ಜಾಹೀರಾತುಗಳು - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಸೋಮವಾರ, ಜುಲೈ 11, 2022

ಜಾಹೀರಾತುಗಳು

-- ಕವಿತಾ.A.K 


                      

ಜಾಹೀರಾತುಗಳು ಇಂದು ಮಾನವನ ದೈನಂದಿನ ಜೀವನದಲ್ಲಿ ಹಾಸು ಹೊಕ್ಕಾಗಿ ಸೇರಿ ತನ್ನ  ಮಹಿಮೆಯನ್ನು ಎಲ್ಲಡೆಯೂ ಬಿತ್ತರಿಸುತ್ತಿದೆ. ಈಗಿನ ಜಗತ್ತಿನಲ್ಲಿ ಜಾಹಿರಾತು ಅದೆಷ್ಟು ಅನಿವಾರ್ಯವಾಗಿದೆಯಂದರೆ ಅದಿಲ್ಲದೆ ಯಾವ ಕೆಲಸವೂ , ಯಾವ ಪ್ರಸಾರವೂ ಸಾಧ್ಯವೆ  ಇಲ್ಲವೇನೋ ಎನ್ನುವಷ್ಟಾಗಿದೆ.             

           ಜಾಹೀರಾತುಗಳು ನಮ್ಮ ಸಾಮಾಜಿಕ ವ್ಯವಸ್ಥೆಗೆ ಪೂರಕವಾಗಿರಬೇಕು.ಆದರೆ ಕೆಲವು ಜಾಹೀರಾತುಗಳು ಕೇವಲ ನಗರಗಳ ಜನತೆಯ ಬದುಕಿಗೆ ಹೊಂದುವಂತಿದ್ದು ಆ ಬದುಕನ್ನು ವೈಭಯುತವಾಗಿ ಬಿಂಬಿಸುತ್ತವೆ. ಇದು ಹಳ್ಳಿಗರಿಗೆ ,ಬಡವರಿಗೆ ಆಘಾತವನ್ನುಂಟು ಮಾಡುತ್ತವೆ. ಜಾಹೀರಾತುಗಳಿಂದ ಅನಗತ್ಯ ಸಾಮಾನಿನ ಬಳಕೆ, ಅವಶ್ಯಕತೆಯಿಲ್ಲದಿದ್ದರೂ ಕೊಳ್ಳುವ ಆಸೆ,ಅದರಲ್ಲೂ ಕಂತಿನ ಮೇಲೆ ಕೊಳ್ಳಬಹುದೆಂಬ ಪ್ರಚಾರದಿಂದ ಬಹಳ ಕೆಟ್ಟ ಪ್ರಭಾವವನ್ನು ಬೀರುತ್ತಿವೆ.ಹುರುಳಿಲ್ಲದಿದ್ದರೂ ಸತ್ವಹೀನವಾಗಿದ್ದರೂ,ನೋಟದಿಂದ,ಪ್ರಚಾರದಿಂದ ಮೋಸ ಹೋಗುವ ಜನತೆಗೆ ಜೀವನ ಬರಡಾಗಿ ತೋರುವಂತೆ ಮಾಡುತ್ತವೆ. ಯುವಕ ಯುವತಿಯರಿಗಂತೂ ಮೃದು ಚರ್ಮಕ್ಕೆ ರಕ್ಷಣೆ, ಆ ರೇಷ್ಮೆಯಂತಹ ಕೂದಲಿಗೆ ಬೇಕಾದ ಪೋಷಣೆ ಮುಂತಾದ ಅಲಂಕಾರ ಸಾಮಗ್ರಿಗಳ ಪ್ರಚಾರದಿಂದ ಎಲ್ಲವನ್ನೂ ಕೊಳ್ಳುವ,ಉಪಯೋಗಿಸುವ ಹಂಬಲ ಬೆಳೆಯುತ್ತದೆ. ಹೀಗಾಗಿ ಜಾಹೀರಾತಿಗಾಗಿಯೇ ದೂರದರ್ಶನವನ್ನು ನೋಡುವವರಿದ್ದಾರೆ.    ದೂರದರ್ಶನದಲ್ಲಂತೂ ಪ್ರತಿಯೊಂದು  ಕಾರ್ಯಕ್ರಮಕ್ಕೂ,ಚಿತ್ರಕ್ಕೂ ಜಾಹೀರಾತುದಾರರು ಹಣವನ್ನು ಸುರಿಯುತ್ತಾರೆ.ತಮ್ಮ ತಯಾರಿಕೆಯನ್ನು ಪ್ರಚಾರ ಮಾಡಿ ಸಾಮಾನ್ಯ ಜನತೆಗೂ ತಲುಪುವಂತೆ ಮಾಡುತ್ತಾರೆ ಇದರಿಂದಾಗಿ ದೂರದರ್ಶನವು  ಉತ್ಪಾದಕರಿಗೆ ಒಂದು ಒಳ್ಳೆಯ ಸ್ವಂತ ಆಸ್ತಿಯಂತಾಗಿ ಬಿಟ್ಟಿದೆ.  

         ಈ ಜಾಹೀರಾತುಗಳ ಮೂಲಕ ಜನರಲ್ಲಿ ಅನೇಕ ವಿಷಯಗಳ ಬಗ್ಗೆ ತಿಳುವಳಿಕೆ ಮೂಡಿಸಬಹುದು. ಕುಟುಂಬ ಯೋಜನೆ, ಸಾಕ್ಷರತೆಯ ಚಳುವಳಿ ಭಾವೈಕ್ಯತೆ,ಆರೋಗ್ಯ,ಆಹಾರದ ಬಗ್ಗೆ,ಗಿಡಗಳನ್ನು ಬೆಳೆಸುವ ಬಗ್ಗೆ ಇತ್ಯಾದಿಗಳು ಜನಸಾಮಾನ್ಯರಿಗೂ ತಲುಪುವಂತೆ ಪ್ರಚಾರ ಮಾಡಬಹುದು. ಇದೇ ರೀತಿ ಜಾಹೀರಾತುಗಳು,ಉತ್ಪಾದಿತ ವಸ್ತುಗಳ ಬಗ್ಗೆ ಸ್ಪಷ್ಟ ಚಿತ್ರವನ್ನು ಮೂಡಿಸಿ ಜನತೆಗೆ ತಿಳಿಯಪಡಿಸಬೇಕು. ಯಾವುದಕ್ಕೆ ಜಾಹೀರಾತು ಸೃಷ್ಟಿಯಾಗುತ್ತದೆಯೋ ಅದೇ ವಿಷಯ ಗೌಣವಾಗಿ ಉಳಿದೆಲ್ಲವೂ ಪ್ರಾಮುಖ್ಯವಾಗಿ ಕಾಣುವಂತಾಗಬಾರದು. ಕೆಲವೊಮ್ಮೆ ತಯಾರಾಗಿರುವ ಪ್ರಚಾರವಾಗ ಬೇಕಾಗಿರುವ ವಸ್ತುವಿಗೂ, ಜಾಹೀರಾತಿನ ಚಿತ್ರಣಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ಉತ್ಪಾದಿತ ವಸ್ತುವಿನ ಗುಣಮಟ್ಟವನ್ನು ಗಮನಕ್ಕೆ ತರುವುದಕ್ಕಿಂತ ಅದು ಯಾವ "ಬ್ರ್ಯಾಂಡ್," ಅದು ಹೇಗೆ ಜನಪ್ರಿಯ ಎಂಬುದನ್ನು ಗ್ರಾಹಕರಿಗೆ ತಿಳಿಯಪಡಿಸಲು ಇ ಚ್ಛಿಸುತ್ತವೆ. 

         ಇತ್ತೀಚಿಗೆ ಜಾಹೀರಾತುಗಳ ಸಂಖ್ಯೆ , ಆರ್ಭಟ ಬಹಳ ಹೆಚ್ಚಾದುದರಿಂದ ಅದರ ಸುಂದರ ಚಿತ್ರಣಕ್ಕಷ್ಟೆ ಬೆಲೆ ಸಿಕ್ಕುತ್ತಿದೆ. ಉತ್ಪಾದಕ ವಸ್ತುಗಳಿಗೆ ಬೆಲೆಯೇ ಇಲ್ಲವಾಗಿದೆ. ಆ ಚಿತ್ರದಲ್ಲಿರುವ ವ್ಯಕ್ತಿಗಳನ್ನೋ ಇಲ್ಲಾ ಅವರು ಧರಿಸಿರುವ ಉಡುಪುಗಳನ್ನೊ ನೋಡಿ ಮೆಚ್ಚುತ್ತಾರೆ. 

          ಒಟ್ಟಿನಲ್ಲಿ ಯಾವುದೇ ಉತ್ಪಾದನೆಯಿರಲಿ ಜನ ಸಾಮಾನ್ಯರು ನಿರ್ಧಾರ ಮಾಡುವ ಗುಣಮಟ್ಟದಲ್ಲಿ ತನ್ನ ಯಶಸ್ಸನ್ನು ಕಾಣಬೇಕೆ ಹೊರಾತು ಅದನ್ನು ಪ್ರಚಾರ ಮಾಡುವ ಸುಳ್ಳು ತೋರಿಕೆಯಲ್ಲಲ್ಲಾ. ಜಾಹೀರಾತಿನ ಆಕರ್ಷಣೆಯಲ್ಲಿ ತೊಡಗಿರುವ ಉತ್ಪಾದಕರು ವಸ್ತುಗಳ ಗುಣಮಟ್ಟವನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯಬೇಕು ಆಗಲೇ ಒಳ್ಳೆಯ ಮಾರುಕಟ್ಟೆ ಸಿಗುವುದು ಖಂಡಿತ.


                                               ಕವಿತಾ.A.K

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ