರೂಪಿಸಿಕೊಂಡು ಸಮಾಜದಲ್ಲಿ ಬಾಳ್ವೆ ನಡೆಸುವವರೆಗೂ ತನ್ನತನವೆಂಬುದು ಬಹುಮುಖ್ಯ ಪಾತ್ರ ವಹಿಸುತ್ತದೆ. ಈ ನಿನ್ನತನವೆಂಬುದು ಮತ್ತೇನಲ್ಲ ನಿನ್ನ ಆಯ್ಕೆ ಹಾಗೂ ನಿರ್ದಿಷ್ಟ ಗುರಿಯೊಂದಿಗೆ ನೀ ನಡೆವ ದಾರಿ.  ನೀ ಪಡೆವ ವಿದ್ಯೆಯಿಂದ ಹಿಡಿದು ನೀ ಗಳಿಸುವ ಯಶಸ್ಸಿನವರೆಗೆ ನಿನ್ನತನ ಕಾಣದ ಕೈ ಅಂತೆ ಕೆಲಸ ಮಾಡುತ್ತದೆ.

        ಮನುಷ್ಯ ಹುಟ್ಟಿ ತನಗೆ ಬುದ್ಧಿ ಬಂದಾಗಿನಿಂದ ತನ್ನದೇ ಆದ ಜೀವನಶೈಲಿಯಲ್ಲಿ ಬದುಕಲು ಇಷ್ಟಪಡುತ್ತಾನೆ. ಆದರೆ ಮನೆಯ ವಾತಾವರಣ, ಕಟ್ಟುನಿಟ್ಟಾದ ಆಜ್ಞೆ ಮುಂತಾದವುಗಳು ಆತನಿಗೆ ತಾನು ಅಂದುಕೊಂಡ ಹಾಗೆ ಬದುಕಲು ಬಿಡುವುದಿಲ್ಲ. ಮನೆಯವರ ಒತ್ತಾಯಕ್ಕೆ ತನಗಿಷ್ಟವಿಲ್ಲದ ವಿಷಯಗಳನ್ನು ಓದಿ ಅದರಲ್ಲಿ ವಿಫಲವಾದ ಉದಾಹರಣೆಗಳು ಅದೆಷ್ಟೋ ಇವೆ. ಹೀಗೆ ಪರಿಸ್ಥಿತಿ ಮನುಷ್ಯನಿಗೆ ತನ್ನತನವನ್ನು ಅನುಭವಿಸುವಲ್ಲಿ ಕಾಲೆಳೆಯುತ್ತಿದೆ.

      ತನ್ನ ಇಷ್ಟದ ಆಯ್ಕೆಯನ್ನು ಪಡೆದು ಓದುವಲ್ಲಿ ವಿಫಲವಾಗಿ ಮನೆಯವರ ಒತ್ತಾಯಕ್ಕೆ ಮಣಿದು ಕೊನೆಗೆ ಅದರಲ್ಲಿ ಯಶಸ್ಸು ಸಿಗದೆ ಜೀವವನ್ನೇ ತೆಗೆದುಕೊಳ್ಳುವ ಅದೆಷ್ಟೊ ಉದಾಹರಣೆಗಳು ಕಾಣಸಿಗುತ್ತವೆ. ಈ ನಿಟ್ಟಿನಲ್ಲಿ ಮನೆಯವರೂ ಕೊಂಚ ಗಮನಹರಿಸಿದರೆ ತಮ್ಮ ಮಕ್ಕಳ ಜೀವ ಉಳಿಸಿಕೊಳ್ಳುವುದರ ಜೊತೆ ಅವರ ಬದುಕನ್ನು ಹಸನಾಗಿಸಬಹುದು.

    ಧರೆಯ ಸೊಬಗನ್ನು ಅನುಭವಿಸಿ ಮನುಷ್ಯ ತನ್ನತನವನ್ನು ಮೆರೆಯಬೇಕಾದರೆ ಕೊಂಚ ಆತ್ಮಬಲದೊಂದಿಗೆ ಮಾತುಕತೆಗಿಳಿಯಬೇಕು. ಅಂದಾಗ ಮಾತ್ರ ಇತರರ ಮಾತಿಗೆ ಕಿವಿಗೊಡದೆ ತನ್ನ ಪಥದಲ್ಲಿ ಚಲಿಸಿ ಉತ್ತುಂಗದ ಶಿಖರವೇರಲು ಸಾಧ್ಯ. ಧರೆಯ ಪರಿಪೂರ್ಣ ಸೊಬಗ ಸವಿಯಲು ಸಾಧ್ಯ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ