ಪಿತೃಪಕ್ಷದ ಮಹಾಲಯ ಅಮಾವಾಸ್ಯೆ - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಬುಧವಾರ, ಅಕ್ಟೋಬರ್ 2, 2024

ಪಿತೃಪಕ್ಷದ ಮಹಾಲಯ ಅಮಾವಾಸ್ಯೆ

 


    ಭಾರತವು ಒಂದು ಸಂಪತ್ ಭರಿತವಾದ ರಾಷ್ಟ್ರ. ಇಂತಹ ರಾಷ್ಟ್ರದಲ್ಲಿ ಹುಟ್ಟಿರುವ ನಾವುಗಳು   ಪುಣ್ಯವಂತರು ಪುರಾತನ ಕಾಲದಿಂದಲೂ ಹಲವಾರು ಆಚರಣೆಗಳು ನಡೆದುಕೊಂಡು ಬಂದಿದೆ ಇಂಥ ಹಲವಾರು ಆಚರಣೆಗಳಲ್ಲಿ ಪಿತೃ ಪಕ್ಷದ ಮಹಾಲಯ ಅಮಾವಾಸ್ಯೆಯ ಒಂದು.

                       ಹಿಂದೂಗಳಾದ ಎಲ್ಲಾ ಪ್ರತಿಯೊಬ್ಬರ ಮನೆಯಲ್ಲಿಯೂ ಈ ಆಚರಣೆ ಇದೆ. ಆ ಮನೆತನಕ್ಕೆ ತಕ್ಕಂತೆ ಅವರವರ ಪದ್ಧತಿಗನುಗುಣವಾಗಿ ಆಚರಿಸುತ್ತಾರೆ. ಮಹಾಲಯ ಅಮಾವಾಸ್ಯೆ ಪಿತೃ ಋಣ ತೀರಿಸುವ ಒಂದು ಪರಮ ಪವಿತ್ರ ಮತ್ತು ಮಹತ್ವದ ಸಂದರ್ಭ ವಾಗಿ ಭಾರತೀಯ ವೈದಿಕ ಪರಂಪರೆಯಲ್ಲಿ ದಾಖಲೆಯಾಗಿದೆ.

                 ವೇದಗಳ ಕಾಲದಿಂದಲೂ ಇದರ ಆಚರಣೆ ಇದೆ. ಯಾವುದೇ ವಿಜ್ರಂಭಣೆಯಿಂದ ನಡೆಯುವುದಿಲ್ಲ. ನಮ್ಮ ಪೂರ್ವಜರನ್ನು ನೆನೆದು ಅವರಿಗೆ ಆಹಾರ ನೀಡುವುದರಿಂದ ಮನೆಯಲ್ಲಿ ಇರುವ ಅನೇಕ ದೋಷಗಳು ನಿವಾರಣೆಯಾಗು

- ತ್ತದೆ. ದೈವಾಧೀನರಾದ ನಮ್ಮ ಹಿರಿಯರನ್ನು ವರ್ಷಕ್ಕೊಮ್ಮೆ ನೆನೆದು ದರ್ಪಣ   ನೀಡಿದರೆ ಅವರು ನಮ್ಮನ್ನು ಆಶೀರ್ವದಿಸುತ್ತಾರೆ. ಇದೆ ಅಗಲಿದ ಪೂರ್ವಜರನ್ನು ಭಕ್ತಿಯಿಂದ ನೆನೆಯುವ ಪರ್ವಕಾಲ ಪಿತೃಪಕ್ಷವಾಗಿದೆ.

               ಮಹಾಲಯ ಮಹಾಲಯ ಹಿಂದೆ ಪುರಾಣಿಕ ಹಿನ್ನೆಲೆಯು ಇದೆ. ಮಹಾ ಕಾವ್ಯಗಳಲ್ಲಿ ಬಂದಾಗ ಮಹಾಭಾರತದಲ್ಲಿ ಬರುವ ಕರ್ಣನು ಮಹಾನ್ ದಾನಿ ಆಗಿದ್ದನು ಅವನ ಜೀವಿತಾವಧಿಯಲ್ಲಿ ಸಾಕಷ್ಟು ಧಾನ ಧರ್ಮಗಳನ್ನು ಮಾಡಿದ್ದನು ಹಾಗಾಗಿ ಅವನನ್ನು ದಾನ ಧರ್ಮಗಳಲ್ಲಿ ಹೆಸರುವಾಸಿಯಾಗಿದ್ದ ಸ್ವರ್ಗದಲ್ಲಿ ನಿತ್ಯವೂ ಅವನಿಗೆ ಚಿನ್ನದ ಊಟವೇ ಗೋಚರಿಸುತ್ತಿತ್ತು .ಇದರಿಂದ ಚಿಂತಿಸಿದ ಕರ್ಣನು ಯಮನಲ್ಲಿ ಕೇಳಿದ ಆಗ ಯಮನು ನೀನು ಸಾಕಸ್ಟು ಚಿನ್ನಾಭರಣಗಳನ್ನೇ ದಾನ ಮಾಡಿರುವ ಬಡ ಜನರಿಗೆ ನೀನು ನೀಡಿದ ದಾನ ಅಗತ್ಯವಿರಲಿಲ್ಲ ಅವರು ಮನವು ಆಹಾರಕ್ಕಾಗಿ ಹಂಬಲಿಸುತ್ತಿತ್ತು.

           ಪೂರ್ವಜರಿಗೂ ಅನ್ನದಾನ ಮಾಡಲಿಲ್ಲ ಅದರ ಫಲವಾಗಿ ಯಮರಾಜನು ತಪ್ಪನ್ನು ತಿದ್ದಿಕೊಳ್ಳಲು 15 ದಿನಗಳ ಕಾಲ ಕರ್ಣನನ್ನು ಭೂಮಿಗೆ ಕಳುಹಿಸಿದ ಆಗ ಕರ್ಣನು ಅವರ ನೆನಪಿನಲ್ಲಿ ಆಹಾರ ಮತ್ತು ನೀರನ್ನು ದಾನ ಮಾಡಿದನು ಅವಧಿಯನ್ನು ಪಿತೃಪಕ್ಷ ಎಂದು ಕರೆಯಲಾಯಿತು.ಈ ದಿನಗಳಲ್ಲಿ ನಮ್ಮ ಪೂರ್ವಜರು ಭೂಮಿಗೆ ಸಮೀಪಿಸುತ್ತಾರೆ. ಆ ಸಂದರ್ಭದಲ್ಲಿ ಆಹಾರ ನೀಡಿದರೆ ಅತ್ಯಂತ ತೃಪ್ತಿಯನ್ನು ಪಡೆದುಕೊಳ್ಳುತ್ತಾರೆ ಜೊತೆಗೆ ನಮ್ಮನ್ನು ಹರಸುತ್ತಾರೆ ಎಂದು ಹೇಳಲಾಗುವುದು

           ಇತ್ತೀಚಿನ ದಿನಗಳಲ್ಲಿ ಇಂತಹ ಆಚರಣೆಗಳು ನಶಿಸುತ್ತಾ ಹೋಗುತ್ತಿರುವುದನ್ನು ಕಾಣಬಹುದಾಗಿ ಕಾರಣ ಹೊರದೇಶಗಳಲ್ಲಿ ನಮ್ಮ ಊರನ್ನು ತೊರೆದು ವಾಸಿಸುತ್ತಿರುವವರಿಗೆ ತಮ್ಮ ಕೆಲಸದ ಭಾವದಿಂದ ಹಲವಾರು ಒತ್ತಡಗಳಿಂದ ಅವರು ಇಂತಹ ಆಚರಣೆಗಳಲ್ಲಿ ಭಾಗಿಯಾಗದೆ ಕೇವಲ ಹಳ್ಳಿಗಳಲ್ಲಿ ವಾಸಿಸುತ್ತಿರುವ ಜನರು ಮಾತ್ರ ಇಂತಹ ಆಚರಣೆಗಳಲ್ಲಿ ತೊಡಗಿರುವುದನ್ನು ಕಾಣುತ್ತೇವೆ.


ಮಹಾಲಕ್ಷ್ಮಿ ಮರಾಠಿ

ಪತ್ರಿಕೋದ್ಯಮ ವಿಭಾಗ

ಎಂ.ಎಂ ಕಾಲೇಜ್ ಶಿರಸಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ