ನವರಾತ್ರಿ - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಶುಕ್ರವಾರ, ಅಕ್ಟೋಬರ್ 4, 2024

ನವರಾತ್ರಿ



ನವಶಕ್ತಿ ನವರಾತ್ರಿ. ನವ ದುರ್ಗೆಯರನ್ನು ಪೂಜಿಸುವ ನವರಾತ್ರಿ ಹಬ್ಬ ಇಡೀ ಭಾರತಾದ್ಯಂತ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ.

 ಮಾನ್ಸೂನ್ ನಂತರದ ಶರತ್ ಕಾಲದಲ್ಲಿ ಆಚರಿಸುವ ಈ ಹಬ್ಬವು ಸರ್ವೋಚ್ಚ ದೇವತೆಯಾದ ಆದಿಪರಾಶಕ್ತಿ ಅಂಶವಾದ ದುರ್ಗಾದೇವಿಯ ಗೌರವಾರ್ಥವಾಗಿ 9 ಅಥವಾ 10 ದಿನಗಳ ಕಾಲ ಆಚರಿಸಲಾಗುತ್ತದೆ. ಈ ಒಂಬತ್ತು ದಿನಗಳ ದುರ್ಗೆಗೆ ಮತ್ತು ಅವಳ ಒಂಬತ್ತು ಅವತಾರಗಳಾದ ನವ ದುರ್ಗೆಗೆ ಮಾತ್ರ ಮೀಸಲಾಗಿದೆ. ಪ್ರತಿದಿನವೂ ಒಂದೊಂದು ದೇವಿಯನ್ನು ಆರಾಧಿಸಲಾಗುತ್ತದೆ.

               ಶೈಲ ಪುತ್ರಿ ಗುಲಾಬಿ, ಬ್ರಹ್ಮಚಾರಿಣಿ ಬಿಳಿ, ಚಂದ್ರ ಘಂಟಾ ಕೆಂಪು,  ಕೂಷ್ಮಾಂಡ ಕಿತ್ತಳೆ, ಸ್ಕಂದಮಾತ ಹಳದಿ, ಕಾತ್ಯಾಯಿನಿ ಮರುನ್, ಕಾಳರಾತ್ರಿ ಕಡು ನೀಲಿ, ಮಹಾ ಗೌರಿ ಹಸಿರು, ಸಿದ್ದಿ ರಾತ್ರಿ ಕಡಲ ತೀರದ ಬಣ್ಣ, ಹೀಗೆ ಒಂಬತ್ತು ದಿನವೂ ನವ ದುರ್ಗೆಗಳನ್ನು ಪೂಜಿಸಲಾಗುತ್ತದೆ. ಹಾಗೂ ನವ ದುರ್ಗೆಯರು ತಮ್ಮದೇ ಆದ ಬಣ್ಣಗಳನ್ನು ಹೊಂದಿದ್ದಾರೆ.

                ನವರಾತ್ರಿಯನ್ನು ಕೇವಲ ಭಾರತದಲ್ಲಿ ಮಾತ್ರವಲ್ಲದೆ ಬಂಗಾಳ,   ಢಾಕ, ನೇಪಾಳ, ಅಮೆರಿಕ, ಹಾಂಗ್ ಕಾಂಗ್, ಕೆನಡಾ ಹೀಗೆ ಹಲವು ರಾಷ್ಟ್ರಗಳಲ್ಲಿ ಆಚರಿಸುತ್ತಾರೆ. ಭಾರತದಲ್ಲಿ ವಿಶೇಷವಾಗಿ ಉತ್ತರ ರಾಜ್ಯಗಳಲ್ಲಿ ಆಚರಿಸುತ್ತಾರೆ. ಭಾರತದಲ್ಲಿ ನವರಾತ್ರಿಯನ್ನು  ದುರ್ಗಾ ಪೂಜೆ, ಗರ್ಬಾ, ದಸರಾ, ಗೊಂಬೆಗಳ ಹಬ್ಬ ಎಂದು ಕರೆಯುವರು. ಭಾರತದ ದಕ್ಷಿಣ ಭಾಗದಲ್ಲಿ ದುರ್ಗಾ ಮತ್ತು ರಾಕ್ಷಸ ಮಹಿಶಾಸುರ ನಡುವೆ ನಡೆದ ಯುದ್ಧದಲ್ಲಿ ಮಹಿಷ ಮರ್ಧನಿಯಾದ ದೇವಿಯ ವಿಜಯವನ್ನು ಆಚರಿಸುವ ಸಲುವಾಗಿ ನವರಾತ್ರಿಯನ್ನು ಆಚರಿಸಲಾಗುತ್ತದೆ. ಭಾರತದ ಉತ್ತರದ ಭಾಗದಲ್ಲಿ ಈ ದಿನದಂದು ರಾಮನು ರಾವಣನನ್ನು ಕೊಂದ ಕಾರಣದ ಪ್ರತೀಕವಾಗಿ ಆಚರಿಸುತ್ತಾರೆ ಎಂದು ನಂಬಿಕೆ ಇದೆ. 

                   ಸ್ತ್ರೀ ಶಕ್ತಿಯನ್ನು ವಿಜ್ರಂಭಿಸುವ ಈ ಹಬ್ಬದಲ್ಲಿ ಮೊದಲ ಮೂರನೇ ಭಾಗವು ದೇವಿಯ ಅಂಶಗಳ ಮೇಲೆ ಕೇಂದ್ರೀಕರಿಸುತ್ತವೆ. ದುರ್ಗೆ,ಲಕ್ಷ್ಮಿ, ಸರಸ್ವತಿ ಮತ್ತು ವಿವಿಧ ಅವರ ಅಂಶಗಳಿಗೆ ಅರ್ಪಣೆಗಳನ್ನು ಮಾಡಲಾಗುತ್ತದೆ ಮತ್ತು ಅವರ ಗೌರವಾರ್ಥವಾಗಿ ಆಚರಣೆಗಳನ್ನು ಮಾಡಲಾಗುತ್ತದೆ. ಹತ್ತನೇ ದಿನದಂದು ಅವುಗಳನ್ನು ಮುಳುಗಿಸಲು ಹತ್ತಿರದ ನದಿಗಳಿಗೆ ಅಥವಾ ಸರೋವರಗಳಿಗೆ ಮೆರವಣಿಗೆಯ ಮೂಲಕ ಕೊಂಡಯ್ಯಲಾಗುತ್ತದೆ. 

            ವಿಶೇಷವಾಗಿ ನವರಾತ್ರಿಯನ್ನು ಕರ್ನಾಟಕದಲ್ಲಿ ದಸರಾ ಹಬ್ಬವೆಂದು ಆಚರಿಸಲಾಗುತ್ತದೆ. ಹಾಗೂ ಈ ಹಬ್ಬವು ನಾಡ ನಾಡಹಬ್ಬ ವೆಂದೇ ಪ್ರಖ್ಯಾತಿ ಪಡೆದಿದೆ. 15ನೇ ಶತಮಾನದಲ್ಲಿ ವಿಜಯನಗರ ಅರಸರ ಕಾಲದಲ್ಲಿ ಈ ಆಚರಣೆಯು ಚಾಲನೆ ಪಡೆದಿದ್ದು ಇದಕ್ಕೆ ಮಹಾನವಮಿ ದಿಬ್ಬ, ಹಜಾರ ರಾಮಸ್ವಾಮಿ ದೇವಾಲಯದ ಹೊರಗೋಡೆಯು ಸಾಕ್ಷಿಯಾಗುತ್ತಿವೆ. ವಿಜಯನಗರದ ಅರಸರ ನಂತರ ಮುಸ್ಲಿಂ ಆಳ್ವಿಕೆಗೆ ಒಳಪಟ್ಟರು ಹೈದರಾಲಿ ಟಿಪ್ಪು ಸುಲ್ತಾನರು ದಸರಾ ವನ್ನು ಅಷ್ಟೇ ವಿಜೃಂಭಣೆಯಿಂದ ಕುಸ್ತಿ ಪಂದ್ಯಾವಳಿಗಳನ್ನು ಏರ್ಪಡಿಸುವ ಮೂಲಕ ಆಚರಿಸುತ್ತಿದ್ದರು.

                     ಲಕ್ಷಾಂತರ  ನೋಡುಗರನ್ನು ತನ್ನತ್ತ ಸೆಳೆಯುವ ಮೈಸೂರಿನ ದಸರವು ರಾಜನು ವಿದ್ಯಕ್ತ ಸ್ನಾನವನ್ನು ತೆಗೆದುಕೊಂಡು 9 ಪವಿತ್ರ ದೇವತೆ ಅಥವಾ ನವಗ್ರಹಗಳನ್ನು ಪೂಜಿಸುವ ಮೂಲಕ ಚಾಲನೆ ನೀಡುತ್ತಾರೆ. ಈ ನವರಾತ್ರಿಯಲ್ಲಿ ರಾಯಲ್ ಖಡ್ಗ ಆರಾಧನೆ, ಜಂಬೂ ಸವಾರಿ, ಪಂಜಿನಾ ಕವಾಯತ, ಫಲಪುಷ್ಪ ಪ್ರದರ್ಶನ, ನಾಟಕೋತ್ಸವ, ಕ್ಯಾನನ್ ಪೈರಿಂಗ್, ವಿವಿಧ ಕ್ರೀಡಾಕೂಟ, ಆಹಾರ ಮೇಳ ಇನ್ನಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು. 

                         ಇಡೀ ಕರ್ನಾಟಕದಾದ್ಯಂತ ಮನಮನೆಗಳಲ್ಲಿ ಗೊಂಬೆಗಳನ್ನು ಕೂರಿಸಲಾಗುವುದು. ಅನೇಕ ದೇವರು, ದೇವತೆಗಳು, ಪ್ರಾಣಿಗಳು, ಪುರುಷರು, ಮಹಿಳೆಯರು ಮತ್ತು ಮಕ್ಕಳ ಗೊಂಬೆಗಳನ್ನು ಆಯ್ದು ಪೌರಾಣಿಕ ವಿಷಯದ ಪ್ರಕಾರ ಸ್ಥಾಪಿಸಲಾಗುವುದು. ನವರಾತ್ರಿಯ ವಿಜಯದಶಮಿಯಂದು ಆನೆಯ ಮೇಲೆ ನಾಡ ಅಧಿದೇವತೆಯಾದ ಚಾಮುಂಡೇಶ್ವರಿ ತಾಯಿಯು ಚಿನ್ನದ ಅಂಬಾರಿಯ ಮೇಲೆ ಅರಮನೆಯಿಂದ ಪವಿತ್ರ ಬನ್ನಿ ಮರದವರೆಗೆ ಮೆರವಣಿಗೆ ಇರುತ್ತದೆ. ಹಾಗೂ ಅರಮನೆಯನ್ನು ಎರಡು ಲಕ್ಷಕ್ಕೂ ಹೆಚ್ಚಿನ ಲೈಟ್ ಬಲ್ಬ್ಗಳಿಂದ ಅಲಂಕರಿಸುತ್ತಾರೆ. ಈ ಸೌಂದರ್ಯವನ್ನು ಸವಿಯಲು ದೇಶದ ಎಲ್ಲಾ ಕಡೆಯಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುವಂತೆ ಮಾಡುವ ಮೈಸೂರಿನ ದಸರವು ಒಂದು ಕರ್ನಾಟಕದ ಕನ್ನಡ ನಾಡಿನ ಮೂಡಿಗೆ ಸೇರಿರುವ ಗರಿಯಾಗಿದೆ.... 


ಸಹನಾ ಮರಾಠಿ

ಎಂ. ಈ. ಎಸ್  ಶಿರಸಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ