ಹಿಂದೂ ಸಂಸ್ಕೃತಿಗೆ ಅವನತಿ ಇಲ್ಲ.....🚩 - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಮಂಗಳವಾರ, ನವೆಂಬರ್ 29, 2022

ಹಿಂದೂ ಸಂಸ್ಕೃತಿಗೆ ಅವನತಿ ಇಲ್ಲ.....🚩




ಹಿಂದೂ ಎನ್ನುವುದು ಧರ್ಮವಲ್ಲ, ಇದು ನಮ್ಮ ಸಂಸ್ಕೃತಿ, ನಮ್ಮ  ಜೀವನದ ಪದ್ದತಿ. ಈ ಭೂಮಿಯ ಸಾವಿರ ಸಾವಿರ ವರ್ಷಗಳ ಹಿಂದೆಯೇ ಸಿಂಧೂ ನಾಗರಿಕತೆ, ಹರಪ್ಪ-ಮೆಹೆಂಜೋದಾರ್ ನಾಗರಿಕತೆ ,ಈಜಿಪ್ಟ್ ನಾಗರಿಕತೆಗಳು ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲುಗಳಾಗಿವೆ. ಇಂತಹ ನಾಗರಿಕತೆಯ ಬೆಳಕಿನಲ್ಲಿ ಸಂಸ್ಕೃತಿಗಳು ಬೆಳಗಿವೆ. ಇಲ್ಲಿ ಎಷ್ಟೋ ನಾಗರಿಕತೆಗಳು ಅಳಿದು ಹೋಗಿವೆ. ಆದರೆ ನಮ್ಮ ಸಿಂಧೂ ನಾಗರಿಕತೆಯ ಹಿಂದೂ ಸಂಸ್ಕೃತಿ  ಅಂದು-ಇಂದೂ ಮುಂದೆಂದೂ ಅಳಿಯದೆ ಹೆಮ್ಮೆಯ ಸಂಸ್ಕೃತಿ,, ನಮ್ಮ ಭಾರತೀಯ ಸಂಸ್ಕೃತಿ.


      ನಮ್ಮ ದೇಶದ ಸಂಸ್ಕೃತಿಯ ಹಿರಿಮೆ-ಗರಿಮೆಗಳನ್ನು ಎಷ್ಟು ಬಣ್ಣಿಸಿದರೂ, ವರ್ಣಿಸಿದರೂ ಸಾಲದು. ಇಡೀ ಜಗತ್ತಿಗೆ ಬದುಕುವುದನ್ನು ಕಲಿಸಿಕೊಟ್ಟ  ಧೀಮಂತ ದೇಶ ನಮ್ಮ ಭಾರತ . ನಮ್ಮ ಋಷಿ ಮುನಿಗಳು ಹಿಂದಿನ ಕಾಲದಲ್ಲಿ ಒಂದು ಘೋಷ ವಾಕ್ಯವನ್ನು ಹೇಳಿದ್ದರು, ಅದು " ತೃಣ್ವoತು ವಿಶ್ವಮಾರ್ಯಮಂ" ಅಂದರೆ ಇಡೀ ಜಗತ್ತನ್ನು ಸುಸಂಸ್ಕೃತಗೊಳಿಸುವುದು ಎಂದರ್ಥ. ನಮ್ಮ ಆಚಾರ-ವಿಚಾರ, ನಡೆ-ನುಡಿಗಳು, ಜೀವನಾದರ್ಶಗಳು ಇಡೀ ವಿಶ್ವಕ್ಕೆ ಮದರಿಯಾಗಿವೆ. ಅಂತಹ ಶ್ರೇಷ್ಠವಾದ ಸಂಸ್ಕೃತಿಯಲ್ಲಿ ಬದುಕಿ ಬಾಳಿ ಜೀವನದಲ್ಲಿ ಅಳವಡಿಸಿಕೊಂಡು ಅನುಸರಿಸಿಕೊಂಡು ಶತ ಶತಮಾನದವರೆಗೆ ಭಾರತದಲ್ಲಿ ಹಿಂದೂ ಸಂಸ್ಕೃತಿಯ ವೈಭವವನ್ನು ಮೆರೆದಿದ್ದೇವೆ. 


       ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ, ವೇದ, ರಾಮಾಯಣ , ಮಹಾಭಾರತ ,, ದಾಸರು, ಶರಣರು, ಸಂತರು, ದಾರ್ಶನಿಕರು,  ಸ್ವಾಮಿ ವಿವೇಕಾನಂದರಂತಹವರಿಂದ  ಆವತ್ತಿನಿಂದ ಹಿಡಿದು ಇವತ್ತಿನವರೆಗೂ ನಿರಂತರವಾಗಿ ಹಿಂದೂ ಸಂಸ್ಕೃತಿ ಅತ್ಯಂತ ವೈಭವದಿಂದ ವಿಜೃಂಭಣೆಯಿಂದ ಜಗತ್ತಿನೆದುರು ತಲೆ ಎತ್ತಿ ನಿಂತಿದೆ. 


       ಹಿಂದೂ ಸಂಸ್ಕೃತಿ ನಿನ್ನೆ ಮೋನ್ನೆಯದ್ದಲ್ಲ, ಇದು ಜಗತ್ತಿನ ಅತ್ಯಂತ ಪ್ರಾಚೀನ ಸಂಸ್ಕೃತಿಗಳಲ್ಲಿ ಒಂದು. ಹಿಂದೂ ಸಂಸ್ಕೃತಿ ನಶಿಸುವುದಕ್ಕಾಗಿ ಮಠ-ಮಂದಿರಗಳನ್ನು  ಧ್ವಂಸ ಮಾಡುವುದಕ್ಕಾಗಿ ನಮ್ಮ ಸಂತ ಪರಂಪರೆಯನ್ನು ಅಳಿಸುವುದಕ್ಕಾಗಿ  ಹಿಂದೂ ಸಂಸ್ಕೃತಿ ಮತ್ತು ಭಾರತದ ಮೇಲೆ ಸತತ ಒಂದೂವರೆ ಸಾವಿರ ವರ್ಷಕ್ಕೂ ಹೆಚ್ಚು  ನಮ್ಮ ಮೇಲೆ ದಾಳಿ ಮಾಡಿದ್ದಾರೆ. ನಮ್ಮ ದೇಶಕ್ಕೆ ಮೊಘಲರು, ಪೋರ್ಚುಗೀಸರು, ಡಚ್ಚರು, ಫ್ರೆಂಚರು ಹಾಗೆ ಎರಡು ದಶಕಗಳ ಕಾಲ ಪರಕೀಯರು ಭಾರತ ಮಾತೆಯ ಮೇಲೆ ದಾಳಿ ಮಾಡಿದರು. 

         ಒಮ್ಮೆ ಇತಿಹಾಸದ ಪುಟವನ್ನು ತಿರುಚಿ ನೋಡಿದಾಗ ನಮಗೆ ತಿಳಿಯುತ್ತದೆ. ಈಜಿಪ್ಟ್  ಕೇವಲ 21 ವರ್ಷದಲ್ಲಿ ಒಂದೇ ದಾಳಿಗೆ ಇಡೀ ಈಜಿಪ್ಟ್ ರಾಷ್ಟ್ರ ಮುಸ್ಲಿಂ ರಾಷ್ಟ್ರವಾಯಿತು. ಟರ್ಕಿ ಕೇವಲ 14 ವರ್ಷಗಳಲ್ಲಿ ಒಂದೇ ದಾಳಿಗೆ ಮುಸ್ಲಿಂ ರಾಷ್ಟ್ರವಾಯಿತು. ಇರಾಕ್ ಮತ್ತು ಇರಾನ್ 10 ವರ್ಷದಲ್ಲಿ ಒಂದೇ ದಾಳಿಗೆ ಮುಸ್ಲಿಂ ರಾಷ್ಟ್ರವಾಯಿತು. ಯೂರೋಪ್ 58-59 ವರ್ಷಗಳಲ್ಲಿ ಯೂರೋಪ್ ಖಂಡಗಳಲ್ಲಿ ಇದ್ದ ಎಲ್ಲಾ ದೇಶಗಳು ಕ್ರಿಶ್ಚಿಯನ್ ಧರ್ಮಕ್ಕೆ  ಮತಾಂತರವಾಯಿತು. ಆದರೆ ನಮ್ಮ ಮೇಲೆ ಒಂದೂವರೆ ಸಾವಿರ ವರ್ಷಗಳ ದಾಳಿ ಮಾಡಿದರೂ ಸಹ ನಮ್ಮ ಪೂರ್ವಜರ ತ್ಯಾಗ ಬಲಿದಾನಗಳಿಂದ, ಅತ್ಯಂತ ಶೌರ್ಯ ಪರಾಕ್ರಮಗಳಿಂದ ಎಲ್ಲಾ ಆಕ್ರಮಣಗಳನ್ನು  ಎದುರಿಸಿ ಈ ನೆಲದಲ್ಲಿ ಹಿಂದೂ ಸಂಸ್ಕೃತಿಯ ಮೌಲ್ಯಗಳು ಇನ್ನೂ ಹಚ್ಚ ಹಸಿರಾಗಿ ಉಳಿದಿವೆ. ಇದು ನಮ್ಮ ಸಂಸ್ಕೃತಿ. 


      ಇವತ್ತಿಗೂ ಕೂಡ ಜಗತ್ತಿಗೆ ನಮ್ಮ ಹಿರಿಮೆಗಳನ್ನು ಹೇಳಿಕೊಳ್ಳಬೇಕಾದರೆ ನಮ್ಮ ಹಿರಿಯರು ಉಳಿಸಿಕೊಟ್ಟಂತಹ ಹಿಂದೂ ಸಂಸ್ಕೃತಿಯ ಶ್ರೇಷ್ಠವಾದನತಹ ಜೀವನಾದರ್ಶಗಳನ್ನೇ ಜಗತ್ತಿಗೆ ನಮ್ಮ ಕೊಡುಗೆ ಎಂದು ಕೊಡಲು ಸಾಧ್ಯ. ಹೀಗಾಗಿ ಇಂತಹ ನಮ್ಮ ಶ್ರೇಷ್ಠ ಹಿಂದೂ ಸಂಸ್ಕೃತಿಯ ಹಿರಿಮೆ-ಗರಿಮೆಗಳನ್ನು  ಮಹನತೆ-ಗಹನತೆಯನ್ನ ನಾವು ಎಷ್ಟರ ಮಟ್ಟಿಗೆ ಅರ್ಥೈಸಿಕೊಂಡಿದ್ದೇವೆ, ನಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸುವಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದೇವೆ ಎನ್ನುವುದು ಸವಾಲಾಗಿ ಪರಿಣಮಿಸಿದೆ.

                    ಇವತ್ತಿನ ವಿಷಮ ಪರಿಸ್ಥಿತಿಯಲ್ಲಿ ಪಾಶ್ಚಿಮತ್ಯಾ ಸಂಸ್ಕೃತಿಯ  ಆಕ್ರಮಣದ ಕಾಲಘಟ್ಟದಲ್ಲಿ ಅನೇಕ ರೀತಿಯ ಸಾಂಸ್ಕ್ರುತಿಕ ಕಲುಷಿತವಾದ ವಾತಾವರಣ ನಮ್ಮ ಸಂಸ್ಕೃತಿಯ ಮೇಲೆ ಪ್ರಭಾವ ಬೀರುತ್ತಿದೆ.

                    ನಮ್ಮ ಸಂಸ್ಕೃತಿಯ, ನಮ್ಮ ಧರ್ಮದ, ಹಿರಿಮೆ-ಗರಿಮೆಗಳನ್ನು ನಾವು ಮುಂದಿನ ಪೀಳಿಗೆಗೆ ವರ್ಗಾಯಿಸುವುದು ಸವಾಲಾಗಿ ಪರಿಣಮಿಸಿದೆ. ಮಾರ್ಡೊನ್ ಕಾಲವಾದರಿಂದ ಎಲ್ಲರೂ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ಉಡುಗೆ-ತೊಡುಗೆಯಿಂದ ಹಿಡಿದು ಆಹಾರ ಪದ್ಧತಿಯ ತನಕ ಬದಲಾವಣೆ ಹೊಂದುತ್ತಿದ್ದಾರೆ.

 ಬುದ್ಧಿಜೀವಿಗಳ ವಿತ್ತಂಡವಾದ ,ಸೊಗಲಾಡಿತನದ ಜ್ಯಾತ್ಯಾತೀತವಾದ, ಮಧ್ಯಕಂಡ ಕಾಲದಲ್ಲಿ ಮಿಷನರಿಗಳ ಮತಾಂತರದ ಕಾರ್ಯಗಳು, ಇಸ್ಲಾಂನ ಜಿಹಾದಿ ಇವೆಲ್ಲದ ಬಗ್ಗೆ ಎಚ್ಚರಿಕೆಯ ಹೆಜ್ಜೆ ಇಡುತ್ತಾ ಇಂದಿನ ಪೀಳಿಗೆಗೆ ಸುಸಂಸ್ಕೃತ ಹಿಂದೂ ಸಂಸ್ಕೃತಿಯ ಅರಿವನ್ನು ಮುಡಿಸುವುದರ ಜೊತೆಗೆ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ ನಮ್ಮ ಧರ್ಮದ ಬಗ್ಗೆ ಅರಿವನ್ನು ಮೂಡಿಸುವುದು ನಮ್ಮ ನಿಮ್ಮ ಕರ್ತವ್ಯವಾಗಿದೆ.

       ಹಾಗೆ ಹೆಮ್ಮೆಯಿಂದ ಹೇಳಿಕೊಳ್ಳೋಣ ನಮ್ಮ ಸಂಸ್ಕೃತಿ ಅವನತಿ ಹೊಂದದ ಸಂಸ್ಕೃತಿ ಎಂದು...🚩🚩


ಅನುಷಾ ಎಂ ಹೊಸಕೊಪ್ಪ

BA 2nd sem

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ