ಉತ್ತರ ಕನ್ನಡದ ಯಲ್ಲಾಪುರ ಹಾಗೂ ಅಂಕೋಲೆಯ ನಡುವಿನ ಗಂಗಾವಳಿ ನದಿ ದಡದಲ್ಲಿರುವ ಊರು ಕೈಗಡಿ. ಮೂಲಭೂತ ಸೌಕರ್ಯಗಳನ್ನು ಹೊಂದಿರದ ಕುಗ್ರಾಮ. ನಿತ್ಯ ಉಪಯೋಗಕ್ಕೆ ಬೇಕಾದ ಸಣ್ಣ ಸಣ್ಣ ವಸ್ತುಗಳು ಬೇಕಾದರೂ ನದಿ ದಾಟಿ ದೂರದ ಗುಳ್ಳಾಪುರಕ್ಕೆ ಹೋಗಬೇಕು. ಮಳೆಗಾಲದಲ್ಲಿ ಪಟ್ಟಣಕ್ಕೂ ಊರಿಗೂ ಇರುವ ಒಂದೇ ಒಂದು ರಸ್ತೆಯು ಹಳ್ಳ ಕೊಳ್ಳಗಳು ತುಂಬಿಹರಿದು ಸಂಚಾರವೇ ಸ್ಥಗಿತವಾಗುತ್ತಿತ್ತು. ಆಗಂತೂ ಆ ಊರು ಎಲ್ಲೆಡೆಯಿಂದ ಸಂಪರ್ಕವನ್ನು ಕಳೆದುಕೊಂಡು ಸುತ್ತಲೂ ನೀರು ತುಂಬಿ ದ್ವಿಪದಂತಾಗಿಬಿಡುತ್ತಿತ್ತು.
ಇಂದಿನ ಆಧುನಿಕ ಯುಗದಲ್ಲೂ ಮಳೆಗಾಲಕ್ಕೆ ಬೇಕಾದ ಸಾಮಗ್ರಿಗಳನ್ನು ಮುಂಚಿತವಾಗಿಯೇ ತಂದಿಟ್ಟುಕೊಳ್ಳುವ ಪರಿಸ್ಥಿತಿ ಇಂದಿಗೂ ಇದೆ. ಸಾಮಗ್ರಿಗಳನ್ನೇನೋ ಮುಂಚಿತವಾಗಿಯೇ ತಂಡಿಡಬಹುದು ಆದರೆ ಆರೋಗ್ಯ ಹಾಗಲ್ಲವಲ್ಲ ಅದು ಹೇಗೆ ಯಾವಾಗ ಕೇಡುತ್ತದೆಯೋ ಯಾರಿಗೂ ತಿಳಿಯದು. ಹೀಗಿದ್ದಾಗ ಅನಿವಾರ್ಯ ಸಂಚಾರಕ್ಕೆಂದೇ ಅವರು ಮೊದಲಿನಿಂದಲೂ ಅನುಸರಿಸಿಕೊಂಡು ಬಂದ ಪರ್ಯಾಯ ಮಾರ್ಗವೇ ತೆಪ್ಪ.
ತೆಪ್ಪ ದಪ್ಪನೆಯ ಬೀದಿರುಗಳನ್ನು ಸಾಲಾಗಿ ಜೋಡಿಸಿ ಗಟ್ಟಿಯಾದ ಕಟ್ಟುಗಳನ್ನು ಬಿಗಿದು ಮಾಡಿರುವ ನದಿ ದಾಟುವ ಸಾಧನ. ಮಳೆಗಾಲದ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಈ ಊರಿಗೆ ಅದೇ ದಾರಿದೀಪ. ಹೇಗಾದರೂ ಮಾಡಿ ನದಿ ದಾಟಿಕೊಂಡರೆ ಮುಂದೆ ಪೇಟೆಯನ್ನ ಸೇರಬಹುದಿತ್ತು.
ತೆಪ್ಪ ಅನಾರೋಗ್ಯ ಉಂಟಾದವರಿಗೆ ಮಾತ್ರವಲ್ಲ ಎಲ್ಲರಿಗೂ ಅಗತ್ಯವಾದದ್ದೆ ಆಗಿತ್ತು. ಶಾಲೆಗೇ ಹೋಗುವ ಮಕ್ಕಳು, ಪೇಟೆಗೆ ಸಾಮನು ತರಲು ಹೋಗುವವರು, ವಾರದ ಸಂತೆಗೆ ಬೆರಲಸಿನ ಕಾಯನ್ನು ತೆಗೆದುಕೊಂಡು ಹೋಗುವ ಹೆಬ್ಬಾರರು ಮತ್ತು ಅವರ ಎರಡು ಮೂಟೇಯು ತೆಪ್ಪದ ಮೇಲೆಯೇ ದಾಟುವುದಾಗಿತ್ತು.
ಒಂದಲ್ಲ ಒಂದು ಕೆಲಸದ ಮೇಲೆ ಎಲ್ಲರೂ ಅದರ ಪ್ರಯಾಣಿಕರೇ. ಅದಕ್ಕಾಗೇ ವರ್ಷಕ್ಕೊಮ್ಮೆ ಎಲ್ಲರೂ ಸೇರಿ ತೆಪ್ಪ ಕಟ್ಟುವ ಪದ್ಧತಿ ಅದೂ ಇಂದಿಗೂ ಇದೆ.
ಪೇಟೆಗೆ ಹೋದವರು ಮರಳಿ ಬರಲು ಹೊತ್ತಾಗುತ್ತಿತ್ತು. ಮತ್ತೆ ತೆಪ್ಪದ ಮೇಲೆಯೇ ದಾಟಿ ಬರಬೇಕು. ನಮ್ಮ ಸಮಯಕ್ಕೆ ದಾಟಿಸುವವರು ಬೇಕಲ್ಲವೇ. ಅದಕ್ಕಾಗೇ ಅವರು ಆರುನೂರು ಮೀಟರ್ ದೂರದಲ್ಲಿರುವ ಮನೆಗಳಿಗೆ ಕೇಳಿಸುವ ಹಾಗೆ ಕೂ... ಹಾಕಬೇಕಿತ್ತು ಅದು ಒಮ್ಮೊಮ್ಮೆ ಕೇಳಿಸಿದರೆ ಕೇಳಿಸಿತು ಇಲ್ಲವೆಂದರೆ ಇಲ್ಲ.
ನನಗಿನ್ನೂ ನೆನಪಿದೆ ನಾನಾಗ ಚಿಕ್ಕವನು ನಮ್ಮಪ್ಪ ಅಮ್ಮ ನಾನು ಪೇಟೆಯಿಂದ ಸಂಜೆಯ ವೇಳೆಗೆ ನದಿಯ ಹತ್ತಿರ ಬಂದು ಕೂ.. ಹಾಕುತ್ತಿದ್ದೆವು ನಮ್ಮಪ್ಪ ಎಷ್ಟೇ ಕೂ... ಹಾಕಿದರು ಯಾವುದೆ ಪ್ರತಿಕ್ರಿಯೆ ಇರಲಿಲ್ಲ ಕೊನೆಗೆ ರಾತ್ರಿ ಮೀನು ಹಿಡಿಯುವವರು ನಮ್ಮನ್ನು ನದಿ ದಾಟಿಸಿದ್ದುಂಟು.
ತೆಪ್ಪ ದಾಟಿಸುವಾಗ ನೀರಿನ ಸುಳಿಗೆ ಸಿಲುಕಿ ಒಮ್ಮೆಲೇ ಕೆಳಕ್ಕೆ ತೆಲಿಹೋಗಿ ಮತ್ತೇ ಮೇಲೇ ಬರುವುದು ಸಹಜ ಅದರಲ್ಲಿ ಕೂತ ಹೆಣ್ಣುಮಕ್ಕಳಿಗಂತೂ ತೆಪ್ಪ ತೆಲುವಾಗ ಭಯವಾಗಿ ಗಟ್ಟಿಯಾಗಿ ಕಿರುಚಿಕೊಂಡದ್ದು ಇದೇ. ಎಷ್ಟೇ ಭಯವಾದರು ದಾಟುವುದು ಅನಿವಾರ್ಯ.
ನೋಡುಗರಿಗೆ ಇದು ಸಾಮಾನ್ಯವಾದ ನದಿ ದಾಟುವ ತೆಪ್ಪ ಆದರೆ ಈ ಊರಿಗೂ ತೇಪ್ಪಕ್ಕೂ ಇರುವ ನಂಟು ಅವಿಸ್ಮರಣೀಯ. ನಿಧಾನವಾಗಿ ಇಂದಿಗೆ ಅದರ ಸ್ಥಾನವನ್ನ ಫೈಬರ್ ದೋಣಿಗಳು ಅಲಂಕರಿಸಿದರು ತೆಪ್ಪದ ಸಂಚಾರದ ಅಂದಿನ ದಿನಗಳು ನೆನಪರಲಾರವೂ.
-ಸಂಜಯ್ ಸಿದ್ದಿ
ಪತ್ರಿಕೋಧ್ಯಮ ವಿಭಾಗ
ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಶಿರಸಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ