ಆಧುನಿಕ ಉಪಕರಣಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆಯೇ? - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಗುರುವಾರ, ನವೆಂಬರ್ 17, 2022

ಆಧುನಿಕ ಉಪಕರಣಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆಯೇ?

 


"व्यायामात् लभते स्वास्थ्यं दीर्घायुष्यं बलं सुखं।


आरोग्यं परमं भाग्यं स्वास्थ्यं सर्वार्थसाधनम्॥"


ಅರ್ಧ:  ವ್ಯಾಯಾಮವು ಆರೋಗ್ಯ, ಧೀರ್ಘಾಯುಷ್ಯ,ಶಕ್ತಿ ಮತ್ತು ಸಂತೋಷವನ್ನು ತರುತ್ತದೆ.ಆರೋಗ್ಯವಾಗಿರುವದು ಅಂತಿಮ ಹಣೆ ಬರಹವಾಗಿದೆ ಮತ್ತು ಆರೋಗ್ಯ ದೊಂದಿಗೆ  ಇತರ ಎಲ್ಲಾ ಕೆಲಸವನ್ನು ಸಾಧಿಸಲಾಗುತ್ತದೆ.


                 ನಮ್ಮ ಹಿರಿಯರು ತಮ್ಮ ಅನುಭವದ ಅಮೃತಧಾರೆಯನ್ನೇ ಎರೆದಿದ್ದಾರೆ. ಪೂರ್ವಜರ ಕಾಲದಲ್ಲಿ


ಜನರು ಅತ್ಯಂತ ಆರೋಗ್ಯಕರವಾಗಿ ನೂರು ವರ್ಷಗಳ ಕಾಲ ಅಥವಾ ಅದಕ್ಕಿಂತ ಹೆಚ್ಚು ವರ್ಷವೇ ಬದುಕುತ್ತಿದ್ದರು.ಅದಕ್ಕೆ ಅಂದಿನ ಚಟುವಟಿಕೆಯೇ ಕಾರಣ. ಅವರು ದಿನನಿತ್ಯ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ದಿನನಿತ್ಯದ ಕೆಲಸ ಪ್ರಾರಂಭಿಸುತ್ತಿದ್ದರು.      "ಕೈ ಕೆಸರಾದರೆ ಬಾಯಿ ಮೊಸರು" ಎಂಬ ತತ್ವದ ಮೇಲೆ ಜೀವನ ನಡೆಸುತ್ತಿದ್ದರು. ಮಹಿಳೆಯರು ಮನೆಯಲ್ಲಿ ಮತ್ತು ಪುರುಷರು ಹೊಲ - ಗದ್ದೆ ಗಳಲ್ಲಿ ಕೆಲಸ ಮಾಡುತ್ತಿದ್ದರು. ಸವದೆ ಜೊತೆ ದಿನ ನಿತ್ಯದ ಕೆಲಸಕ್ಕೆ ಎತ್ತಿನ ಗಾಡಿ ಉಪಯೋಗಿಸುತ್ತಿದ್ದು , ಪೌಷ್ಠಿಕ ಆಹಾರ ಸೇವನೆಯಿತ್ತು.

ಅವಿಭಕ್ತ ಕುಟುಂಬವಿರುವದರಿಂದ ಹಬ್ಬ - ಹರಿದಿನಗಳು                 ವಿಜೃಂಭರಣೆಯಿಂದ ಊರ ಜನರ ಸಹಕಾರದೊಂದಿಗೆ ನಡೆಯುತ್ತಿದ್ದವು. ವಿಶೇಷ ಸಮಾರಂಭಕ್ಕೆ ಕಾಲ್ನಡಿಗೆಯ ಮೂಲಕವೇ ಸಾಗಿ ಎರಡು ದಿನ ಉಳಿದು ಬರುತ್ತಿದ್ದರು.

ಅವಸರವೇ ಅಪಘಾತಕ್ಕೆ ಕಾರಣವೆಂದು ತಿಳಿದಿದ್ದರಿಂದ ಒಂದು ಕೆಲಸ ಮಾಡುವಾಗಲೂ ನೂರು ಜನರೊಂದಿಗೆ ಚರ್ಚೆ ಮಾಡುತ್ತಿದ್ದರು.

                ಆದರೆ ಸಮಯ ಎಷ್ಟು ವಿಚಿತ್ರ ನೋಡಿ....

ನಾವು ಸಮಯವನ್ನು ನಿಲ್ಲಿಸಲಾರೆವು ಅದಕ್ಕೆ ಒಗ್ಗಿಕೊಂಡು ಹೋಗಬೇಕು ನಿಜ. ಆದರೆ ನಮ್ಮ ಹಿರಿಯರು  ಹಾಕಿಕೊಟ್ಟ ಮಾರ್ಗ ಬಿಟ್ಟು ನಮ್ಮದೇ ಹೊಸ ಮಾರ್ಗ ಮಾಡಿದೆವಲ್ಲ... ಏನಾಯಿತು ಅದರ ಪರಿಸ್ಥಿತಿ? ಎಂದು ಹೇಳ ತೀರದು.

                 ಆಧುನೀಕರಣ ಎಂಬ ಗಾಳಿ ಬೀಸತೊಡಗಿದ್ದೆ ಗುಂಪಿನಲ್ಲಿ ಗೋವಿಂದ ಎಂಬಂತೆ ನಾವು ಸೇರಿದ್ದೇವೆ, ಬೆರೆತಿದ್ದೇವೆ. ಅದರ ಲಾಭಕ್ಕಿಂತ ಅನಾಹುತವೇ ಹೆಚ್ಚು.

ಅದರ ಅಲೆಯಲ್ಲಿ ನಮ್ಮತನವನ್ನೇ ಮರೆತಿದ್ದೇವೆ.

          ಪ್ರಸ್ತುತ ನಮ್ಮ ಸಮಾಜ ದುಡಿಯುವದೇನೋ ನಿಜ ಆದರೆ ಮನೆಯಲ್ಲಿ ಸಂತೋಷ ಕಣ್ಮರೆಯಾಗಿ ಮನರಂಜನೆಗೆ ಯಾಂತ್ರಿಕ ಉಪಕರಣದ ಮೊರೆ ಹೋಗುತ್ತಿದ್ದೇವೆ. ವಿಭಕ್ತ ಕುಟುಂಬದ ಕಾರಣ ಹಬ್ಬ - ಹರಿದಿನ ವನ್ನು ಮಾಡುವವರು ಕಡಿಮೆ ಅಂದರೆ ಕೆಲ ಮುಖ್ಯ ಹಬ್ಬಗಳನ್ನು ಮಾಡಿ ಉಳಿದವನ್ನು ಮನಗಂಡಂತೆ ಮಾಡುತ್ತಾರೆ. 

           ನಾವು ವಾಹನಗಳನ್ನು ಅನ್ವೇಷಿಸಿದ್ದು ನಿಜ. ಆದರೆ ಹಣಗಳಿಕೆ ಎಂಬ ಆಸೆ ತಲೆಹೊಕ್ಕು ನಮ್ಮವರ ಸಂಬಂಧವೂ ಏರು ಪೇರಾಗಿದೆ. ಸಮಾರಂಭದ ಸಮಯಕ್ಕೆ ತೆರಳಿ ಊಟ ಮುಗಿಸಿ ಬರುತ್ತೆವೆ. ಕೆಲ‌ ಬಾರಿ ಸಣ್ಣ ಪುಟ್ಟ ಮನಃಸ್ಥಾಪದಿಂದ ಸಂಪರ್ಕವನ್ನೇ ಕಡಿತಗೊಳಿಸಿಕೊಂಡು ಬಿಡುತ್ತೇವೆ.

                  ವಾಹನ ವಿರುವದರಿಂದ ನಡಿಗೆಯ ಸಂಪರ್ಕವೇ ಇಲ್ಲವಾಗಿ, ಅಪ್ಪಿ ತಪ್ಪಿ ನಡೆದರೆ ಕಾಲು‌ ನೋವು  ಕಾಡ ತೊಡಗುತ್ತದೆ. ಎಲ್ಲವೂ ಯಂತ್ರಮಯ.  

ಯಂತ್ರ ಬಿಟ್ಟು ಹಿಂದಿನ ಕಾಲದವರ ಹಾಗೇ ಹಿಟ್ಟನ್ನು ಒಳಕಲ್ಲಿನಲ್ಲಿ ಬೀಸುವದೆಂದರೆ ಒಲ್ಲದ ಮಾತನ್ನಾಡುತ್ತಾರೆ.

ಆಧುನಿಕಯುಗದ ಮಕ್ಕಳಿಗೆ ಹೊರಗಡೆಯೂ ಆಟವಾಡುತ್ತಾರೆ ಎಂಬ ಕಲ್ಪನೆಯೇ ಇಲ್ಲವೇನೋ... ಬಹುಷಃ 

ಏಕೆಂದರೆ, ಮೊಬೈಲ್‌ ನ ಆಟದಲ್ಲೇ ನಿರತವಾಗಿ‌ದ್ದು ಪಕ್ಕದಲ್ಲಿ  ಬಾಂಬ್ ಸಿಡಿಸಿದರೂ ತಿಳಿವದು ಅನುಮಾನ. ಅಂಥ ಪರಿಸ್ಥಿತಿಗೆ ಬಂದು ತಲುಪಿದ್ದೇವೆ.

ಕಾಲಾಯ ತಸ್ಮೈ ನಮಃ ಎಂಬಂತೆ ನಾವು ಕಾಲಕ್ಕೆ ಬದಲಾದದ್ದು ನಿಜ. ಆದರೆ ಅದು ಮತ್ತೆ ಬದಲಾಗುತ್ತದೆ ಎಂಬುದನ್ನು ಮರೆತಿದ್ದೇವೆ. ಅಮೃತವೂ ಹೆಚ್ಚಾದರೆ ವಿಷ ಎಂಬ ಪರಿಸ್ಥಿತಿ ನಮ್ಮದು. ಅಂತರ್ಜಾಲ ಎಂಬ ಮಾಯಾಜಾಲದಿಂದ ಪಕ್ಷಿಗಳು, ಜೇನು ನೊಣಗಳೂ ಕಡಿಮೆಯಾಗುತ್ತಿದೆ. ನಮ್ಮ ಸುಖಕ್ಕಾಗಿ ನಿರ್ಮಿಸಿದಂತವು ನಮ್ಮ ಜೊತೆ ಪರಿಸರದ ಇತರ ಜೀವಿಯನ್ನೂ ಕೊಲ್ಲುತ್ತಿರುವದು ವಿಷಾದನೀಯ.

                        ಆಧುನೀಕರಣದ ಅಲೆ ತಣಿಸುವದು ಕಷ್ಠವಿರ ಬಹುದು ಆದರೆ ನಮ್ಮ‌ಪೂರ್ವಜರು ನೀಡಿದ ದಾರಿ, ಮಾಹಿತಿ ಯನ್ನು ಮರೆಮಬಾರದಲ್ಲವೇ? ಇನ್ನಾದರೂ ಎಚ್ಚೆತ್ತು ಮುನ್ನಡೆಯೋಣ...

 

                                           -  ಚಿನ್ಮಯ ಸ ಹೆಗಡೆ

                                            ಬಿ.ಎ ದ್ವಿತೀಯ ವರ್ಷ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ