ವಿಜ್ಞಾನ ವರವೋ?ಶಾಪವೋ? - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಮಂಗಳವಾರ, ನವೆಂಬರ್ 29, 2022

ವಿಜ್ಞಾನ ವರವೋ?ಶಾಪವೋ?


    

              ವಿಜ್ಞಾನದ ಮುನ್ನಡೆಯೆ ಮಾನವನ ಮುನ್ನಡೆ ಮಾನವನ ಮುನ್ನಡೆಯೆ ದೇಶದ ಮುನ್ನಡೆ.ವಿಜ್ಞಾನ ಮತ್ತು ಮಾನವ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.ಅದಕ್ಕೆ ಹೇಳುತ್ತಾರೆ ಮಾನವನ ಮೊಟ್ಟ ಮೊದಲನೆಯ ಅಭಿವೃದ್ಧಿ ಮೆಟ್ಟಿಲು ವಿಜ್ಞಾನ ಎಂದು.

                  ಮೊದ ಮೊದಲು ನಾವು ಪ್ರಯಾಣಿಸಿದ್ಧು ಕಾಲು ನಡಿಗೆಯಿಂದ.ನಂತರ ಎತ್ತು ಚಕ್ಕಡಿಗಳ ನಿರ್ಮಾಣ ಅದರ ತರುವಾಯು ವಿಜ್ಞಾನದ ಸಹಾಯದಿಂದ ಮಾನವನ ಶ್ರಮ ಕಡಿಮೆಯಾಗತೊಡಗಿತು.ಇಂದಿನ ದಿನಗಳಲ್ಲಿ ವಿಜ್ಞಾನದ ಪ್ರಗತಿ ಕಲ್ಪನೆಗೂ ಮೀರಿದಂತಹ ಬೆಳವಣಿಗೆಯನ್ನು ಕಾಣುತ್ತಿದೆ.                                          ವಿಜ್ಞಾನದ ಬಲದಿಂದಾಗಿ ಮಾನವ ಇಂದು ಹಕ್ಕಿಯಂತೆ ಹಾರಾಡುತ್ತಿದ್ದ, ಮೀನಿನಂತೆ ಇಜಾಡುತ್ತಿದ್ದಾನೆ, ಒಂದು ಗ್ರಹದಿಂದ ಇನ್ನೂಂದು ಗ್ರಹಕ್ಕೆ ಕಾಲುರಲು ಶಕ್ತನಾಗಿದ್ದಾನೆ.ವಿಜ್ಞಾನದಿಂದ  ಆಹಾರ ದಲ್ಲಿ ಹತ್ತಕ್ಕೆ ನೂರು ಪಟ್ಟು ಧವಸ ಧಾನ್ಯಗಳನ್ನು ಪಡೆಯುತ್ತಿದ್ದಾನೆ. ವೈದ್ಯಕೀಯ ಕ್ಷೇತ್ರದಲ್ಲಿಯೂ ಇಂದು ಕಲ್ಪನೆಗೂ ಮೀರಿದಂತಹ ಬೆಳವಣಿಗೆಗಳು ಆಗುತ್ತಿದೆ.     

            ಇಂದು ವಿಜ್ಞಾನ ಎಷ್ಟು ಮುಂದುವರೆದಿದೆ ಎಂದರೆ ಕೈಯಲ್ಲಿರುವ ಒಂದು ಯಂತ್ರದಿಂದ (ಮೋಬೈಲ್) ನಿಂದ ಎಲ್ಲಾ ಕೆಲಸಗಳು ಸಾಧ್ಯ ಎಂಬ ಹಂತಕ್ಕೆ ಬಂದಿದೆ . ಹಂತಕ್ಕೆ ಬಂದಿರುವುದುದೇನು ಎಲ್ಲಾ ಸಾಧ್ಯ ಕೂಡ . ಬೆಳಿಗ್ಗೆ ಏಳುವ ಅಲಾರಾಮ್ ನಿಂದ ಹಿಡಿದು  ನಮ್ಮ ದೈನಂದಿನ ಪ್ರತಿಯೊಂದು ಕೆಲಸದಲ್ಲಿಯೂ ನಾವು ಅವಲಂಬಿತವಾಗಿರುವುದು ಮೋಬೈಲ್ ಮೇಲೆ.ನಮ್ಮ ಪ್ರತಿಯೊಂದು ಕೆಲಸವನ್ನೂ ಸುಲಭ ಮತ್ತು ಸರಳ ಮಾಡಿದೆ.ಇದನ್ನ ಗಮನಿಸಿದಾಗ  ವಿಜ್ಞಾನವು ವರವಾಯಿತಲ್ಲವೇ?                          

             ಜ್ಞಾನದ ವಿತರಣೆ ಹಾಗೂ ಓದುವ ಹವ್ಯಾಸಗಳು ಪೂರ್ವಕಾಲದಲ್ಲಿ ಅಷ್ಟೊಂದು ಕಂಡು ಬರುತ್ತಿರಲಿಲ್ಲ.ಜ್ಞಾನದ ಪ್ರಸಾರಣೆ ಅಂದು ಪುಸ್ತಕಗಳನ್ನ ಹಾಗೂ ಗ್ರಂಥಗಳನ್ನು ಕೈಯಲ್ಲಿ ಬರೆದೆ ಸಾಗಿಸಬೇಕಿತ್ತು ಆದರೆ ಇಂದು? ವಿಜ್ಞಾನ ದ ಸಹಾಯದಿಂದ ಮುದ್ರಣಾಲಯ ಗಳು ಜನಿಸಿವೆ.ಆ ಮೂಲಕ ಅನೇಕ ಪುಸ್ತಕಗಳನ್ನು,ಪತ್ರಿಕೆಗಳನ್ನ ಪ್ರಕಟಿಸಿ ಜ್ಞಾನ ಪ್ರಸಾರದ ಕಾರ್ಯವನ್ನ ಕೈಗೊಳ್ಳಬಹುದಾಗಿದೆ.ಸಂಪರ್ಕ ಸಾಧನಗಳ ಮೂಲಕ ಪರದೇಶಗಳೊಡನೆ ಸಂವಹನ ನಡೆಸಬಹುದಾಗಿದೆ. 

        ಮನೆ ಮಠಗಳನ್ನು ನಿರ್ಮಿಸುವ ಕಾಯಕದಿಂದ ಹಿಡಿದು ಮಾನವ ತನ್ನಿ ಸಕಲ ಕಾರ್ಯ ಕಲಾಪಗಳನ್ನು ವಿಜ್ಞಾನದ ತಳಹದಿಯಿಂಲೆ ರೂಪಿಸಿಕೂಂಡಿದಾನೆ ರೂಪಿಸಿಕೊಂಡಿದ್ಧಾನೆ.ಇವೆಲ್ಲವನ್ನ  ವಿಮರ್ಶಿಸಿದಾಗ ವಿಜ್ಞಾನವು ನಮಗೆ ವರವಾಗಿ ಬಂದಿಲ್ಲವೇ ?

          ‌     ಹೀಗೆ ಮುಂದುವರೆದ ಮಾನವನು ವಿಜ್ಞಾನದ ಸಹಾಯದಿಂದ ಅಣು ಬಾಂಬ್ ಗನ್ನ ತಯಾರಿಸುತ್ತಿದ್ದಾನೆ.ಇದು ಜೀವ ಜಗತ್ತಿನ ಮೇಲೆ ಅತಿ ಕೆಟ್ಟ ಪರಿಣಾಮವನ್ನ ಬೀರುತ್ತಿದೆ. ಹಿರೋಶಿಮಾ ಮತ್ತು ನಾಗಸಾಕಿಗಳ ಮೇಲೆ ಎರಡನೇ ಮಹಾಯುದ್ಧ ಸಂದರ್ಭದಲ್ಲಿ ಅಮೇರಿಕನ್ನರು ಎಸೆದ ಅಣುಬಾಂಬಗಳಿಂದ  ಲೆಕ್ಕವಿಲ್ಲದಷ್ಟು ಜನರು ಮರಣವನ್ನ ಹೊಂದಿದರು. ಇವತ್ತಿಗೂ ಸಹ ಅಲ್ಲಿಯ ಜನರು ಇದರ ಪರಿಣಾಮವನ್ನ ಅನುಭವಿಸುತ್ತಿದ್ದಾರೆ.

         ಅಂಥ ಮಾರಕ ವಸ್ತುಗಳನ್ನು ನಿರ್ಮಿಸುವಲ್ಲಿ ಪ್ರಭಲ ರಾಷ್ಟ್ರಗಳ ಮಧ್ಯೆ ಸ್ಪರ್ಧೆಯೆ ಏರ್ಪಟ್ಟಿದೆ. ಈಗ ಅವುಗಳು ತಯಾರಿಸುತ್ತಿರುವ ಬಾಂಬುಗಳ ಉಪಯೋಗದಿಂದ ಇಡೀ ವಿಶ್ವವೇ ನಾಶವಾಗುವ ಸಂಭವವಿದೆ.ಇದೊಂದು ಮಾನವನಿಗೆ ವಿಜ್ಞಾನವು ದಯಪಾಲಿಸಿದ ಶಾಪವಾಗಲಿಕ್ಕಿಲ್ಲವೇ?  

               ಇಂದು ಹೆಚ್ಚಿನ ಮಟ್ಟದ ಅಭಿವೃದ್ಧಿಯನ್ನು ಕಾಣುತ್ತಿರುವ ಕೈಗಾರಿಕೆಗಳು ಪರಿಸರದ ಮೇಲೆ ಎಷ್ಟು ಹಾನಿ ಮಾಡುತ್ತಿವೆ.ಜಲ ಮಾಲಿನ್ಯ, ವಾಯು ಮಾಲಿನ್ಯ,ಶಬ್ದ ಮಾಲಿನ್ಯ ಗಳಿಂದ ಪರಿಸರದಲ್ಲಿರುವ ಶುದ್ಧತೆ ಕಡಿಮೆಯಾಗುತ್ತಿದೆ.

         ತಂತ್ರಜ್ಞಾನಗಳ ಅತೀ ಬಳಕೆಯಿಂದ  ಪರಿಸರದಲ್ಲಿರುವ ಕೆಲವು ಜೀವ ಸಂಕುಲಗಳು ಕ್ಷೀಣಿಸುತ್ತಿವೆ.ಎಲ್ಲದರಲ್ಲಿಯೂ ಮಾನವನೆ ಹೂಣೆಗಾರನಾಗುತ್ತಾನೆ. ದೇಶದ ಉನ್ನತಿ ಮತ್ತು ಅವನತಿ ಮಾನವನ ಕೈಯಲ್ಲಿಯೇ ಇದೆ.

           ವಿಜ್ಞಾನವನ್ನ ಮಾನವನ ಸುಖಕ್ಕಾಗಿ ಬಳಸಿದರೆ ಜಗತ್ತೆ ನಂದನವನವಾಗುವುದು.ಅದನ್ನೆ ದ್ವೇಷ ಪೂರ್ಣ ವಿಷ ವಸ್ತುಗಳ ನಿರ್ಮಾಣಕ್ಕೆ ಬಳಸಿದರೆ ಜಗತ್ತೆ ನಾಶವಾಗುವುದು.ವಿಜ್ಞಾನವನ್ನ ಸನ್ಮಾರ್ಗಕ್ಕೆ ಬಳಸಿದರೆ ಅದು ವರ ಎಂದು ಹೇಳಬಹುದು,ಅದೇ ವಿಜ್ಞಾನ ವನ್ನ ದುರ್ಮಾಗಕ್ಕೆ ಬಳಸಿಕೊಂಡು ವಿಜ್ಞಾನ ಶಾಪ ಎಂದು ಸಾರಬಹುದು. ಉತ್ತರ ಮಾತ್ರ ವಿಜ್ಞಾನವನ್ನ ಉಪಯೋಗಿಸಿಕೂಳ್ಳುವ ಮಾನವನೇ ಕೂಡಬಲ್ಲ..


Megha .m.

BA- 2

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ