ಗುಂಡಿಗಳ 'ರಾಜ್ಯದಲ್ಲಿ - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಶನಿವಾರ, ಡಿಸೆಂಬರ್ 10, 2022

ಗುಂಡಿಗಳ 'ರಾಜ್ಯದಲ್ಲಿ


'ಗುಂಡಿ, ಕಂಡ ಕಂಡಲ್ಲಿ ಕಣ್ಣು ಹಾಯಿಸಿದಲ್ಲಿ ಕಾಲು ಹಾಕಿದಲ್ಲಿ ಕಾಣಸಿಗುತ್ತವೆ. ನಮ್ಮ ರಾಜ್ಯದಲ್ಲಂತೂ ರಸ್ತೆಗಿಂತ ಗುಂಡಿಗಳೇ ಹೆಚ್ಚು. ಹಾಗಾದರೆ ಗುಂಡಿ ಸಾಮಾನ್ಯವಾದವುಗಳೇ? ನನ್ನ ಪ್ರಕಾರ ಖಂಡಿತ ಇಲ್ಲ. ಗುಂಡಿ ತನ್ನ ಹೊಂಡದಲ್ಲಿ ಅನೇಕ ವಿಷಯಗಳನ್ನು ಹುದುಗಿಸಿಕೊಂಡಿರುತ್ತದೆ .ಏನು ವಿಚಿತ್ರವೆನಿಸುತ್ತಿದೆಯೇ? ಒಮ್ಮೆ ಯೋಚಿಸಿ .ಗುಂಡಿ ಹೇಗೆ ಯಾಕೆ ಉಂಟಾಗುತ್ತದೆ ? ಯಾರಿಂದ ಆಗುತ್ತದೆ? ನಾನೇ ಉತ್ತರಿಸುತ್ತೇನೆ ಕೇಳಿ .ಉದಾಹರಣೆಗೆ ರಸ್ತೆ ಗುಂಡಿಗಳನ್ನು ತೆಗೆದುಕೊಂಡರೆ ರಸ್ತೆಗೆ ಹಾಕಿದ ಜಲ್ಲಿ ಸಿಮೆಂಟು ಟಾರು ಇತ್ಯಾದಿ ಮಾಲುಗಳು ಗುಣಮಟ್ಟದಾಗಿರದಿದ್ದರೆ ಅಥವಾ ಗುಣ ಅಥವಾ ಹಳೆತಾಗಿ ಗುಣಮಟ್ಟ ಕಳೆದುಕೊಂಡಿದ್ದರೆ ,ಅವು ಕ್ರಮೇಣ ಕಿತ್ತು ಹೋಗಿ ಹೊಂಡವಾಗುತ್ತದೆ. ಯಾರಿಂದ ಆಗುತ್ತದೆ ?ರಸ್ತೆಗೆ ಬಳಸುತ್ತಿರುವ ಮಾಲುಗಳು ಗುಣಮಟ್ಟದ ಬಗ್ಗೆ ಪ್ರಶ್ನಿಸದವರಿಂದ, ಯಾವ ಮಾಲನಾದರೂ ಬಳಸಲಿ ನಮಗೆ ಏನು ಓಡಾಡಲು ದಾರಿಯಾಯಿತು ಎಂದು ಯೋಚಿಸುವವರಿಂದ. ಉಪಯೋಗಿಸಿದ ವಸ್ತುಗಳು ಒಂದೊಂದೇ  ಕೇಳುತ್ತಿದ್ದರು ಲಕ್ಷ ವಹಿಸದೆ ಹೋಗುವವರಿಂದ.

ಇನ್ನು ಸಣ್ಣದಿದೆಯಲ್ಲ ದೊಡ್ಡದಾದ ಮೇಲೆ ನೋಡಿಕೊಂಡರೆ ಆಯಿತು ಎಂದು ಕೆಲವರು, ನಮಗ್ಯಾಕೆ ಊರ ಉಸಾಬರಿ ಎಂದು ನಾಜೂಕಾಗಿ ಗುಂಡಿ ತಪ್ಪಿಸಿಕೊಂಡು ಹೋಗುವವರು ಅನೇಕರು, ನಾವು ಕೆಳಗೆ ಓಡಾಡುವುದಕ್ಕಿಂತ ಮೇಲೆ ಹರಡುವುದೇ ಹೆಚ್ಚೆಂದು ರಾಜಕಾರಣಿಗಳು ,ಕಂಡು ಕಾಣದಂತೆ ಇರುವವರು ನಗರ ಸಭೆ ಪುರಸಭೆಗಳು .ಇನ್ನೂ ಗುಂಡಿಗೆ ಬಿದ್ದು ಸಾಯುವವರು ಹೀಗೇ  ನಿರ್ಲಕ್ಷ್ಯ  ವಹಿಸಿದವರಲ್ಲಿ ಒಬ್ಬರು ,ಸುದ್ದಿ ಮಾಡುವವರು ನ್ಯೂಸ್ ಚಾನೆಲ್ ಗಳು. ಹಾಗಾದರೆ ರಸ್ತೆ ಗುಂಡಿ ಸರಿಪಡಿಸುವವರು ಯಾರು? ಯಾರೂ ಇಲ್ಲ? 

ಈಗ ಯೋಚಿಸಿ ಗುಂಡಿಸಾಮಾನ್ಯದ್ದೋ, ಅಸಾಮಾನ್ಯದ್ದೋ?

ನಮ್ಮ ರಾಜ್ಯದಲ್ಲಿ ಗುಂಡಿ ರಸ್ತೆಗಳಿಗಷ್ಟೇ ಸೀಮಿತವಾಗಿಲ್ಲ. ಕಾಣುವ ರಸ್ತೆ ಗುಂಡಿಗಳಿಗಿಂತ ಕಾಣದ ಅನೇಕ ಗುಂಡಿಗಳಿವೆ. ರಾಜ್ಯದ ವ್ಯವಸ್ಥೆಯೇ ಗುಂಡಿ ಬಿದ್ದಂತಾಗಿದೆ.

ಇದು ತುಂಬಾ ವಿಶಾಲ ವ್ಯಕ್ತಿ ಹೊಂದಿದ ಗುಂಡಿ ಈ ಗುಂಡಿಯಲ್ಲಿ ಬೀಳದವರೆ ಇಲ್ಲ ಎನ್ನಬಹುದು. ಬಿದ್ದು ಎದ್ದವರಿಗಿಂತ ಹೇಳುವ ಇಚ್ಛೆ ಇಲ್ಲದೆ ಹೊರಳಾಡುತ್ತಿರುವವರೇ ಹೆಚ್ಚು .


ಇದೆ ಎಲ್ಲಾ ಗುಂಡಿಗಳ ನಾಯಕಗುಂಡಿ 'ರಾಜಕೀಯ ಗುಂಡಿ 'ಈ ಗುಂಡಿ ಕೇವಲ ಗುಂಡಿಯಾಗಿರದೆ ಉಪಯೋಗವಿಲ್ಲದ ವಿಷಯಗಳು, ಚರ್ಚೆಗಳು ,ವ್ಯಕ್ತಿಗಳು ,ನೆಲೆ ನಿಂತ ಕೊಳಚೆಗುಂಡಿಯಾಗಿದೆ. ರಾಜ್ಯದಲ್ಲೆಡೆ ಇದರ ವಾಸನೆ ಗಬ್ಬು ನಾರುತ್ತಿದೆ. ಬ್ರಷ್ಟಾಚಾರ ದುರಾಡಳಿತ ಸ್ವಾರ್ಥ ಹಿಂಸೆ ಹಣದಾದಂತಹ ಪ್ರಬಲ ಸಾಮಾಜಿಕ ಸಾಂಕ್ರಾಮಿಕ ರೋಗಗಳನ್ನು ವ್ಯಾಪಕವಾಗಿ ಹಬ್ಬಿಸುತ್ತಿದೆ.

ಒಬ್ಬರ ಮೇಲೊಬ್ಬರು ಅರ್ಥವಿಲ್ಲದ ಮಾತಿನ ಕೆಸರೆರಚಿಕೊಳ್ಳುವುದೇ ಇವರ ಮುಖ್ಯ ಕಸುಬಾಗಿದೆ. ಉಳಿದೆಲ್ಲ ಕ್ಷೇತ್ರಗಳಲ್ಲಿಯೂ ಗುಂಡಿಗೆ ಗುಂಡಿ ಕೊರೆಯುವ ಕೆಲಸ ನಿರ್ವಹಿಸುವುದು ಸಹ ಇಲ್ಲಿನ 'ಹೆಗ್ಗಣಗಳೆ'. ಇವರುಗಳ ಕೆಲಸ ಎಷ್ಟು ನಾಜೂಕು ಎಂದರೆ ಎಲ್ಲಾ ಕಡೆಗಳಲ್ಲಿಯೂ ಗುಂಡಿಕೊರೆದು, ಏನು ಏನು ಮಾಡದವರಂತೆ ತೆರೆಯ ಮರೆ ಸೇರಿಬಿಡುತ್ತಾರೆ. ಇವರು ತೋಡುತ್ತಿರುವ ಗುಂಡಿ ಒಂದೋ,ಎರಡೋ ಅಬ್ಬಾ! ಎಣಿಸಲು ಅಸಾಧ್ಯ. ಧರ್ಮವೆಂಬ ಪಟ್ಟಿ ಕಟ್ಟಿ ಜನರನ್ನು ಕುರುಡಾಗಿಸಿ ಜನರ ಮನದಲ್ಲಿ ಕೋಮು ವೈ ಮನಸ್ಸಿನ ಗುಂಡಿ ಕೊರೆದರು .ಕೈಯಲ್ಲಿ ನೋಟಿನ ಕಂತೆಗಳನ್ನು ಇಟ್ಟು ಬಾಯಿಗೆ ಹೆಂಡ ಸುರಿದು ಮಾತಿನ ಮಂಕು ಬೂದಿಯೆರಚಿ, ಮತದಾರರನ್ನು ನಶೆಯಲ್ಲಿ ತೇಲುವಂತೆ ಮಾಡಿ ಚುನಾವಣಾ ವ್ಯವಸ್ಥೆಯಲ್ಲಿ ಗುಂಡಿ ಕೊರೆದರು. ಎಲ್ಲಾ ಕ್ಷೇತ್ರದಲ್ಲಿಯೂ ಅವ್ಯವಸ್ಥೆಯನ್ನು ತಂದು ಪ್ರಜೆಗಳನ್ನು ಪೇಚಿಗೆ ಸಿಲುಕಿಸಿದ್ದಾರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಅವಶ್ಯಕತೆಗಳನ್ನು ಕಲ್ಪಿಸದೆ ವೈದ್ಯರು ಮತ್ತು ಸಿಬ್ಬಂದಿಗಳನ್ನು ನೇಮಿಸದೆ ಜನರ ಜೀವಕ್ಕೆ ಗುಂಡಿ ತೊಡುತ್ತಿದ್ದಾರೆ 'ಆರೋಗ್ಯವೇ ಭಾಗ್ಯ ಆಸ್ಪತ್ರೆಗೆ ಹೋದರೆ ದೌರ್ಭಾಗ್ಯ 'ಎಂಬಂತಾಗಿದೆ ಬಡ ಜನರ ಪರಿಸ್ಥಿತಿ. ಇಷ್ಟೇ ಅಲ್ಲ ಇವು ಕೇವಲ ಉದಾರಣೆಗಳಷ್ಟೇ ನಮ್ಮ ರಾಜ್ಯದಲ್ಲಿ ಶಿಕ್ಷಣದಿಂದ ಹಿಡಿದು ನ್ಯಾಯಾಂಗ ವ್ಯವಸ್ಥೆಯವರೆಗೂ ಅವ್ಯವಸ್ಥೆಯನ್ನು ಕಾಣಬಹುದಾಗಿದೆ .

ಇಷ್ಟಾದರೂ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ನಮ್ಮ ಜನಪ್ರತಿನಿಧಿಗಳು. ಏಕೆಂದರೆ ಈ ರಾಜಕಾರಣಿಗಳು ಬಯಸುವುದು ಇದೇ ಅಕ್ರಮ ವ್ಯವಸ್ಥೆಯನ್ನೇ ಕಾರಣ ಇವರು ಬಯಸುವುದು ದೇಶದ ಅಭ್ಯುದಯವನ್ನೆಲ್ಲ ಬದಲಿಗೆ 'ವೋಟು, ನೋಟು, ಸೆಲ್ಯುಟು '.

ಈ ಗುಂಡಿಯ ನಿರ್ಮಾಣಕ್ಕೆ ಕಾರಣರು ಕೇವಲ ರಾಜಕಾರಣಿಗಳು ಒಂದೇ ಅಲ್ಲ.ನಮ್ಮ ಪಾಲು ಇದೆ. ಅಂದರೆ ಪ್ರಜೆಗಳ ಪಾಲು . ಹೇಗೆ ರಸ್ತೆ ವಿಷಯದಲ್ಲಿ ನಿರ್ಲಕ್ಷವೋ ಪ್ರತಿನಿಧಿ ಆಯ್ಕೆಯಲ್ಲಿಯೂ ಅದೇ ನಿರ್ಲಕ್ಷ .ಅಭ್ಯರ್ಥಿಯ ಅರ್ಹತೆ ಸಾಮರ್ಥ್ಯ ನೋಡದೆ ಆಯ್ಕೆ ಮಾಡುವುದು, ಯಾವುದೋ ಒಂದು ಪಕ್ಷಕ್ಕೆ ಜೋತು ಬಿದ್ದಿರುವುದು ,ದೇಶ ಏನಾದರೂ ಆಗಲಿ ನಮಗೆ 'ನೋಟು, ಹೆಂಡ' ಕೊಟ್ಟವರೇ ಮಂತ್ರಿಗಳಾಗಲಿ ಎಂಬುದು ಮತದಾರರ ನಿರ್ಧಾರ .

ವ್ಯವಸ್ಥೆ ಹದಗೆಟ್ಟಿದೆ ಗುಂಡಿ ಬಿದ್ದಿದೆ ಎಂದು ತಿಳಿದರು ತಿಳಿಯದಂತೆ ಇರುವವರು ಗಬ್ಬುನಾರುತ್ತಿದ್ದರು ಹಂದಿಗಳಂತೆ ಅದರಲ್ಲೇ ಬಿದ್ದು ಹೊರಳಾಡ ಬಯಸುವವರು ಒಂದೆಡೆಯಾದರೆ ,ಸ್ವಚ್ಛಗೊಳಿಸುವ ಇಚ್ಛೆ ಇದ್ದರೂ ಎಲ್ಲಿ ತಮಗೂ ಅದರ ಕೊಳೆ ಅಂಟಿ ಬಿಡುತ್ತದೆಯೋ ಎಂಬ ಭಯದಲ್ಲಿಯೇ ದೂರ ನಿಂತವರು ಇನ್ನೊಂದೆಡೆ ,ಇನ್ನು ಬೆಂಬಲ ಸಿಗದೆ ಕೈಕಟ್ಟಿ ನಿಂತವರು ಹಲವರು, ಸ್ವಚ್ಛಗೊಳಿಸುವ ಉದ್ದೇಶದಿಂದ ಹೋಗಿ ಉಸಿರುಗಟ್ಟಿ ಸತ್ತವರು ಅನೇಕರು .   ನೋಡಿದಿರಾ ರಸ್ತೆಗುಂಡಿ ಎಂಥ ದೊಡ್ಡ ಪಾಠವನ್ನು ತನ್ನೊಳಗೆ ಹುದುಗಿಸಿಕೊಂಡಿದೇಎಂದು .ಈಗ ತಿಳಿಯಿತಾ ಗುಂಡಿ ಎಷ್ಟು ಅಸಮಾನ್ಯದೆಂದು .ನಮ್ಮ ರಾಜ್ಯವೇ ಗುಂಡಿ ಬಿದ್ದ ರಸ್ತೆಯಂತಾಗಿದೆ. ಎಚ್ಚರ ಕಣ್ಣಿಗೆ ಕಾಣುವ ರಸ್ತೆಗುಂಡಿ ತಪ್ಪಿಸುವಷ್ಟು ಸುಲಭದ ಕೆಲಸವಲ್ಲ ಕಾಣದ ಗುಂಡಿಗಳಿಂದ ಪಾರಾಗುವುದು. ರಸ್ತೆ ಗುಂಡಿಗಳನ್ನು ನಿರ್ಲಕ್ಷಿಸಿದಂತೆ ,ನಿರ್ಲಕ್ಷಿಸಿದರೆ ಇಡೀ ರಾಜ್ಯದ ವ್ಯವಸ್ಥೆಯೇ ಗುಂಡಿ ಬಿದ್ದ ರಸ್ತೆಯಂತಾಗಿ ಇಡೀ ರಾಜ್ಯವನ್ನೇ ಬಲಿಪಡೆಯಬಹುದು .ಗುಂಡಿ ಬಿದ್ದಾಕ್ಷಣ ಲಕ್ಷಣವಹಿಸಿ ಗುಂಡಿ ಮುಚ್ಚುವ ಕೆಲಸ ಮಾಡಿದರೆ ರಸ್ತೆ ಸಂಪೂರ್ಣ ಹಾಳಾಗುವುದಿಲ್ಲವೋ, ಹಾಗೆ ಈ ಕಾಣದ ಗುಂಡಿಗಳನ್ನು ತಕ್ಷಣ ಮುಚ್ಚುವ ಪ್ರಯತ್ನ ನಡೆದರೆ ರಾಜ್ಯವೆಂಬ ರಸ್ತೆ ಸುಗಮವಾಗಿ ಸಾಗಲು ಸಾಧ್ಯ. ನಮಗ್ಯಾಕೆ ಊರವಸಾಬರಿ ಎಂದು ನಾಚುಕಾಗಿ ರಸ್ತೆಗುಂಡಿ ತಪ್ಪಿಸಿಕೊಂಡಿ ಹೋದವರು ಈಗ ಯೋಚಿಸಿ ರಸ್ತೆಗೊಂಡಿ ತಪ್ಪಿಸಿದರು ಇನ್ನೆಷ್ಟು ಗುಂಡಿಗೆ ಬಿದ್ದಿರುವಿರೆಂದು.


ಅನಿತಾ ಬೀ ಗೌಡ

ಬಿ.ಎ ದ್ವಿತೀಯ 

1 ಕಾಮೆಂಟ್‌: