" ಅಂ
ದವರು ನಗುತಿಹರು, ನೀನೇಕೇ ಅಳುತ್ತಿರುವೆ?
ನೀನು ಅಳಲೆಂದೇ ಅಂದಿರುವ
ಅವರ ಆಸೆಯನು ನೀನೇಕೆ ಈಡೇರಿಸುವೇ?
ಅಂದವರ ಮಾತು ಹೋಗಲಿ ಗಾಳಿಯಲಿ
ನಗುತಿರಲಿ ನನ್ನ ಮೊಗ ಹರುಷದಲಿ!"
ಹುಟ್ಟತ್ತಾನೆ, ಇತ್ಲಾಗೆ ಶ್ರೀಮಂತರೂ ಅಲ್ಲದೇ ಇತ್ಲಾಗೆ ಬಡವರು ಅಲ್ಲದೆ ಮಧ್ಯವರ್ಗದಲ್ಲಿ ಕಷ್ಟ ಎಂಬ ಬುದ್ಧಿ ಗಂಟನ್ನು ತಲೆ ಮೇಲೆ ಹೊತ್ತು ಜೀವನದ ಬಂಡಿಯನ್ನು ಸಾಗಿಸಲು ಹಗಲು ರಾತ್ರಿ ದುಡಿಯುವುದೇ ಒಂದು ಪ್ರಪಂಚ.
ಮೂರು ದಿನದ ಸುಖಗೋಸ್ಕರ ಜೀವನಪೂರ್ತಿ ದುಡಿಯುವುದು ನಮಗೆ ಹೊಸತಲ್ಲ. ವಾರಪೂರ್ತಿ ದುಡಿಯುವುದು ಭಾನುವಾರ ಒಂದು ದಿನ ಹೊಸ ಉಡುಪನ್ನು ಧರಿಸಿ ಅಲ್ಲಿ - ಇಲ್ಲಿ ಸುತ್ತಾಡಿ ನಮ್ಮತರ ಯಾರು ಇಲ್ಲ ನಮಗೆ ನಾವೇ ಯಜಮಾನ್ರು ಅನ್ನೋ ರೇಂಜಿಗೆ ಬದುಕುತ್ತಿವೆ.
ಶೋಕಿ ಮಾಡೋ ವಯಸ್ಸಿನಲ್ಲಿ ತನ್ನ ಆಸೆ ಕನಸು ಮರೆತು ಮನೆ ಬಾರ ಹೊತ್ತು ಸಾಲ ತೀರಿಸೋಕೆ ಒದ್ದಾಡ್ತಾ ಇದ್ದೀವಿ.
"ಜೀವನದಲ್ಲಿ ಆಸೆ ಕನಸು ಕಟ್ಟಿ
ನಾವು ಓದಿರೋದೆ ಒಂದು
ಬದುಕಿನಲ್ಲಿ ನಾವು ಮಾಡೋ ಕೆಲಸ ಇನ್ನೊಂದು"
ಮನೆಯ ಜವಾಬ್ದಾರಿ ಹೊತ್ತಾಗ ನಮ್ಮ ಎಷ್ಟು ಕನಸುಗಳಿಗೆ ಶ್ರದ್ಧಾಂಜಲಿ ಅರ್ಪಿಸುವುದು ಸಹಜ.
ನಮ್ಮಂತ ಹುಡುಗರಿಗೆ ಕಾಲೇಜ್ ಲೈಫ್ ನಲ್ಲಿ ಒಬ್ಬಳು ದೇವತೆ ಇದ್ದೇ ಇರುತ್ತಾಳೆ.
ಅವಳ ಮುಂದೆ ಹೋಗಿ ಪ್ರೀತಿ ಹೇಳುವುದಕ್ಕೆ ಧೈರ್ಯ ಇಲ್ಲ....
ಒಂದು ವೇಳೆ ಎದೆ ಗಟ್ಟಿಮಾಡಿಕೊಂಡು ಹೇಳಿದ್ರೆ ಎಲ್ಲಿ ತಿರಸ್ಕರಿಸುತ್ತಾಳೆ ಎನ್ನುವ ಭಯ..... ಕೊನೆಗೆ ಏನು ಹೇಳದೆ ಸದಾ ಕಾಲ ಮನದಲ್ಲಿ ಪೂಜಿಸುವ ದೇವತೆ ಆಗಿರುತ್ತಾಳೆ....
ಮನೆ ಪರಿಸ್ಥಿತಿ ನಿಭಾಯಿಸಲು ಗಾರೆ ಕೆಲಸ ಮಾಡಲು ನಿಂತರೆ. ಮುಂದೆ ಮದುವೆಯಾಗುವ ಸಂದರ್ಭದಲ್ಲಿ ಹುಡುಗ ಗೋರ್ಮೆಂಟ್ ಜಾಬ್ ಮಾಡಿದ್ರೆ ಮಾತ್ರ ಹುಡುಗಿ. ಇದರೊಂದಿಗೆ ಹುಡುಗಿ ಸಿಕ್ಕಿಲ್ಲ ನಮಗೆ ಯಾರು ಹೆಣ್ಣು ಕೊಟ್ಟಾರು ಎನ್ನುವುದು ಚಿಂತೆ... ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನೋಡುತ್ತೇವೆ.
ಮನೆಯಲ್ಲಿ ನೋಡಿದರೆ ದಿನಪೂರ್ತಿ ಸಾರಾಯಿ ಕುಡಿದು ಬೀದಿಯಲ್ಲಿ ನಾಟಕ ಮಾಡುವ ತಂದೆಯಾದರೆ... ಪಕ್ಕದ ಮನೆಯವಳು ಹಾಗೆ ನಾವು ಆಭರಣ ಯಾವಾಗ ಧರಿಸುವುದು ಅಮ್ಮನ ದೊಡ್ಡ ಕನಸಾದರೆ.... ಅವನ ಹಾಗೆ ನಾನು ಒಂದು ದಿನ, ಅಷ್ಟು ದೊಡ್ಡ ಬೈಕ್ ಹೊಡಿದೆ ಹೊಡೆಯುತ್ತೇನೆ ಎನ್ನುವ ನಂಬಿಕೆ ಇನ್ನೊಂದು ಕಡೆ....
ಕೆರಿಯರ್, ಡಿಪ್ರೆಶನ್, ಫ್ಯಾಮಿಲಿ ಪ್ರಾಬ್ಲೆಮ್ಸ್, ಜಾಬ್, ಓವರ್ ಥಿಂಕಿಂಗ್, ಹಣ, ಮನೆ ಇವೆಲ್ಲವೂ ಒಂದು ಹುಡುಗನಿಗೆ ಕಾಡುವ ದೊಡ್ಡ ಯಕ್ಷಪ್ರಶ್ನೆ.?
" ಸಾವಿರಾರು ಕಷ್ಟಗಳ ಮಧ್ಯ ಚಿಕ್ಕದೊಂದು ಕನಸು.....
ಬದುಕಿನಲ್ಲಿ ಏನಾದರೂ ಸಾಧಿಸಬೇಕು.... "
" ಮನಸ್ಸಿನಲ್ಲಿ ನೋವು ಮುಖದಲ್ಲಿ ನಗು..
ನಾಳೆ ಇರ್ತೀವೋ ಇಲ್ಲವೋ ಗೊತ್ತಿಲ್ಲ...
ಆದರೆ ಇರೋವರೆಗೂ ಲೈಫನಲ್ಲಿ ಖುಷಿಯಾಗಿರಿ..."
ಶ್ರೀಮಂತರು ಇನ್ನು ದುಡ್ಡು ಹೇಗೆ ಮಾಡಬೇಕು ಅನ್ನೋದರ ಬಗ್ಗೆ ಯೋಚನೆ ಮಾಡುತ್ತಾರೆ....
ಬಡವರು ನಾನು ಯಾವಾಗ ಶ್ರೀಮಂತ ಆಗ್ತೀನಿ... ಅನ್ನೋದರ ಬಗ್ಗೆ ಯೋಚನೆ ಮಾಡುತ್ತಾರೆ
ಇನ್ನು ನಾವು ಹೆಂಗೆ ಬದುಕಬೇಕು ಎಂದು ಯೋಚನೆ ಮಾಡ್ತೀವಿ....
ರಾತ್ರಿ ಮಲಗಿರುವ ನಿದ್ರೆಯನ್ನು ಬಡೆದೆಬ್ಬಿಸುವ ಶಕ್ತಿ ಇರುವುದು ಜೀವನದ ಜವಾಬ್ದಾರಿಗಳಿಗೆ ಮಾತ್ರ.
ಇಂದಲ್ಲ ನಾಳೆ ಜೀವನ ಬದಲಾಗಬಹುದೆನ್ನುವ ಮೂಢನಂಬಿಕೆ...
" ನೀವು ಬಡವರಾಗಿ ಹುಟ್ಟಿದರೆ
ನಿಮ್ಮ ತಪ್ಪಲ್ಲ ಆದರೆ
ನೀವು ಬಡವರಾಗಿ ಸತ್ತರೆ
ಅದು ನಿಮ್ಮ ತಪ್ಪು "
" ಗೆದ್ದೇ ಗೆಲ್ಲುವೆ ಒಂದು ದಿನ, ಗೆಲ್ಲಲೇ ಬೇಕು ಒಳ್ಳೆತನ "
ಗಣೇಶ್ ಖಂಡೋಜಿ
ಪತ್ರಿಕೋದ್ಯಮ ವಿಭಾಗ
ಎಂ ಎಂ ಆರ್ಟ್ಸ್ & ಸೈನ್ಸ್ ಕಾಲೇಜ್ ಶಿರಸಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ