ಪ್ರವಾಸಿಗರ ಮನಸೆಳೆಯುವ ಅತ್ತಿವೇರಿ ಪಕ್ಷಿಧಾಮ - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಶನಿವಾರ, ಜನವರಿ 21, 2023

ಪ್ರವಾಸಿಗರ ಮನಸೆಳೆಯುವ ಅತ್ತಿವೇರಿ ಪಕ್ಷಿಧಾಮ

 


ಸೂರ್ಯ ಉದಯಿಸುವ ಮುನ್ನವೇ ಹಕ್ಕಿಗಳ ಚಿಲಿಪಿಲಿ ಸದ್ದು, ಎಲ್ಲಿ ನೋಡಿದರೂ ಅಲ್ಲಿ ಪಕ್ಷಿಗಳು, ಪಕ್ಷಿಗಳ ಹಾರಾಟ, ಕೂಗಾಟ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಕಣ್ಣಿಗೆ ಕಾಣಸಿಗುವ ಸ್ವದೇಶಿ ಪಕ್ಷಿಗಳ ಕಲರವ ನೋಡಲು ನಮ್ಮ ಎರಡು ಕಣ್ಣುಗಳು ಸಾಲದು. ಈ ನೋಟಕ್ಕೆ ಮುಂಡಗೋಡ ಸಾಕ್ಷಿಯಾಗಿದೆ. ಈ ಪಕ್ಷಿಧಾಮಕ್ಕೆ ವಿವಿಧ ಭಾಗಗಳಿಂದ ಹಲವಾರು ಬಗೆಯ ಪಕ್ಷಿಗಳು ಆಗಮಿಸಿ ಬೀಡು ಬಿಟ್ಟಿರುವದು ಪಕ್ಷಿ ಪ್ರಿಯರಿಗೆ ಸಂತಸವನ್ನುಂಟು ಮಾಡಿದೆ. 

             ಪಕ್ಷಿಧಾಮ ಎಂದರೆ ರಂಗನತಿಟ್ಟು ನೆನಪಿಗೆ ಬರುವುದು ಸಹಜ. ಆದರೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿರುವ ಅತ್ತಿವೇರಿ ಪಕ್ಷಿಧಾಮ ಬಹಳಷ್ಟು ದೇಶ ವಿದೇಶಿ ಹಕ್ಕಿಗಳನ್ನು ಆಕರ್ಷಿಸುತ್ತದೆ. ಅತ್ತಿವೇರಿ ಹೆಸರೇ ಸೂಚಿಸುವಂತೆ ಅತಿ ಹೆಚ್ಚಾಗಿ ಹಣ್ಣುಗಳನ್ನು ಬೆಳೆಯುತ್ತಿದ್ದ ಪ್ರದೇಶ. ಕೆರೆಯ ಸುತ್ತಲಿನ ಭೂ ಪರಿಸರವು ಪಕ್ಷಿಗಳ ವಾಸ ಸ್ಥಾನಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಅತ್ತಿವೇರಿ ಎಂದಾಕ್ಷಣ ನೆನಪಿಗೆ ಬರುವುದು ಏನಪ್ಪಾ ಅಂದ್ರೆ ಅಲ್ಲಿ ಸುತ್ತಲೂ ಇರುವ ಅರಣ್ಯ ಪ್ರದೇಶ, ಸ್ವಚ್ಛಂದವಾಗಿ ಕಂಗೊಳಿಸುವ ಡ್ಯಾಂ ಮತ್ತು ಪಕ್ಷಿಗಳ ಚಿಲಿಪಿಲಿ ನಾದ. 

                ಇದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಿಂದ 15 ಕಿಮೀ ದೂರದಲ್ಲಿದೆ. ಅತ್ತಿವೇರಿಗೆ ಒಳ ಮಾರ್ಗವಾಗಿ ಪ್ರಯಾಣ ಮಾಡಿದರೆ ಅಲ್ಲಿ ನಮಗೆ ಹಳ್ಳಿಗಳನ್ನು ನೋಡಬಹುದು. ಆ ಹಳ್ಳಿಗಳ ವಾತಾವರಣ, ಸೊಬಗು, ಅಲ್ಲಿಯ ಜನ ಸಮುದಾಯ, ಅಲ್ಲಿ ಪರಿಸರವನ್ನು ವೀಕ್ಷಿಸುತ್ತಾ ನಾವು ಪ್ರಯಾಣ ಮಾಡಬಹುದು. ಈ ಪಕ್ಷಿಧಾಮ 2.23 ಚದರ ಕಿ.ಮೀ ವಿಸ್ತೀರ್ಣದಲ್ಲಿದೆ. ಈ ಪಕ್ಷಿಧಾಮ ನಿತ್ಯಹರಿದ್ವರ್ಣವೂ ಅಲ್ಲ. ಇತ್ತ ಕುರುಚಲು ಅಲ್ಲ ಎನ್ನುವಂತಹ ಅರಣ್ಯ ಪ್ರದೇಶ ಮಧ್ಯದಲ್ಲಿ 22 ಬೇರೆ ಬೇರೆ ದೇಶಗಳ 79 ಪ್ರಭೇದದ ವಲಸೆ ಹಕ್ಕಿಗಳಿಗೆ ಆಶ್ರಯವನ್ನು ನೀಡುತ್ತಿದೆ. ಕೆರೆಯ ನೀರು, ಏರಿ ಹಾಗೂ ಸುತ್ತಲಿನ ಅರಣ್ಯದಲ್ಲಿರುವ ವಿವಿಧ ಬಗೆಯ ಹೂವು ಹಣ್ಣುಗಳು ಹಕ್ಕಿಗಳನ್ನು ಆಕರ್ಷಿಸುತ್ತಿವೆ. ಸುರಕ್ಷತೆ, ಹವಾಮಾನ ಹಾಗೂ ಆಹಾರಗಳಿಗಾಗಿ ದೇಶ ವಿದೇಶಗಳಿಂದ ಪಕ್ಷಿ ಮಿತ್ರರ ಜತೆಗೆ ಸ್ಥಳೀಯ ಪಕ್ಷಿಗಳು ನೆಲೆಸಿರುತ್ತವೆ. ಹೀಗಾಗಿ ಅತ್ತಿವೇರಿ ಪಕ್ಷಿಗಳ ಭಾವೈಕ್ಯದ ಬೀಡಾಗಿರುವುದನ್ನು ನಾವು ಕಣ್ಣು ತುಂಬಿ ಕೊಳ್ಳಬಹುದು. 

                  ಅತ್ತಿವೇರಿಯನ್ನು ಪ್ರವೇಶಿಸಿದಾಗ ನಮಗೆ ಮೊದಲು ಕಾಣುವುದು ಸ್ವಚ್ಛಂದವಾದ ಉದ್ಯಾನವನವನ್ನು ಅಲ್ಲಿಯ ಹೂ ತೋಟವನ್ನು ವಕ್ಷೀಸುತ್ತಾ ಮುಂದೆ ಸಾಗಿದರೆ ಅಲ್ಲಿ ನಮಗೆ ಪಾರ್ಕನ್ನು ನೋಡಬಹುದು. ಅಲ್ಲಿ ಅನೇಕ ಆಟದ ವಸ್ತುಗಳನ್ನು ನೋಡುತೇವೆ. ನೋಡುವುದು ಅಷ್ಟೇ ಅಲ್ಲ, ಅಲ್ಲಿ ಆಟವನ್ನು ಸಹ ಆಡಬಹುದು. ಮುಂದೆ ಸಾಗಿದರೆ ಅಲ್ಲಿ ಸೌಂದರ್ಯ ಯುತವಾದ ಸೇತುವೆಯನ್ನು ನೋಡುತೇವೆ. ಸುತ್ತಲೂ ಅರಣ್ಯ ಪ್ರದೇಶವನ್ನು, ಆ ಕೆರೆಯಲ್ಲಿ ಪಕ್ಷಿಗಳ ಆಟವನ್ನು ನಾವು ನೋಡುತೇವೆ. ಆ ಕೆರೆಯಲ್ಲಿರುವ ವಿವಿಧ ಬಗೆಯ ಮೀನುಗಳನ್ನು ನಾವು ನೋಡುತ್ತಾ ಅಲ್ಲಿಯ ಸೋಬಗನ್ನು ನೋಡುತ್ತಾ ಮೈ ಮರೆಯುವುದು ಅಂತೂ ಖಂಡಿತ. 

             ಅಷ್ಟೇ ಅಲ್ಲದೆ ಈ ಉದ್ಯಾನವನದಲ್ಲಿ ಉಪಹಾರ ಗೃಹಗಳು, ಮತ್ತು ಇಲ್ಲಿಗೆ ಬರುವ ಪ್ರವಾಸಿಗರಿಗೆ ಉದ್ಯಾನವನದಲ್ಲಿ ಕುಳಿತು ಕೊಳ್ಳಲು, ಓಡಾಡಲು, ಟೈಮ್ ಪಾಸ್ ಮಾಡಲು ಇದು ತುಂಬಾ ಅನುಕೂಲ ವಾದಂತಹ ಸ್ಥಳ. ಅಷ್ಟೇ ಅಲ್ಲದೆ ಈ ಪರಿಸರದ ಸೊಬಗನ್ನು ಅನುಭವಿಸುತ್ತಾ ತಮ್ಮ ಮನಸ್ಸಿನ್ನಲ್ಲಿರುವ ಚಿಂತೆಯನ್ನು ಮರೆತು ತುಂಬಾ ಖುಷಿಯನ್ನು ಪಡುತ್ತೇನೆ.

 

ಮೇಘನಾ ಭೋವಿ

ಬಿ.ಎ II

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ