ಬೇಡರ ವೇಷ - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಶನಿವಾರ, ಜನವರಿ 28, 2023

ಬೇಡರ ವೇಷ

 


ನವಿಲು ಗರಿ ಬಣ್ಣ, ಗೆಜ್ಜೆ‌, ಮೀಸೆ, ಹತ್ತಿ,ಕೆಂಪು ಬಣ್ಣ,ಕತ್ತಿ,ಡಾಲು,ಕೈಗೆ ನಿಂಬೆ ಹಣ್ಣು, ಕಟ್ಟಿಕೊಂಡು ಬೀದಿಗಿಳಿದರೆ, ಢಣ್ ಢಣಕು ಎಂಬ ಶಬ್ದ ಮೊಳಗಲಾರಂಭಿಸುತ್ತದೆ. ವೇಷ ತೊಟ್ಟಿ ಕೊಂಡವನ ಹಿಂಬದಿಯಿಂದ ಇಬ್ಬರು ಹಿಡಿದು ನಿಯಂತ್ರಿಸಿದರೆ, ತಮಟೆ ಬಡಿಯುವವ ಕುಣಿವ ವ್ಯಕ್ತಿಗೆ ಹುರುಪು ನೀಡುತ್ತಾನೆ.  ಇದೇ ಬೇಡರ ವೇಷ. 

                ಬೇಡರ ವೇಷಕ್ಕೆ ಸುಮಾರು ಎರಡು ನೂರು ವರ್ಷಗಳ ಸುದೀರ್ಘ ಇತಿಹಾಸವಿದೆ. ವಿಜಯ‌ ನಗರದ ಅರಸರ ಆಡಳಿತದ ನಂತರ ಸೋಂದಾ ರಾಜರ ಆಡಳಿತ ಆರಂಭವಾಯಿತು. ಕಲ್ಯಾಣ ಮಂಟಪದಂತಿದ್ದ ಸೋಂದಾ ಮೇಲೆ ಮುಸ್ಲಿಂ ರ ದಾಳಿ ನಡೆಯವಾರದೆಂದು ಬೇಡ ಜನಾಂಗದ ಮಲ್ಲೇಶಿಯನ್ನು ರಕ್ಷಣೆಗೆ ನೇಮಿಸುತ್ತಾರೆ‌.  ಆತ ರುದ್ರಾಂಬಿಕೆ ಎಂಬ ಸುಂದರಿಯನ್ನು ಲಗ್ನ ವಾಗಲು ಇಚ್ಛಿಸುತ್ತಾನೆ. ಮಲ್ಲೇಶಿಯ ದುರಾಡಳಿತದಿಂದ ಜನ ಬೇಸತ್ತಿದ್ದರು. ಆತನಿಗೆ ಪಾಠ ಕಲಿಸಲು ರುದ್ರಾಂಬಿಕಾ ಮುಂದಾಗಿ , ಹೋಳಿ ಹುಣ್ಣಿಮೆಯ ದಿನ ಬೇಡರ ವೇಷ ಧರಿಸಿ ಗಂಡನ ಕಣ್ಣಿಗೆ ಆಸಿಡ್ ಸಿರಿದು ಆತನ್ನು ಬಂಧಿಯಾಗಿಸುತ್ತಾಳೆ. ಆಕೆಯನ್ನು‌ ಕೊಲ್ಲಲು ಬಂದ ಗಂಡನ್ನು ಜನರು ಸಜೀವ ವಾಗಿ ಸುಡುತ್ತಾರೆ‌. ಹೆಂಡತಿ ಕೂಡ ಚಿತೆ ಏರುತ್ತಾಳೆ . ಆಕೆ ತ್ಯಾಗದ ಸಂಕೇತವಾಗಿ ಬೇಡರ ವೇಷ ಹಾಕುವ ಸಂಪ್ರದಾಯ ರೂಢಿ ಬಂದಿತು. ಎಂದು ಇತಿಹಾಸ ತಿಳಿಯ ಪಡಿಸುತ್ತದೆ‌.

ಇಂತಹ  ಅಮೋಘ ದೃಷ್ಯವನ್ನು ನೋಡಲು ಹೊರ ರಾಜ್ಯದಿಂದ ಕರ್ನಾಟಕದ ಶಿರಸಿಗೆ ಬರುತ್ತಾರೆ. ರಾತ್ರಿಯಿಂದ ಬೆಳಗಿನ ಜಾವದ ವರೆಗೆ ಸುದೀರ್ಘವಾಗಿ ಕುಣಿದು ಪ್ರೇಕ್ಷಕರ ಮನಗೆಲ್ಲುತ್ತಾರೆ‌. 

  ಹರಕೆ ಸಂಪೂರ್ಣವಾದವರು ಬೆಳಿಗ್ಗೆ ಹುಲಿವೇಷ ಧರಿಸಿ ಕುಣಿಯುತ್ತಾರೆ. ವಿಶೇಷ ಎಂದರೆ,ಹೋಳಿ ಹುಣ್ಣುಮೆಯ ಮುಂಚಿನ ಮೂರು ದಿನ‌ದಿಂದಲೇ ಮನೆ ಮಾತಾಗುವ ಬೇಡರ ವೇಷ ಎರಡು ವರ್ಷ ಕ್ಕೊಮ್ಮೆ ಬರುವ ಶಿರಸಿ ಮಾರಿಕಾಂಬಾ ಜಾತ್ರೆ ಇಲ್ಲದ ವರ್ಷಗಳಲ್ಲಿ ಹೋಳಿ ಹುಣ್ಣಿಮೆ ವಿಜೃಂಭಣೆಯಿಂದ ನಡೆಯುತ್ತದೆ. 

ಇಂತಹ ಕಲೆ ಶಿರಸಿ ಬಿಟ್ಟು ಬೇರೆಲ್ಲೂ ಕಾಣ ಸಿಗದು.


✍️ ಚಿನ್ಮಯ ಸ ಹೆಗಡೆ

 ಬಿ ಎ 2ನೇ ವರ್ಷ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ