ಇಡೀ ಭಾರತದಾದ್ಯಾಂತ ಹರಡಿರುವ ಬಹುದೊಡ್ಡ ಸವಾಲಾಗಿ ನಿರುದ್ಯೋಗ ಪರಿಣಮಿಸಿದೆ. ಒಬ್ಬ ವ್ಯಕ್ತಿ ಕೆಲಸ ಮಾಡಲು ಲಭ್ಯವಿದ್ದು ಕೆಲಸ ಮಾಡುವ ಇಚ್ಛೆಯನ್ನು ಹೊಂದಿದ್ದು, ಆದರೆ ಸದ್ಯಕ್ಕೆ ಆತನಿಗೆ ಮಾಡಲು ಕೆಲಸವಿಲ್ಲದೆ ಇದ್ದಾಗ ನಿರುದ್ಯೋಗ ಉದ್ಭವಿಸುತ್ತದೆ. ಸಾಮಾನ್ಯವಾಗಿ ಈ ವರ್ಗದ ಜನರ ಸಮೂಹವನ್ನು ಒಟ್ಟು ನಿರುದ್ಯೋಗ ದರವನ್ನು ಬಳಸಿಕೊಂಡು ಮಾಪನ ಮಾಡುತ್ತಾರೆ. ಇದನ್ನು ಒಟ್ಟು ಶ್ರಮಶಕ್ತಿಯಲ್ಲಿರುವ ಶೇಕಡವಾರು ನಿರುದ್ಯೋಗಿಗಳ ಮೂಲಕ ವ್ಯಾಖ್ಯಾನಿಸಲಾಗುತ್ತದೆ. ಅದಲ್ಲದೆ ವಿಶಾಲಾತ್ಮಕ ಅರ್ಥಶಾಸ್ತ್ರದ ಸ್ಥಿತಿಯ ಮಾನದಂಡವಾಗಿ ಬಳಸಲ್ಪಡುವ ಯುನೈಟೆಡ್ ಸ್ಟೇಟ್ಸ್ನ ಕಾನ್ಫರೆನ್ಸ್ ಬೋರ್ಡ್ ಗಳ ಮುಂದುವರಿದ ವಿಷಯ ಸೂಚಿಯ ರೀತಿಯಲ್ಲಿ ನಿರುದ್ಯೋಗ ದರವನ್ನು ಆರ್ಥಿಕ ಅಧ್ಯಯನದಲ್ಲಿ ಮತ್ತು ಅರ್ಥಶಾಸ್ತ್ರ ವಿಷಯದ ಸೂಚಿಗಳಲ್ಲಿ ಕೂಡ ಬಳಸಲಾಗುತ್ತದೆ.
ಹಲವಾರು ಅರ್ಥಶಾಸ್ತ್ರಜ್ಞರು ನಿರುದ್ಯೋಗವನ್ನು ಹಲವಾರು ರೀತಿಯಲ್ಲಿ ವಿವರಿಸಿದ್ದಾರೆ. ಆರ್ಥಿಕತೆಯಲ್ಲಿ ಸರಕು ಮತ್ತು ಸೇವೆಗಳ ಮೇಲಿನ ಅಸಮರ್ಪಕ ಪರಿಣಾಮಕಾರಿಯಾಗಿ ಬೇಡಿಕೆಯ ಕೊರತೆಯ ಪರಿಣಾಮವಾಗಿ ನಿರುದ್ಯೋಗ ಸಂಭವಿಸುತ್ತದೆ ಎಂದು ಹೇಳಿದ್ದಾರೆ. ಕೆಲವೊಮ್ಮೆ ಅಡ್ಡಿಪಡಿಸುವ ತಂತ್ರಜ್ಞಾನಗಳಿಂದ ಅಥವಾ ಜಾಗತಿಕರಣದಿಂದ ಪ್ರೇರಿತವಾಗಿ ರಚನಾತ್ಮಕ ನಿರುದ್ಯೋಗವು ಅಗತ್ಯ ವೃತ್ತಿ ಕೌಶಲ್ಯದೊಂದಿಗೆ ಕಾರ್ಮಿಕರ ಬೇಡಿಕೆ ಮತ್ತು ಪೂರೈಕೆ ನಡುವೆ ಸಮರ್ಪಕ ಹೊಂದಾಣಿಕೆಯನ್ನು ಹೊಂದಿರುವುದು ಕೂಲಿ ಕಾರ್ಮಿಕರ ಮಾರುಕಟ್ಟೆಗಳಲ್ಲಿನ ರಚನಾತ್ಮಕ ಸಮಸ್ಯೆಗಳು ಹಾಗೂ ಅಸಮರ್ಥತೆಯ ಮೂಲ ಸ್ವರೂಪವಾಗಿದೆ. ನಿರುದ್ಯೋಗಿಗಳ ಸ್ವಯಂ ಪ್ರೇರಿತ ಆಯ್ಕೆಗಳಿಂದ ಮತ್ತು ಹೊಸ ಉದ್ಯೋಗವನ್ನು ಹುಡುಕಿಕೊಳ್ಳುವ ನಡುವಿನ ಸಮಯದ ಕಾರಣದಿಂದಾಗಿ ನಿರುದ್ಯೋಗ ವ್ಯಾಪಕವಾಗಿ ಬೆಳೆಯುತ್ತಿದೆ.
ನಿರುದ್ಯೋಗದಿಂದಾಗಿ ದೇಶದಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ವ್ಯಕ್ತಿಗಳು ಹಣ ಗಳಿಸಿ ತಮ್ಮ ಆರ್ಥಿಕ ಕರ್ತವ್ಯವನ್ನ ಪೂರೈಸಲು ಸಾಧ್ಯವಾಗುವುದಿಲ್ಲ. ವತ್ತೆ ಇಟ್ಟ ವಸ್ತುಗಳಿಗೆ ಹಣ ಪಾವತಿಸಲು ಅಥವಾ ಮನೆಯ ಬಾಡಿಗೆ ನೀಡಲು ಫಲವಾಗುತ್ತಾರೆ. ಅದಲ್ಲದೆ ಅಪೌಷ್ಟಿಕತೆ, ಅನಾರೋಗ್ಯ, ಮಾನಸಿಕ ಒತ್ತಡಗಳು ಹೆಚ್ಚಿಸುತ್ತದೆ. ಜೊತೆಗೆ ಆತ್ಮ ಗೌರವ ಕಡಿಮೆಗೊಳಿಸಿ ಖಿನ್ನತೆಯನ್ನ ವೃದ್ಧಿಪಡಿಸುತ್ತದೆ. ಜೊತೆಗೆ ಆತ್ಮ ಗೌರವ ಕಡಿಮೆಗೊಳಿಸಿ ಖಿನ್ನತೆಯನ್ನ ವೃದ್ಧಿಪಡಿಸುತ್ತದೆ. ನಿಜ ಜೀವನದಲ್ಲಿ ವ್ಯಕ್ತಿಗಳು ಎದುರಿಸಿದ ಒತ್ತಡ ಮತ್ತು ಕೇವಲ ವಿದ್ಯಾರ್ಥಿ ಸಮೂಹ ಅಷ್ಟೇ ಅಲ್ಲದೆ ಆಶಾವಾದಿಗಳು ಕೂಡ ನಿರುದ್ಯೋಗದಲ್ಲಿ ತೀವ್ರ ಪ್ರಯಾಸ ಪಡುತ್ತಾರೆ. ಎಲ್ಲರಿಗೂ ನಿರುದ್ಯೋಗ ವಿಮಾ ಪ್ರಯೋಜನ ಪಡೆಯುವುದು ಕಷ್ಟವಾಗಿದ್ದು ಅದನ್ನು ಪಡೆಯಲು ಸಾಧ್ಯವಾಗದೆ ಹಾಗೆ ಕೆಲಸ ಮಾಡಿದರು ಉದ್ಯೋಗ ಹಾಗೂ ನಿರುದ್ಯೋಗವು ಬದಲಿಗಿಂತ ಹೆಚ್ಚಾಗಿ ಅಗತ್ಯತೆಯನ್ನು ಪೂರೈಸುವುದಾಗಿದೆ.
ಅಲ್ಲದೆ ಪ್ರಮುಖವಾಗಿ ಆರ್ಥಿಕ ಸಂಪನ್ಮೂಲದ ಕೊರತೆ ಮತ್ತು ಸಾಮಾಜಿಕ ಜವಾಬ್ದಾರಿ ಇವುಗಳ ಸಮ್ಮಿಶ್ರಯದಿಂದಾಗಿ ನಿರುದ್ಯೋಗಿ ಕೆಲಸಗಾರರು ತಮಗೆ ನೈಪುಣ್ಯತೆ ಇಲ್ಲದೆ ಕೆಲಸದಲ್ಲಿ ಅಥವಾ ಅವರ ಪ್ರತಿಭೆ ತೋರಿಸಲು ಅಸಮರ್ಥವಾದ ಕೆಲಸದಲ್ಲಿ ದುಡಿಯುವಂತೆ ಮಾಡುತ್ತದೆ. ನಿರುದ್ಯೋಗ ಕಡಿಮೆ ಉದ್ಯೋಗಕ್ಕೆ ಕಾರಣವಾಗಬಹುದು ಮತ್ತು ಕೆಲಸ ಕಳೆದುಕೊಳ್ಳುವ ಭಯದ ಜೊತೆಗೆ ಮಾನಸಿಕ ಕಳವಳಕ್ಕೂ ನಾಂದಿಯಾಗಬಹುದು. ಕಡಿಮೆ ಕೂಲಿಯಿಂದಾಗಿ ಮಹಾ ಆರ್ಥಿಕ ಕುಸಿತದ ಕಷ್ಟಕರ ನಿರುದ್ಯೋಗ ಉಂಟಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಉದ್ಯೋಗಕ್ಕಾಗಿ ಅಲೆಯುವವರ ಸಂಖ್ಯೆ ಮಿತಿ ಮೀರಿ ಬೆಳೆಯುತ್ತಿದೆ. ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಪದವಿ ಪಡೆದವರು ಕೂಡ ಉದ್ಯೋಗಕ್ಕಾಗಿ ಅಲೆಯಬೇಕಾದ ಪರಿಸ್ಥಿತಿ ಉಂಟಾಗಿದೆ. ಇದಕ್ಕೆ ಮುಖ್ಯವಾಗಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಕೆಲಸ ಕಾರ್ಯಗಳಲ್ಲಿ ಯಂತ್ರೋಪಕರಣಗಳ ಬಳಕೆ. ಜನರು ಇದರಿಂದ ಸೋಮಾರಿಗಳಾಗುತ್ತಿದ್ದಾರೆ, ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ, ಹಣ ಸಂಪಾದನೆ ,ಕಳ್ಳತನ, ಕೊಲೆ, ಸುಲಿಗೆ, ದರೋಡೆ ಮೊದಲಾದ ಸಮಾಜ ವಿರೋಧಿ ಕಾರ್ಯಗಳಲ್ಲಿ ತೊಡಗುತ್ತಾರೆ. ಹೀಗೆ ಯುವ ಜನತೆ ಹಾದಿ ತಪ್ಪುವುದರಿಂದ ದೇಶದಲ್ಲಿ ರಾಜಕತ್ತೆ ಸೃಷ್ಟಿಯಾಗುತ್ತಿದೆ. ಭಯೋತ್ಪಾದನೆ ಸಂಘಟನೆಗಳು ಹೆಚ್ಚುತ್ತಿವೆ.
ಆದ್ದರಿಂದ ಯಾವುದೇ ದೇಶದ ಸರ್ಕಾರ ಮತ್ತು ಅಲ್ಲಿನ ಜನತೆ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸುವಂತೆ ತೀವ್ರವಾಗಿ ಗಮನಿಸಬೇಕಾಗಿದೆ. ಗ್ರಾಮೀಣ ಕೈಗಾರಿಕೆಗಳಿಗೆ ಉತ್ತೇಜನ ಕೊಟ್ಟು ಅಭಿವೃದ್ಧಿ ಹೊಂದಲು ಅವಕಾಶ ಮಾಡಿಕೊಡಬೇಕು. ವಿದ್ಯಾಭ್ಯಾಸಕ್ರಮವನ ಬದಲಾಯಿಸಿ ಶಾಲಾ ಹಂತದಲ್ಲಿಯೇ ವೃತ್ತಿಪರ ಶಿಕ್ಷಣವನ್ನು ಒದಗಿಸಬೇಕು. ಯುವಜನರ ಸ್ವಯಂ ಉದ್ಯೋಗ ಮಾಡಲು ಉಚಿತ ಸ್ಥಳಾವಕಾಶ, ಸಾಲ ಸೌಲಭ್ಯ ,ತೆರಿಗೆ ರಿಯಾಯಿತಿ, ಸೂಕ್ತ ಮಾರುಕಟ್ಟೆ ಸೃಷ್ಟಿಸುವ ಕಾರ್ಯಕ್ರಮವನ್ನು ಸರ್ಕಾರ ಮಾಡಿಕೊಡಬೇಕು. ಗ್ರಾಮೀಣ ಮಟ್ಟದಲ್ಲಿ ಉದ್ಯೋಗ ಮಾಡುವುದರ ಮುಖಾಂತರ ಪಟ್ಟಣಕ್ಕೆ ಉದ್ಯೋಗಕ್ಕಾಗಿ ವಲಸೆ ಬರುವುದನ್ನು ತಡೆಗಟ್ಟಬೇಕು ಸರ್ಕಾರದಲ್ಲಿರುವ ಲಂಚ ಗೋರತನ ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕು.
ಸರ್ಕಾರವು ಜನತೆಯ ಜ್ಞಾನದ ಮಟ್ಟ, ವಿದ್ಯಾರ್ಹತೆ , ಅನುಭವಕ್ಕೆ ತಕ್ಕ ಉದ್ಯೋಗಗಳನ್ನು ಒದಗಿಸಿ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಅನುವು ಮಾಡಿಕೊಟ್ಟಾಗ ಜನತೆ ಸಂತೋಷದಿಂದ ಪ್ರಮಾಣಿಕರಾಗಿ ತಮ್ಮ ಉದ್ಯೋಗದಲ್ಲಿ ಪ್ರಗತಿ ಸಾಧಿಸುತ್ತಾರೆ.ಆಗ ರಾಷ್ಟ್ರವು ಕೂಡ ತನಗೆ ಈ ಸಮಸ್ಯೆಗಳಿಂದ ಬಿಡುಗಡೆಗೊಂಡು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ.
ದಿವ್ಯಾ ಲೇಖಿ
ಎಂ.ಎಂ . ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಶಿರಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ