" ಸನಾತನವಿದು ನಿತ್ಯನೂತನ, ಚಿರಪುರಾತನ" - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಮಂಗಳವಾರ, ನವೆಂಬರ್ 29, 2022

" ಸನಾತನವಿದು ನಿತ್ಯನೂತನ, ಚಿರಪುರಾತನ"

 


ಸನಾತನ  ಧರ್ಮಕ್ಕೆ ಆದಿ ಮತ್ತು ಅಂತ್ಯಗಳಿಲ್ಲ. ಹುಟ್ಟು ಸಾವುಗಳನ್ನು ಮೆಟ್ಟಿ ನಿಂತ ಏಕೈಕ ಧರ್ಮ ಅದುವೇ ಆದಿಹಿಂದೂ ಅಥವಾ ಸನಾತನ ಧರ್ಮ.  ಹಿಂದೂ ಧರ್ಮದ ಮೇಲೆ ಸಾವಿರಾರು ವರ್ಷಗಳಿಂದಲೂ ಪುಂಖಾನುಪುಂಖವಾಗಿ  ಆಕ್ರಮಣವನ್ನು ಮಾಡುತ್ತಾ ಬಂದಿದ್ದಾರೆ. ಒಮ್ಮೆ ಘನಘೋರವಾಗಿ ಕತ್ತಿ ಇರಿದು,  ಒಮ್ಮೆ ಮಂದಹಾಸ ಬೀರಿ, ಒಮ್ಮೆ ಪ್ರಶ್ನಿಸಿ, ಒಮ್ಮೆ ಸೇವೆಯ ಸೋಗಿನಲ್ಲಿ, ಒಮ್ಮೆ ಮತಾಂತರಗೊಳಿಸಿ,  ಒಮ್ಮೆ ಸಿನಿಮಾ ಪರದೆಯಲ್ಲಿ ಹೀಗೆ ಅಡಿಯಿಂದ ಮುಡಿಯವರೆಗೆ ಅಕ್ರಮಣವನ್ನೇ ಅಸ್ತ್ರವನ್ನಾಗಿಸಿದ ಅನ್ಯರು ಸೂರ್ಯನೆದುರಲ್ಲಿ ಕರಗುವ ಮಂಜಿನಂತೆ ಕರಗಿ ಹೋದರು.


ಆದರೆ ಒಂದನ್ನು ಸೂಕ್ಷ್ಮವಾಗಿ ಗಮನಿಸಿದರೆ ಹಿಂದೂ ಧರ್ಮದ ಮೇಲೆ ನಡೆದ ದಾಳಿಗಳೆಲ್ಲವೂ ಅದರ ಮೂಲ ಸಂಸ್ಕೃತಿಯ ಮೇಲೆ ಎಂಬುದು ಖೇದಕರ. 

ಅನೇಕ ಜಾತಿ ಮತಗಳನ್ನೊಳಗೊಂಡ ನಮ್ಮ ಹಿಂದೂ ಧರ್ಮ, ವಿಶ್ವ ವಿಶಾಲ ಹರವುಳ್ಳ ಶಾಕೋಪ  ಶಾಖೆಗಳಿಂದ ಕೂಡಿದ ಒಂದು ಮಹಾವಟವೃಕ್ಷ. ಇದು ಮಾನವ ಧರ್ಮ, ಅನಂತ ಧರ್ಮ, ಭಾರತ ಉಪಖಂಡದ ಪ್ರಧಾನ ಧರ್ಮ, ಸನಾತನವೆಂದು ಕರೆಯಲ್ಪಡುವ ಶಾಶ್ವತ ಧರ್ಮ.


ಮಾಧವ ದಿಗ್ವಿಜಯದಲ್ಲಿ ಹಿಂದೂ ಧರ್ಮದ ಲಕ್ಷಣ ತಿಳಿಸುವ ಒಂದು ಶ್ಲೋಕ ಬರುತ್ತದೆ. ಓಂಕಾರ ಮೂಲ ಮಂತ್ರಾಧ್ಯಹ  ಪುನರ್ಜನ್ಮ ದೃಢಾಶಯಃ ಗೋಭಕ್ತ: ಭಾರತ ಗುರು:  ಹಿಂದೂಹು ಹಿಂಸಮಾಶನಃ. ಇದರ ಅರ್ಥವೇನೆಂದರೆ, ಯಾರು ಓಂಕಾರವನ್ನು ಮೂಲ ಮಂತ್ರವಾಗಿಸುತ್ತಾರೆಯೋ, ಭಾರತವನ್ನು ಗುರು ಎಂದು ಭಾವಿಸುತ್ತಾರೆಯೋ,  ಹಿಂಸೆಯನ್ನು ಆಚರಿಸುವುದಿಲ್ಲವೋ, ಅವರನ್ನು ಹಿಂದು ಎನ್ನುವರು.  ಇಂತಹ ಸನಾತನ ಸಂಸ್ಕೃತಿಯ ಮೇಲೆ ಆದ ದಾಳಿ ಅತಿ ಭಯಾನಕ, ಅಮಾನುಷವಾದುದು.


ಭಾರತದ ಇತಿಹಾಸವನ್ನು ಪಠ್ಯಪುಸ್ತಕಗಳಲ್ಲಿ ಓದಿದಾಗ ತಿಳಿಯುವುದು, ಬಿಚ್ಚಿಟ್ಟಿದ್ದಕ್ಕಿಂತ ಮುಚ್ಚಿಟ್ಟಿದ್ದೆ ಬಹಳ. ಮುಚ್ಚಿಟ್ಟ ಚರಿತ್ರೆಯ ಮೇಲೆ ಈಗ ಬೆಳಕು ಚೆಲ್ಲೋಣ.

ಭಾರತದ ಮೇಲೆ ಮೊದಲ ದಾಳಿ ನಡೆಸಿದವರು ಅರಬ್ಬರು, ಎರಡನೆಯದಾಗಿ ತುರ್ಕರು, ಮೂರನೆಯದಾಗಿ ಅಪಘನ್ನರು ದಾಳಿ ಮಾಡಿದರು. ಇಸ್ಲಾಮಿನ ಆಕ್ರಮಣ ಬರ್ಭರವಾಗಿತ್ತು.


ಮಹಮದ್ ಬಿನ್ ಖಾಸಿಂ ಕ್ರಿಸ್ತಶಕ 712ರಲ್ಲಿ ಸಿಂಧ್ ಪ್ರಾಂತ್ಯವನ್ನು ಮೋಸದಿಂದ ಆಕ್ರಮಿಸಿಕೊಂಡನು 17 ಬಾರಿ ದಾಳಿ ಮಾಡಿದ ಘಜ್ನಿ ಮಹಮ್ಮದ್ ಈತ ಎರಡು ಸಾವಿರ ಒಂಟಿಯ ಮೇಲೆ ಧನಕನಕ ಅಷ್ಟೇ ಅಲ್ಲ, ಸಂಪತ್ತು ದೋಚವ ಹುನ್ನಾರದೊಂದಿಗೆ  ಸೋಮನಾಥ ದೇವಾಲಯವನ್ನು ಧ್ವಂಸಗೊಳಿಸಿದನು. ಇಂತಹ ಅದೆಷ್ಟು ದೇವಾಲಯಗಳು ಅವನ ಸೈನಿಕರ ಇರಿತಕ್ಕೆ, ಗಜಪಡೆಯ ಹೊಡೆತಕ್ಕೆ ನಾಶವಾಯಿತೋ ಹೇಳಲಾಗದು.


ಕುತುಬುದ್ದೀನ್ ಐಬಕ್ ಎಂದ ಕ್ಷಣ ನಮಗೆ ನೆನಪಾಗುವುದು ದೆಹಲಿಯ ಕುತುಬ್ ಮಿನಾರ್. ಅವನ ಅಂತ್ಯದ ಕಥೆ ಹೇಳುವಾಗ 1210ರಲ್ಲಿ ಹಾರ್ಸ್ ಪೋಲೋ ಆಡುವಾಗ ಸತ್ತ ಎಂದು ಚರ್ವಿತ ಚರ್ವಣ  ಕಥೆಗಳನ್ನು ಹೇಳುತ್ತಾರೆ.  ಆದರೆ ಇವನನ್ನು ಸೋಲಿಸಿದ್ದು ಗುಜರಾತಿನ ರಾಣಿ ಕೂರ್ಮಾದೇವಿ. ಸೋಲಂಕಿ ರಾಜ ಮನೆತನದ ರಾಜಕುಮಾರಿ ಇದನ್ನು ಇತಿಹಾಸದಲ್ಲಿ ನೋಡಲು ಸಾಧ್ಯವಿಲ್ಲ ಬಿಡಿ.

ಗ್ರೀಕ್ ಇತಿಹಾಸಕಾರರು ಬಿದ್ರು ಮೀಸೆ ಮಣ್ಣಾಗಲಿಲ್ಲ ಎಂಬಂತೆ ಚಿತ್ರಿಸಿದ್ದಾರೆ. 


ಅರಬ್ಬರ ಬರ್ಭರ ಆಕ್ರಮಣದ ಬಳಿ ಯುರೋಪಿಯನ್ನರ ಅವಾಂತರಗಳು ಒಂದಾದ  ಮೇಲೆ ತೆರೆಗಪ್ಪಳಿಸುವ ಸಮುದ್ರದ ಅಲೆಗಳಂತೆ  ಬಡಿಯತೊಡಗಿದವು. ಯುರೋಪಿಯನ್ ಮೂರ್ಖರಿಗೆ ಭಾರತದ ಪದಾರ್ಥಗಳ ಪರಿಚಯವಿತ್ತೇ ವಿನಃ ಭಾರತೀಯ ಮೂಲ ನಿವಾಸಿಗಳಾದ ಹಿಂದುಗಳ ಪರಿಚಯವಿರಲಿಲ್ಲ.


ಪೋರ್ಚುಗೀಸ್, ಫ್ರೆಂಚ್ , ಡಚ್ಚ , ಬ್ರಿಟಿಷ್ ಇವರೆಲ್ಲರ ಮತಾಂತರ ಪಾಶಗಳನ್ನು ಕತ್ತರಿಸಿ ಹಣೆಯಲಾಗದ ರೀತಿಯಲ್ಲಿ ಬಿಸಿ ಬರೆಗಳನ್ನು ಎಳೆದದ್ದು ಇತಿಹಾಸದಲ್ಲಿ ದಾಖಲು ಇಲ್ಲ ಬಿಡಿ


ಆದರೆ ಬ್ರಿಟಿಷರು ಹಣೆದ ಕಪೋಲಕಲ್ಪಿತ ವಿಷಯಗಳಂತೂ ನಮ್ಮ ಪಠ್ಯದಲ್ಲಿ ರಾರಾಜಿಸುತ್ತಿದೆ. ಜೀವಿಸುತ್ತಿದೆ. ಆದರೆ ನಿಜ ಸಂಗತಿ ಮರಿಚಿಕೆಯಾಗಿದೆ. ಇವರಿಗೆ ತಿಳಿದಿತ್ತೇನೋ!  ಭಾರತೀಯರ ಬಲ ಎಲ್ಲಿದೆ ಎಂಬ ಅಧ್ಯಯನ ಮಾಡಿದರಿಂದಲೇ ಬುಡಕ್ಕೆ ಬೆಂಕಿ ಹಚ್ಚುವ ರೀತಿ ಭಾರತೀಯ ಸಂಸ್ಕೃತಿಯ ಮೇಲೆ ಅರ್ಥಾತ್ ಹಿಂದೂಗಳ ನಂಬಿಕೆಗಳಿಗೆ ಕೊಳ್ಳಿ ಇಟ್ಟುಬಿಟ್ಟರು.


ವಿದೇಶಗಳಿಂದ ಅಧ್ಯಯನಕ್ಕೆಂದು ಬರುವ ನಳಂದ ವಿಶ್ವವಿದ್ಯಾಲಯಕ್ಕೆ ಬೆಂಕಿ ಇಟ್ಟು ವೇದ, ಉಪನಿಷತ್, ಶೃತಿ , ಸ್ಮೃತಿ ಪುರಾಣ, ಗ್ರಂಥ ಇವುಗಳನ್ನೆಲ್ಲವನ್ನು ಧರ್ಮದ ಸೋಗಿನಲ್ಲಿ ಬೂದಿಗೊಳಿಸಿದ್ದು ಹಿಂದೂ ಧರ್ಮವನ್ನೇ ಬೆಂಕಿಗೆ ಎಸೆದುಬಿಟ್ಟರು. ಆದರೆ ಅಗ್ನಿಯಿಂದಲೂ ಹಿಂದೂ ಧರ್ಮ ದಹಿಸಲಿಲ್ಲ. ಬದಲಾಗಿ ಇನ್ನು ಉಜ್ವಲತವಾಯಿತು.


ಭಾರತೀಯ ಹಿಂದೂಗಳನ್ನು ಒಡೆಯಲು ಬಂದು ಕಪೋಲಕಲ್ಪಿತ ಕಥೆಗಳನ್ನು ಬ್ರಿಟಿಷರು ಚೆನ್ನಾಗಿ ಪೋಣಿಸಿದರು. ಅದೇನೆಂದರೆ ಆರ್ಯ ದ್ರಾವಿಡ ಪರಿಕಲ್ಪನೆ. ಅದರ ಪ್ರಕಾರ ಆರ್ಯ ಎಂದರೆ ಮಧ್ಯ ಏಷ್ಯಾದಿಂದ ವಲಸೆ ಬಂದು, ಮೂಲ ನಿವಾಸಿಗಳಾದ ದ್ರಾವಿಡ ಬುಡಕಟ್ಟು ಜನಾಂಗದವರನ್ನು ದಕ್ಷಿಣ ಭಾರತಕ್ಕೆ ಓಡಿಸಿದರು ಎಂಬುದು. ಹೀಗೆ ಕಥೆಗಳನ್ನು ಕಟ್ಟಿದರು.  ಇದರಲ್ಲಿ ಯಾವುದೇ ಹುರುಳು ಇಲ್ಲ.


ಸುಲಭವಾಗಿ ಹೇಳಬೇಕೆಂದರೆ ವೇದ, ಉಪನಿಷತ್, ಶ್ರುತಿ, ಸ್ಮೃತಿ, ಪುರಾಣ ಇಲ್ಲೆಲ್ಲೂ ಕೂಡ ಆರ್ಯ ದ್ರಾವಿಡ ಶಬ್ದ ಬರುವುದೇ ಇಲ್ಲ. ಅಲ್ಲದೆ ಬ್ರಾಹ್ಮಣ ಕ್ಷತ್ರಿಯ ವೈಷ್ಯರನ್ನು ಆರ್ಯರು ಎಂದು ಕರೆಯುವ ಬ್ರಿಟಿಷರಿಗೆ ತಿಳಿಯದು, ಅವರವರ ಕೆಲಸದ ಮೇಲೆ ವರ್ಣಾಶ್ರಮ ಸೃಷ್ಟಿಯಾಗಿದೆ ಎಂದು. ಬ್ರಾಹ್ಮಣರಾದ ಶಂಕರಾಚಾರ್ಯರು,  ತಮ್ಮನ್ನು ದ್ರಾವಿಡ ಎಂದು ಒಂದು ಸಭೆಯಲ್ಲಿ ಪರಿಚಯಿಸಿಕೊಳ್ಳುವುದುಂಟು. ದ್ರಾವಿಡ ಅಂದರೆ ಮೂರು ಕಡೆ ಸಮುದ್ರದಿಂದ ಆವೃತವಾದ ಪ್ರದೇಶದಿಂದ ಬಂದವನು ಎಂದು.  ಅಲ್ಲದೆ ಆರ್ಯರು ಯುರೋಪಿನಿಂದ ಬಂದರು ಎಂದರೆ, ಅಲ್ಲಿ ಆರ್ಯರ ಯಾವುದೇ ಕುರುಹುಗಳಿಲ್ಲ. ಇದರಿಂದ ಸ್ಪಷ್ಟವಾಗುತ್ತದೆ ಇದು ಕಪೋಲಕಲ್ಪಿತ ಕಥೆ ಎಂಬುದು.


ಹಾಸ್ಯಾಸ್ಪದ ಎಂದರೆ, ಬ್ರಿಟಿಷರು ಹೇಳಿದ್ದೆ ವೇದವಾಕ್ಯದಂತೆ ಬಿಂಬಿಸಿ, ಅದನ್ನೇ ನಮ್ಮ ಪಠ್ಯದಲ್ಲಿ ತುರುಕಿ ನಮಗೆ ಸುಳ್ಳು ಇತಿಹಾಸ ಉಣಬಡಿಸುತ್ತಿರುವುದು ಶೋಚನೀಯ ಸಂಗತಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ