"ಕೈ ಹಿಡಿದು ನಡೆಸಿದವರಿಗೆ ಆಸರೆಯಾಗೋಣ"
ಮಾನವ ಜನ್ಮ ಅತಿ ದೊಡ್ಡದು. ಆ ಜನ್ಮ ನಮಗೆ ದೊರೆಯಲು ಕಾರಣ ನಮ್ಮ ತಂದೆ ತಾಯಿ. ಹುಟ್ಟಿನಿಂದ ಬೆಳೆದು ದೊಡ್ಡವರಾಗುವರೆಗೂ ತಮ್ಮ ಸರ್ವಸ್ವವನ್ನು ಮಕ್ಕಳಿಗೆ ಧಾರೇ ಎರೆಯುತ್ತಾರೆ. ತಾವು ಒಂದು ಹೊತ್ತು ಉಪವಾಸವಿದ್ದರೂ ಮಕ್ಕಳನ್ನು ಸಂತೃಪ್ತಗೋಳಿಸುತ್ತಾರೆ. ಮಕ್ಕಳ ಏಳಿಗೆಗಾಗಿ ಹಗಲು ರಾತ್ರಿ ಎನ್ನದೆ ಕಷ್ಟ ಪಟ್ಟು ದುಡಿದು ಅವರಿಗೆ ತಮ್ಮ ಜೀವನವನ್ನೇ ಮುಡಿಪಾಗಿ ಇಡುತ್ತಾರೆ.
ಮಕ್ಕಳು ತಮ್ಮ ಹಾಗೆ ಶ್ರಮಿಕರಾಗುವುದು ಬೇಡ, ಕಷ್ಟ ಪಡುವುದು ಬೇಡ,ಓದಿ ವಿದ್ಯಾವಂತರಾಗಿ ಒಳ್ಳೆಯ ಹುದ್ದೆಗೆ ಸೇರಲಿ ಎಂಬುದು ಎಲ್ಲ ತಂದೆ ತಾಯಿಯರ ಕನಸು. ಅವರನ್ನು ಚೆನ್ನಾಗಿ ಓದಿಸಿ ಶಿಕ್ಷಣವಂತರನ್ನಾಗಿಸುತ್ತಾರೆ.ಆದರೆ ಬೆಳೆದು ದೊಡ್ಡವರಾದ ಮಕ್ಕಳು ಇಷ್ಟೆಲ್ಲಾ ನೀಡಿದ ತಂದೆ ತಾಯಿಯನ್ನು ಕಡೆಗಣಿಸುತ್ತಾರೆ. ಅವರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಎಲ್ಲಿಯಾದರೂ ಅವರಿಗೆ ಅನಾರೋಗ್ಯ ಕಾಡಿದರೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸಬೇಕು ಎಂಬುದರ ಬಗ್ಗೆ ಯೋಚಿಸುವುದಿಲ್ಲ.
ಹೆತ್ತವರಿಗೆ ಮಕ್ಕಳು ಎಂದು ಭಾರವೆನಿಸಲಾರರು,ಆದರೆ ಬೆಳೆದು ನಿಂತ ಮಕ್ಕಳಿಗೆ ಮಾತ್ರ ತಮ್ಮ ಪಾಲಕರು ಹೊರೆಯಾಗುತ್ತಾರೆ. ಅವರನ್ನು ನೋಡಿಕೊಳ್ಳುವುದು ಕಷ್ಟವಾಗಿ ಬಿಡುತ್ತದೆ. ಮದುವೆಯಾದ ತಮ್ಮ ಸಂಗಾತಿಯ ಮಾತನ್ನು ಕೇಳಿಕೊಂಡು ತಮ್ಮ ತಂದೆ ತಾಯಿಯನ್ನೇ ದೂರವಿಡುತ್ತಾರೆ. ಅವರನ್ನು ವೃದ್ದಾಶ್ರಮಕ್ಕೆ ತಳ್ಳುತ್ತಾರೆ. ಕೊನೆಗಾಲದಲ್ಲಿ ದೊರೆಯಬೇಕಾದ ಪ್ರೀತಿ ಕಾಳಜಿಯಿಂದ ಅವರು ವಂಚಿತರಾಗುತ್ತಾರೆ.
ಹೆತ್ತವರು ತಮ್ಮ ಮಕ್ಕಳು ಓದಿ ಸಂಸ್ಕಾರವಂತರಾಗಿ ಎಂದು ಭಾವಿಸಿದರೆ, ವಿದ್ಯೆ ಹಾಗು ಹಣದ ಅಮಲಿನಲ್ಲಿ ಮಾನವೀಯ ಮೌಲ್ಯವನ್ನೇ ಮರೆತ ಇಂದಿನ ಪೀಳಿಗೆಯ ಜನರು ಪಾಲಕರನ್ನೇ ದೂರ ತಳ್ಳುತ್ತಾರೆ. ಅವರನ್ನು ಒಂಟಿಯಾಗಿಸುತ್ತಾರೆ.ಆ ಹಿರಿಯ ಜೀವಗಳು ಆಸ್ತಿ ಹಣವನ್ನು ಬಯಸುವುದಿಲ್ಲ, ಬದಲಾಗಿ ತಮ್ಮೊಂದಿಗೆ ಮಕ್ಕಳು ಸ್ವಲ್ಪ ಸಮಯ ಕಳೆಯಲಿ ಎಂದು ಬಯಸುತ್ತಾರೆ.ಆದ್ದರಿಂದ ಅವರ ಮುಪ್ಪಿನ ಕಾಲದಲ್ಲಿ ಹೆಚ್ಚು ಕಾಳಜಿ ವಹಿಸಿ ಅವರಿಗೆ ಸೊಂತೋಷವನ್ನು ನೀಡುವುದು ಪ್ರತಿ ಮಕ್ಕಳ ಕರ್ತವ್ಯ.ನಮ್ಮ ಕೈ ಹಿಡಿದು ನಡೆಸಿದವರಿಗೆ ಆಸರೆಯಾಗೋಣ.
ಅರ್ಚನಾ ನಾಯ್ಕ್
B.A 2 year
ಪ್ರತಿಕೋದ್ಯಮ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ