ಅಬ್ಬಬ್ಬಾ! ಆ ದಿನ ಮರೆಯಲಾಗದ ದಿನ. ತಂದೆ ತಾಯಿಯನ್ನು ತಬ್ಬಿಟ್ಟು ಕಣ್ಣಿನಲ್ಲಿ ನೀರು ತುಂಬಿಕೊಂಡು ಮನೆಯಿಂದ ಹೊರ ಬಂದ ದಿನ. ಅಪ್ಪ ,ಅಮ್ಮ ಮನೆಯೆಲ್ಲ ಬಿಟ್ಟು ಇನ್ನೊಂದು ಸುಂದರ ನವ ಕುಟುಂಬವನ್ನು ಸೇರುವುದು. ಆ ಸುಂದರ ಕುಟುಂಬವೇ ವಿದ್ಯಾರ್ಥಿ ನಿಲಯ. ಮನೆಯೇ ಪ್ರಪಂಚ ಅಂತ ಬೆಳೆದ ನಮಗೆ ಹಾಸ್ಟೆಲ್ ಅನ್ನೋದು ಒಂದು ಹೊಸದಾದ ಜಗತ
ಬಂದ ಮೊದಲ ದಿನ ಯಾರು ಪರಿಚಯವಿಲ್ಲವೇ ಎಲ್ಲರೂ ಅಪರಿಚಿತರು ನಿಜವಾಗಿಯೂ ಆಗ ನೆನಪಾಗುವುದು ಅಮ್ಮನ ಕೈ ರುಚಿ ಮತ್ತೆ ಅಪ್ಪನ ಕಾಳಜಿ. ಹಾಸ್ಟೆಲಿನ ಕೆಲವು ನಿಯಮ ಗೊತ್ತಿಲ್ಲದೇ ಮೊದಲ ದಿನವೇ ಮಾಡಿದ ಅನೇಕ ತಪ್ಪುಗಳು ಈ ನಿಯಮಗಳಿಗೆ ಹೊಂದಿಕೊಂಡು ಹೋದರೆ ನಿಜವಾಗಿಯೂ ಹಾಸ್ಟೆಲ್ ಒಂದು ಅದ್ಭುತ ಜೀವನ. ನನ್ನ ಜೀವನದ ಪಠ್ಯದಲ್ಲಿ ಹಾಸ್ಟೆಲ್ ಅನುಭವ ಒಂದು ಹೊಸ ಅಧ್ಯಯನವೇ ಸರಿ.
ಸೀನಿಯರ್ ನೋಡಿದ್ರೆ ಭಯ ಆದ್ರೆ ನಿಜವಾಗಿಯೂ ಕಳೆದುಕೊಂಡ ಅಪ್ಪ-ಅಮ್ಮನ ಪ್ರೀತಿಯನ್ನು ತುಂಬುವುದು ಅವರೇ. ಆದರೆ ಏನು ಮಾಡೋದು ಇದೆಲ್ಲದರ ನಡುವೆ ಯಾರೋ ಒಬ್ಬರು ಸೀನಿಯರ್ ಅತಿಯಾಗಿ ಇಷ್ಟ ಆಗಿರುತ್ತಾರೆ.
ಅವರ ಜೊತೆ ಹೊಂದಿಕೊಂಡ ಮೇಲೆ ಪ್ರತಿಯೊಂದು ಕ್ಷಣಗಳು ಬದುಕಿನ ಸವಿ- ಸವಿ ನೆನಪುಗಳೇ. ಅವರ ಜೊತೆ ಮುಗಿಯದ ಮಾತುಗಳು, ಹಾಸ್ಯ ಪಟಾಕಿಗಳು, ಪರೀಕ್ಷೆ ಹತ್ತಿರಕ್ಕೆ ಬಂದರು ತೆರೆಯದ ಪುಸ್ತಕಗಳು. ಗಂಟೆ ಹತ್ತಾದರೂ ಹೊಡೆಯದ ಅಲಾರಾಂ ಗಳು.
ಅಷ್ಟೇ ಅಲ್ಲದೇ ಹಾಸ್ಟೆಲ್ ನಲ್ಲಿ ಆಚರಿಸುವ ಕೆಲವೊಂದು ಕಾರ್ಯಕ್ರಮಗಳು ,ಹಬ್ಬಗಳು, ಆಚರಣೆಗಳು, ಅಲ್ಲಿ ನಾವು ಸೇರಿಕೊಂಡು ಮಾಡಿದ ಕಿತಾಪತಿಗಳು, ತರ್ಲೆಯಿಂದ ಮಾಡುವ ತುಂಟಾಟಗಳು, ಎಲ್ಲವೂ ಒಂದು ರೀತಿಯ ಅವಿಸ್ಮರಣೀಯ ನೆನಪುಗಳು. ಸಿಹಿ ತಿಂಡಿಯನ್ನು ಹಂಚಿ ತಿಂದುಕೊಂಡು ಖುಷಿಯಿಂದ ಕಳೆಯುವ ದಿನಗಳು ಮನೆಯೆಂಬ ಒಂದೇ ಸೂರಿ ನಡಿ ಎಲ್ಲಾ ಪಾತ್ರಗಳು ಮನಸ್ಸಿಗೆ ಸನಿಹ.
ಇದು ಹಾಸ್ಟೆಲ್ ಅಂತ ತಿಳಿದಿದ್ದರು ನಾವೆಲ್ಲರೂ ಒಂದೇ ಎಲ್ಲರೂ ನಮ್ಮವರೇ ಎನ್ನುವ ಅರಿವು. ಕಷ್ಟಾನು ಸುಖಾನ ದಿನ ಬೆಳಗಾದರೆ ಒಬ್ಬರನ್ನು ಒಬ್ಬರು ನೋಡಿಕೊಂಡು ದಿನನಿತ್ಯದ ಕೆಲಸದಲ್ಲಿ ತೊಡಗಿಕೊಂಡು ತಾನು ಕಂಡಂತಹ ಹಾಗೂ ಮನೆಯವರು ಹೆಗಲೇರಿಸಿ ಕೊಟ್ಟಂತಹ ಕನಸಿಗೆ ಪ್ರತಿದಿನವೂ ಹಿಡಿಯಷ್ಟು ಪ್ರಯತ್ನ ಹಾಕಿ ಜೀವನದ ಗುರಿಯ ಮೆರೆಯನ್ನು ದಾಟುವ ತವಕ , ಒಂದೆಡೆಯಾದರೆ ತನ್ನದೆಲ್ಲದ ಊರಿನಲ್ಲಿ ತನ್ನತನವನ್ನು ಕಾಪಾಡಿಕೊಂಡು ತಮ್ಮವರಿಗಾಗಿ ನಿತ್ಯವೂ ಹಂಬಲಿಸಿದೆ ಮನ.
ಹಾಗೆಂದ ಮಾತ್ರಕ್ಕೆ ಹಾಸ್ಟೆಲ್ ಜೀವನವೆಂದರೆ ಕೇವಲ ಭಾವನೆಯನ್ನು ವ್ಯಕ್ತಪಡಿಸುವುದಲ್ಲ. ಬದಲಾಗಿ ಇಂಚಿಂಚು ಭಾವನೆಗಳನ್ನು ನಾಲ್ಕು ಗೋಡೆಯ ಮಧ್ಯದಲ್ಲಿ ಇದ್ದುಕೊಂಡು ಯಾರಿಗೂ ಗೊತ್ತಾಗದ ಹಾಗೆ ಅನುಭವಿಸುವುದು.
ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಶಿರಸಿ
ಕಾವ್ಯಾ ತಿಪ್ಪಕ್ಕನವರ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ