ಹೆಚ್ಚುತ್ತಿರುವ ವೃದ್ಧಾಶ್ರಮ - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಮಂಗಳವಾರ, ಅಕ್ಟೋಬರ್ 15, 2024

ಹೆಚ್ಚುತ್ತಿರುವ ವೃದ್ಧಾಶ್ರಮ

 

                   ವೃದ್ಧಾಶ್ರಮಗಳು ವೃದ್ಧರಿಗೆ ವಸತಿ ಕಲ್ಪಿಸಲು ನೆರವಿನ ಜೀವನ ಸೌಲಭ್ಯಗಳನ್ನು ಹೊಂದಿರುವ ನಿವಾಸಿಗಳು ಇಲ್ಲಿ ವಯಸ್ಸಾದವರಿಗೆ ಅವರ ಅಗತ್ಯತೆಗಳು ಮತ್ತು ಕಾಳಜಿಗಳ ಆಧಾರದ ಮೇಲೆ ನಿರಂತರ ಆರೋಗ್ಯ ಮತ್ತು ಗಮನವನ್ನು ನೀಡಲಾಗುತ್ತದೆ. ಅವಿಭಕ್ತ ಕುಟುಂಬ ವ್ಯವಸ್ಥೆಯು ಭಾರತೀಯ ಕುಟುಂಬದ ಒಂದು ಮಹತ್ವದ ಅಂಶವಾಗಿದೆ. 

                ಇಂದಿನ ಸಮಾಜದಲ್ಲಿ ವೃದ್ಧಾಶ್ರಮಗಳು ಹೆಚ್ಚು ಮಹತ್ವ ಪಡೆದಿವೆ. ಇಲ್ಲಿ ವಿಭಕ್ತ ಕುಟುಂಬಗಳು ರೂಢಿಯಾಗುತ್ತಿವೆ. ಹೆಚ್ಚು ಹೆಚ್ಚು ಹಿರಿಯರು ಕುಟುಂಬದೊಂದಿಗೆ ಬದುಕುವುದಕ್ಕಿಂತ ವೃದ್ರಾಶ್ರಮಗಳಲ್ಲಿ ವಾಸಿಸುತ್ತಿದ್ದಾರೆ.

          ವೃದ್ಧಾಶ್ರಮವೆಂದರೆ ವಯಸ್ಸಾದವರಿಗೆ ಆಹಾರ ಬಟ್ಟೆ ಮುಂತಾದ ಮೂಲ ಸೌಕರ್ಯಗಳನ್ನು ನೀಡಿ ನೋಡಿಕೊಳ್ಳುವ ಮನೆಯಾಗಿದೆ. ಮಕ್ಕಳು ದೊಡ್ಡವರಾದ ಮೇಲೆ ತಂದೆ ತಾಯಿಗಳನ್ನು ನೋಡಿಕೊಳ್ಳುವುದು ಒಂದು ದೊಡ್ಡ ಸಮಸ್ಯೆ ವಾಗಿದೆ. 

            ವೃದ್ಧಾಶ್ರಮಗಳು ಹೆಚ್ಚುತ್ತಿರುವ ಅತ್ಯಂತ ಕಷ್ಟವಾದ ಕಾರಣವೆಂದರೆ ಉತ್ತಮ ಶಿಕ್ಷಣ ಉದ್ಯೋಗಗಳು ಮತ್ತು ಸುಧಾರಿತ ಜೀವನ ಶೈಲಿಯನ್ನು ಹುಡುಕಿಕೊಂಡು ಮಕ್ಕಳು ತಮ್ಮ ಊರುಗಳಿಂದ ದೊಡ್ಡ ದೊಡ್ಡ ನಗರಗಳಿಗೆ ವಲಸೆ ಹೋಗುವುದು ಅಲ್ಲದೆ ಮಕ್ಕಳು ತಮ್ಮ ವಯಸ್ಸಾದ ಪೋಷಕರನ್ನು ಧೀರ್ಘಕಾಲದ ಆರೋಗ್ಯ ಸಮಸ್ಯೆಗಳೊಂದಿಗೆ ಕಾಳಜಿ ವಹಿಸುವುದಿಲ್ಲ ಮತ್ತು ಹಿರಿಯರು ತಮ್ಮ ಸೊಸೆ ಮೊಮ್ಮಕ್ಕಳನ್ನು ನಿಭಾಹಿಸಲು ಕಷ್ಟಪಡುತ್ತಾರೆ .

             ಮನೆಯಲ್ಲಿ ಎಲ್ಲಾ ಸದಸ್ಯರು ದುಡಿಯುವುದು ಅನಿವಾರ್ಯವಾಗಿದೆ ಹಾಗಾಗಿ ಮಕ್ಕಳು ಮತ್ತು ಹಿರಿಯರನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರು ಇರದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ವೃದ್ರಾಶ್ರಮಗಳು ಹೆಚ್ಚಾಗುತ್ತಿವೆ. ಕುಟುಂಬದಲ್ಲಿ ಅನೇಕ ಕಾರಣಗಳಿಂದ ಜಗಳ ಮಾಡಿ ತಮ್ಮ ತಂದೆ ತಾಯಿಗಳನ್ನು ವೃದ್ರಾಶ್ರಮಕ್ಕೆ ಸೇರಿಸುತ್ತಾರೆ.

           ವೃದ್ರಾಶ್ರಮಗಳು ಹೆಚ್ಚುತ್ತಿರಲು ಕಾರಣ ಅನೇಕ ವಿಭಕ್ತ ಕುಟುಂಬದ ಪರಿಕಲ್ಪನೆಯತ್ತ ವಾಲುತ್ತಿದ್ದಾರೆ ಮತ್ತು ಅಂತಿಮವಾಗಿ ತಮ್ಮ ಪೋಷಕರೊಂದಿಗೆ ಕೈಜೋಡಿಸುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಅನ್ವಯಿಸುತ್ತದೆ.

 ಹಣವು ಪ್ರಮುಖ ಅಂಶವಾಗುವುದರಿಂದ  ಹಿಂದುಳಿದ ಸಮುದಾಯ ಗಳಿಗೆ ಪ್ರಚಲಿತವಾಗಿದೆ. 

          ತಂದೆ ತಾಯಿಗಳು ನಮ್ಮಷ್ಟು ಕಲಿತಿಲ್ಲ ನಮ್ಮಷ್ಟು ಗಳಿಸಿಲ್ಲ ಎಂಬ ಅಹಂಕಾರದಿಂದಲೇ ಎಷ್ಟೋ ಮಂದಿ ತಮ್ಮ ತಂದೆ ತಾಯಿಯನ್ನು ಕೀಳಾಗಿ ಕಾಣುತ್ತಾರೆ ಹೀಗಾಗಿ ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ. 

                   ಹಿರಿಯರು ಹಾಕಿ ಕೊಟ್ಟ ಸಂಸ್ಕಾರಗಳನ್ನು ಎಲ್ಲರೂ ಮುಂದುವರಿಸಿಕೊಂಡು ಹೋಗಬೇಕು ಹಾಗಾಗಬೇಕಾದರೆ ಸಮಾಜದಲ್ಲಿ ಹಿರಿಯರನ್ನು ಗೌರವ ಆಧಾರಗಳಿಂದ ಕಾಣಬೇಕು ಹಿರಿಯರಿಗೆ ಬೇಕಾಗಿರುವುದು ಪ್ರೀತಿ ವಿಶ್ವಾಸ ಅದನ್ನು ಅರಿತು ಹಿರಿಯರನ್ನು ಕುಟುಂಬದಿಂದ ದೂರ ಇಡುವ ವ್ಯವಸ್ಥೆ ನಿಲ್ಲಬೇಕು. ಹಿರಿಯರ ಮಾರ್ಗದರ್ಶನ ಅವಶ್ಯವಾಗಿದೆ ಅದರಿಂದ ಸಂಸ್ಕಾರಗಳನ್ನು ತಿಳುವಳಿಕೆಗೆ ಮಾತುಗಳನ್ನು ತಿಳಿದು ಕಿರಿಯರು ಮುಂದುವರೆಯುವ ಅವಶ್ಯವಿದೆ.

                 ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಶಿರಸಿ

                       ಶ್ರೀದೇವಿ ಜಾವೋಜಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ