ಜಾನಪದ ಮತ್ತು ಗ್ರಾಮೀಣ ಕ್ರೀಡೆ ನಮ್ಮ ಹೋರಿ ಹಬ್ಬ
ಉತ್ತರ ಕರ್ನಾಟಕ ಹಾವೇರಿ ಜಿಲ್ಲೆಯ , ಜಾನಪದ ಕ್ರೀಡೆಯಾದ ಹೋರಿ ಹಬ್ಬದ ತವರೂರು ಹಾಗೂ ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದೇ ಪ್ರಸಿದ್ಧವಾದ ಜಿಲ್ಲೆಯಾಗಿದೆ.
ಉತ್ತರ ಕರ್ನಾಟಕ ಹೆಸರಾಂತ ಹಬ್ಬ ಹೋರಿ ಹಬ್ಬ ಇದು ಒಂದು ಜಾನಪದ ಮತ್ತು ಗ್ರಾಮೀಣ ಕ್ರೀಡೆ .ಹಾವೇರಿಜಿಲ್ಲೆಯಲ್ಲಿ ಪ್ರತಿ ವರ್ಷವೂ ಹಳ್ಳಿಗಳಲ್ಲಿ ರಾಷ್ಟ್ರಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯನ್ನು ಹಮ್ಮಿಕೊಳ್ಳುತ್ತಾರೆ.
ಬಹುಮಾನಗಳನ ಬಂಪರ್ ಬಹುಮಾನ, ಪ್ರಥಮ ಬಹುಮಾನ, ದ್ವಿತೀಯ ಬಹುಮಾನ, ತೃತೀಯ ಬಹುಮಾನಗಳನ ನಿಗದಿಪಡಿಸಿರುತ್ತಾರೆ.
ಹೋರಿಗಳು ಕೊರಳಲ್ಲಿ ಹೂವಿನ ಹಾರ, ಕೋಡುಗಳಿಗೆ ರಿಬ್ಬನ್, ಬಲೂನ್‌ಗಳಿಂದ ಸಿಂಗಾರಗೊಂಡು ಮಿಂಚಿನ ವೇಗದಲ್ಲಿ ಓಡುವ ಹೋರಿಗಳು, ಸಿಳ್ಳೆ, ಕೇಕೆ ನಡುವೆ ಕೊಬ್ಬರಿ ಹರಿಯಲು ಯತ್ನಿಸುವ ಯುವಕರ ದಂಡು… ಇಂತಹ ಮೈ ರೋಮಾಚನಗೊಳಿಸುವ ದೃಶ್ಯಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಈ ಹೋರಿ ಹಬ್ಬವನ್ನು ನೋಡುವುದಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ ಮತ್ತು ಬೇರೆ ಬೇರೆ ರಾಜ್ಯಗಳಿಂದ ಹೋರಿಗಳನ್ನು ತರುತ್ತಾರೆ.
ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಸುಮಾರು 400 ಹೋರಿಗಳು ಪ್ರತಿ ಹಬ್ಬದ ಲ್ಲಿ ಪಾಲ್ಗೊಳ್ಳುತ್ತವೆ. ಈ ಹೋರಿ ಹಬ್ಬವನ್ನು ಸರ್ಕಾರ ದಿಂದ ಪ್ರವೇಶವನ್ನು ತೆಗೆದುಕೊಂಡು ಹಬ್ಬ ಮಾಡು ತ್ತಾರೇ. ಪ್ರತಿ ಹಬ್ಬದಲ್ಲಿ 1 ಹೋರಿಗೆ ಪ್ರವೇಶ ಪೀ 4000 ರೂಪಾಯಿಗಳನ ನಿಗದಿಪಡಿಸಿರುತ್ತಾರೆ.
ಹೋರಿ ಬೆದರಿಸುವ ಸ್ಪರ್ಧೆಯನ್ನು ಬೆಳಗೆ 9:00 ಗಂಟೆಯಿಂದ ಸಾಯಂಕಾಲ5:00 ಗಂಟೆಯ ವೇಳೆಗೆ ದನಗಳನ್ನು ಓಡಿಸುತ್ತಾರೆ. ಹಬ್ಬ ಮುಗಿದ ನಂತರ ಚೆನ್ನಾಗಿ ಓಡಿರುವ ಹೋರಿ ಗಳಿಗೆ ಬಹುಮಾನವನ್ನು ಕೊಡಲಾಗುತ್ತದೆ.
ಹಾವೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಹೋರಿ ಮತ್ತು ಇತಿಹಾಸವನ್ನೇ ಸೃಷ್ಟಿಸಿದ "ಹಾವೇರಿ ರಾಕ್ ಸ್ಟಾರ" ಇದು "ಮನ ಮೆಚ್ಚಿದ ಜೋಡಿ" ಸಿನಿಮಾದಲ್ಲಿ ಅಭಿನಯಿಸಲಿಕ್ಕೆ ತಗೊಂಡಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಹೆಚ್ಚು ಹೆಸರುವಾಸಿಯಾಗಿರುವ ಹೋರಿಗಳು
ಹಾವೇರಿ ರಾಕ್ ಸ್ಟಾರ್, ಹಾವೇರಿ ಅನ್ನದಾತ, ಹಾವೇರಿ ಪವರ್, ಹಾವೇರಿ ಕ್ರಾಂತಿ, ಹಾವೇರಿ ಅರ್ಜುನ, ಬಾಳಂಬೀಡ ರಾಯಣ್ಣ, ಕರ್ನಾಟಕ ನಂದಿ, ಹುಲಿಗಿನ ಕೊಪ್ಪದ ನಾಯಕ, ಡಾನ್, NTC ಸರ್ಕಾರ್, ರಾಣೆಬೆನ್ನೂರು ಕಾ ರಾಜಾ, ಜೋಗಿ, KDM ಕಿಂಗ್, ಶಾಡಗೊಪ್ಪಿ ಸರ್ಕಾರ್, ನಾಯಕನ ಅಧಿಕಾರ, ವೀರಕೇಸರಿ, ಹಾನಗಲ್ ರಾಜಕುಮಾರ್, ಸೂರ್ಯಪುತ್ರ, ಕ್ರಾಂತಿವೀರ ಡಾನ್ ಇನ್ನೂ ಮುಂತಾದ ಹೋರಿಗಳು ಹೆಸರುವಾಸಿಯಾಗಿವೆ. ಪ್ರತಿ ಹಬ್ಬದಲ್ಲಿ ಹೋರಿ ಹಿಡಿತ ಗಾರರಿಗೆ ಬಹುಮಾನವನ್ನು ನಿಗದಿಪಡಿಸಿರುತ್ತಾರೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನಲ್ಲಿ ಇತಿಹಾಸವನ್ನೇ ಸೃಷ್ಟಿಸಿದ "ಹಾನಗಲ್ ಸಾರಂಗ " ಇದು ಹೆಚ್ಚು ಜನಗಳನ್ನು ಬಲಿ ಪಡೆದುಕೊಂಡಿದೆ. ಹಾನಗಲ್ ಕೋಟೆ ಇದು ಹೋರಿ ಬೆದರಿಸುವ ಸ್ಥಳ ಇದು ಸುಮಾರು 23 ವರ್ಷಗಳಿಂದ ಇಲ್ಲಿ ಹೋರಿ ಹಬ್ಬ ನಡಿತಾ ಬಂದಿದೆ. ಈ ಹೋರಿ ಹಬ್ಬವು ಹಾವೇರಿಯಿಂದ ತಮಿಳುನಾಡಿನವರಿಗೆ ಹಬ್ಬಿದೆ. ಹಾವೇರಿ ಜಿಲ್ಲೆಯಲ್ಲಿ ಹಬ್ಬ ಮಾಡುವ ಹೋರಿ ಇದ್ದರೆ ಒಂದು ಮನೆಯಲ್ಲಿ 10 ಲಕ್ಷ ವಿದ್ದಂತೆ.
ಹೋರಿ ಹಬ್ಬದಲ್ಲಿ ನಿಲುಕದ ನಕ್ಷತ್ರ ಎಂದೇ ಹೆಸರುವಾಸಿಯಾದ ಚಾಮುಂಡಿ ಎಕ್ಸ್ ಪ್ರೆಸ್. ಮತ್ತು ಅಜ್ಜನ ಪ್ರಪಂಚ ಎಂದೇ ಹೆಸರುವಾಸಿಯಾದ ಮಾರನ್ ಬೀಡದ ಸೂರ್ಯಪುತ್ರ. ಸೆಕೆಂಡ್ ಗಳ ಸರದಾರ ಎಂದೇ ಹೆಸರುವಾಸಿಯಾದ NTC ಸರಕಾರ. ಹಿಂದೂ ಹುಲಿ ಹರ್ಷನ ಸವಿನೆನಪಿಗಾಗಿ ಎಂದೇ ಹೆಸರುವಾಸಿಯಾದ ರಾಣೆಬೆನ್ನೂರು ಕಾ ರಾಜಾ. ಹೋರಿ ಹಬ್ಬವನ್ನು ನೋಡುವುದಕ್ಕೆ ಹೆಣ್ಣು ಮಕ್ಕಳು ಆಗಮಿಸುತ್ತಾರೆ.
ಅಭಿನಂದನ. ನೀರಲಗಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ