ಬದಲಾಗುತ್ತಿರುವ ಜಗತ್ತು - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಮಂಗಳವಾರ, ಜುಲೈ 12, 2022

ಬದಲಾಗುತ್ತಿರುವ ಜಗತ್ತು



 ಸೌಂದರ್ಯ ಭರಣಿ



   

   ಹಿಂದಿನ ಕಾಲಗಳಲ್ಲಿ  ವಿದ್ಯಾರ್ಥಿಗಳು ಕೇವಲ ಕಥೆ -ಕಾದಂಬರಿಗಳನ್ನು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಹೊಂದಿದ್ದರು. ಓದಲು  ಸುಸಜ್ಜಿತವಾದ ಗ್ರಂಥಾಲಯಗಳನ್ನು  ಹೊಂದಿಲ್ಲದಿದ್ದರೂ ಕಷ್ಟಪಟ್ಟು ಹೇಗಾದರೂ ಹತ್ತಾರು ಮೈಲಿಗಳಷ್ಟು ನಡೆದುಕೊಂಡು ಹೋಗಿ ಪುಸ್ತಕಗಳನ್ನು ಓದಿ ಬರುತ್ತಿದ್ದರು. ಆದರೆ ಈಗ ಕಳೆದೆರಡು ವರ್ಷಗಳಿಂದ ಪುಸ್ತಕಗಳ ಬಳಕೆ ಕಡಿಮೆ ಆಗಿ ಡಿಜಿಟಲ್ ಯುಗಕ್ಕೆ ಹೆಚ್ಚಾಗಿ ಅವಲಂಬಿತರಾಗಿದ್ದಾರೆ. ಕಳೆದ ವರ್ಷಗಳಲ್ಲಿ ಬಂದತಹ "ಕೊರೋನ ವೈರಸ್ "ವಿದ್ಯಾರ್ಥಿಗಳ ಜೀವನದಲ್ಲಿ ಒಂದು ಮಹತ್ತರವಾದ ಬಿರುಗಾಳಿಯನ್ನು ಬೀಸಿದ್ದು, ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಒಂದು ರೀತಿಯಲ್ಲಿ ಉಪಯುಕ್ತವಾಗಿದ್ದರು:ಇನ್ನೊಂದು ಕಡೆ ದುಷ್ಟಪರಿಣಾಮಗಳನ್ನು ಬೀರಿ ಓದುವ ಹವ್ಯಾಸವನ್ನು ಕುಂಟಿತಗೊಳಿಸಿದೆ.

    ಸಾಂಕ್ರಾಮಿಕ ರೋಗದಿಂದ ಎಲ್ಲ ವಲಯಗಳು ಡಿಜಿಟಲ್ಅನ್ನು ಹೆಚ್ಚಾಗಿ ಉತ್ತೇಜಿಸಿದ್ದು, ಶಿಕ್ಷಣ ಕ್ಷೇತ್ರವು ಸಹ  ಇದರ ಮೋರೆಗೆ ಹೋಗಿದೆ ಎಂದರೆ ತಪ್ಪಾಗಲಾರದು. ವಾಸ್ತವವಾಗಿ ಕೆಲವು ವಿದ್ಯಾರ್ಥಿಗಳಿಗೆ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದೆ. ಕೆಲವು ವಿದ್ಯಾರ್ಥಿಗಳು ಡಿಜಿಟಲ್ ಶಿಕ್ಷಣದ ಪ್ರಾಮುಖ್ಯತೆಯನ್ನು ಪ್ರಸ್ತುತ ಭವಿಷ್ಯದಲ್ಲಿ ಹೆಚ್ಚಾಗಿ ಅವಲಂಬಿಸಿಕೊಂಡಿದ್ದಾರೆ. ಆನ್ಲೈನ್ ಶಿಕ್ಷಣವು ಪ್ರಯೋಜನಗಳ ಜೊತೆಗೆ ಕೆಲವು ಪ್ರಾಯೋಗಿಕ ನ್ಯೂನ್ಯತೆಗಳನ್ನು ಹೊಂದಿರುವುದರಿಂದ ಅದನ್ನು ಎಚ್ಚರಿಕೆ ಯಿಂದ ಅಳವಡಿಸಿಕೊಳ್ಳಬೇಕಾಗಿದೆ.

   

 ಆನ್ಲೈನ್ ಶಿಕ್ಷಣದ ಪ್ರಯೋಜನಗಳೆಂದರೆ :

ನಮ್ಮ ದೇಶದಲ್ಲಿ ಸಾಕಷ್ಟು  ಶಾಲಾ ಕಾಲೇಜ್ಇಲ್ಲ. ಉತ್ತಮ ವ್ಯಾಸಂಗಕ್ಕಾಗಿ ಬೇರೆ ದೇಶಗಳಿಗೆ  ಹೋಗಬೇಕಾದ ಅನಿವಾರ್ಯತೆ ಇರುವುದರಿಂದ, ನಮಗೆ ಬೇಕಾದ  ವಿವಿಧ ರೀತಿಯ  ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.ಇದರಿಂದ ಪೋಷಕರಿಗೆ ಮತ್ತು ಶಾಲಾಕಾಲೇಜ್ ಗಳ ಮೇಲಿನ ಒತ್ತಡವನ್ನು ಕಡಿಮೆಮಾಡಬಹುದಾಗಿದೆ. ವಿದ್ಯಾರ್ಥಿಗಳು ತಮಗೆ ಬೇಕಾದ ವಿಷಯಗಳ ಬಗ್ಗೆಯೂ ಹೆಚ್ಚು ತಿಳಿಯಬಹುದಾಗಿದೆ. ಈ ರೀತಿಯ ಶಿಕ್ಷಣವನ್ನು ಪ್ರೋಸ್ಸಾಹಿಸುವುದರಿಂದ ಪರಿಸರಕ್ಕೆ ಪ್ರಯೋಜನಕಾರಿಯಾಗಿದ್ದು, ಪ್ರತಿಗಳು  ಮತ್ತು ಪುಸ್ತಕಗಳ  ಅಗತ್ಯವನ್ನು ಕಡಿಮೆ ಮಾಡಬಹುದಾಗಿದೆ. ಜೊತೆಗೆ ಸಮಯವನ್ನು ಉಳಿಸಬಹುದಾಗಿದೆ. ವಿದ್ಯಾರ್ಥಿಗಳು ವಿಶ್ವದ ಅತ್ಯುತ್ತಮ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣವನ್ನು ಪಡೆಯಬಹುದಾಗಿದೆ. ಎಲ್ಲಾ ರಾಜ್ಯಗಳಲ್ಲಿಯೂ ಕಂಡುಬರುವ ಶಿಕ್ಷಕರ ಕೊರತೆಯನ್ನು ನಿವಾರಿಸಬಹುದಾಗಿದೆ. ಪ್ರಾಮಾಣಿತ ಸಾಂಪ್ರದಾಯಿಕ ಶಿಕ್ಷಣಕ್ಕೆ ಹೋಲಿಸಿದರೆ ಇದು ಕೆಲವು ಜನರ ಶ್ರೇಣಿಗಳನ್ನು ಹೆಚ್ಚಿಸಲು ಸಹಾಯಕವಾಗಿದೆ.


ಇದರಿಂದ ಎಷ್ಟು ಪ್ರಯೋಜನಗಳಿದೆಯೋ ಅಷ್ಟೇ ಹಾನಿಗಳಿವೆ :

 ಸಾಂಪ್ರದಾಯಿಕ ಶಿಕ್ಷಣಗಳು ಮರೆಯಾಗುವ ಸಾಧ್ಯತೆ ಇದ್ದು, ಗ್ರಂಥಾಲಯಗಳ ದುರ್ಬಳಕೆಯನ್ನು ಕಾಣಬಹುದಾಗಿದೆ. ಡಿಜಿಟಲ್ ಶಿಕ್ಷಣವು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ. ಎಲ್ಲರು ಈ ರೀತಿಯ ಶಿಕ್ಷಣ ಪಡೆಯಲು ಅಸಾಧ್ಯವಾಗುತ್ತದೆ. ಈ ಕಲಿಕೆಗೆ ದುಬಾರಿ ಸಾಧನಗಳ ಅಗತ್ಯತೆ ಇರುವುದರಿಂದ ಎಲ್ಲರೂ ಇದರ ಪ್ರಯೋಜನವನ್ನು ಪಡೆಯಲಾಗುವುದಿಲ್ಲ.ಡಿಜಿಟಲ್ ಶಿಕ್ಷಣಕ್ಕೆ ಮನೆಯ ವಾತಾವರಣ ಸೂಕ್ತವಾಗಿರುವುದಿಲ್ಲ, ಏಕೆಂದರೆ ವಿದ್ಯಾರ್ಥಿಗಳು ಮನೆಯಲ್ಲಿ ಆಟಗಳನ್ನು, ಸಾಮಾಜಿಕ ಮಾಧ್ಯಮ ಫೇಸ್ ಬುಕ್, ವಾಟ್ಯಾಸ್ಫ್, ಇನ್ಸ್ಟಾಗ್ರಾಮ್ ಗಳನ್ನು ಬಳಸುವುದೇ ಹೆಚ್ಚಾಗಿರುತ್ತದೆ. ಅಲ್ಲದೆ ಶಾಲಾ ಕಾಲೇಜು ಗಳ  ಸೂಕ್ತವಾದ  ವಾತಾವರಣವನ್ನು ಕಲ್ಫಿಸಲು ಅಸಾಧ್ಯವಾಗುತ್ತದೆ. ಇದರಿಂದ 'ವಿದ್ಯಾರ್ಥಿಗಳ ಅಧ್ಯಯನದ ಹವ್ಯಾಸವನ್ನು ಉತ್ತೇಜಿಸಿ, ಸೋಮಾರಿತನದ ಮನೋಭಾವನೆಯನ್ನು ಎಲ್ಲರಲ್ಲಿಯೂ ಬೆಳೆಸುತ್ತಿದೆ ', ದೈಹಿಕ ಬೆಳವಣಿಗೆಗೂ ಮಾರಕವಾಗಿದೆ ಈ ಶಿಕ್ಷಣ  ವ್ಯವಸ್ಥೆ.ಸಹಪಾಠಿಗಳನ್ನು ಕಳೆದುಕೊಳ್ಳಲು ಸಹ ಸಹಕರಿಯಾಗಿದೆ. ಒಬ್ಬ ವ್ಯಕ್ತಿಯ ಕಲಿಕೆಗೆ ಮತ್ತು ಸಾಧನೆಗೂ  ಪರಿಣಾಮ ಬೀರಿದೆ.


  ನಾವು ಎಷ್ಟೇ ಮುಂದುವರೆದರು ನಮ್ಮ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಕಂಡುಬರುವ  ಹಾಗೇ ಈ ಯುಗವು ಹೆಚ್ಚು ಉಪಯುಕ್ತವಾಗಿದೆ ಎಂದುಕೊಂಡರೆ , ಇದರಿಂದ ಆಗುವ  ಅನಾನುಕೂಲತೆಗಳೇ ನಮಗೆ ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದ ಡಿಜಿಟಲ್ ಅನ್ನು ಉಪಯುಕ್ತವಾಗುವಂತೆ, ಉತ್ತಮ ರೀತಿಯಲ್ಲಿ ಬಳಸಿಕೊಂಡು ದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕು..

   ಈ ಕಲಿಕೆಯಿಂದ ನಮ್ಮ್ ಸಂಸ್ಕೃತಿ, ಆಚಾರ ವಿಚಾರ, ಎಲ್ಲವನ್ನು ಮರೆಯದೆ ಅದನ್ನು ಜೊತೆಗೂಡಿಸಿಕೊಂಡು ಹೋಗಬೇಕಾಗಿದೆ..


1 ಕಾಮೆಂಟ್‌: