ಭಾರತ ಸಂವಿಧಾನದಲ್ಲಿರುವ ಮೀಸಲಾತಿ ಎಷ್ಟುಸರಿ? ಎಷ್ಟು ತಪ್ಪು? - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಮಂಗಳವಾರ, ಆಗಸ್ಟ್ 1, 2023

ಭಾರತ ಸಂವಿಧಾನದಲ್ಲಿರುವ ಮೀಸಲಾತಿ ಎಷ್ಟುಸರಿ? ಎಷ್ಟು ತಪ್ಪು?

 

ಉತ್ತರಮ್ ಯತ್ ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಂ||

ವರ್ಷಂತದ್ ಭಾರತಮ್ ನಾಮ ಭಾರತೀಯತ್ರ ಸಂತತಿಃ|

ನವಯೋಜನ ಸಾಹಸ್ರಃ ವಿಸ್ತಾರೋಸ್ಯ ಮಹಾಮುನೇ|

ಕರ್ಮಭೂಮಿರಿಯಂ ಸ್ವರ್ಗ ಮಪಗರ್ವಂಚಗಚ್ಚತಾಂ||


ಸಮುದ್ರಕ್ಕೆ ಉತ್ತರ ದಿಕ್ಕಿನಲ್ಲಿಯೂ ಹಿಮಾದ್ರಿ ಶಿಖರಗಳ ದಕ್ಷಿಣಕ್ಕೂ ಇರುವ ಭಾರತ ದೇಶವನ್ನು ಭಾರತ ವರ್ಷವೆಂದೂ ಇಲ್ಲಿ ವಾಸಿಸುವವರು ಭಾರತೀಯರು. ಇದು 9,000 ಚದುರದಷ್ಟು ವಿಸ್ತೀರ್ಣ ಹೊಂದಿದೆ. ಇಂತಹ ವಿಶಾಲ ಭಾರತ ದೇಶ  ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಹಿಂದುಳಿದ ನಾಗರಿಕರಿಗೆ ,ಶಿಕ್ಷಣ ಪ್ರವೇಶ, ಉದ್ಯೋಗ,ರಾಜಕೀಯ ಸಂಸ್ಥೆ, ಬಡ್ಡಿ ,ಇತ್ಯಾದಿಗಳಲ್ಲಿ ನಿರ್ದಿಷ್ಟ ಶೇಕಡಾವಾರು ಮೀಸಲಾತಿ

ಕೋಟಾಗಳು ಅಥವಾ ಸೀಟುಗಳನ್ನು ಹೊಂದಲು ಅನುಮತಿ ಒದಗಿಸಿತು. 

 ಪ್ರಸ್ತುತ ದಲ್ಲಿರುವ ಮೀಸಲಾತಿಯನ್ನು  ಬ್ರಿಟಿಷ್ ಪ್ರಧಾನಿ ರಾಮ್ಸೆ ಮ್ಯಾಕ್ಡೊನಾಲ್ಡ್ 1933ರಲ್ಲಿ 'ಕೋಮು ಪ್ರಶಸ್ತಿ' ನೀಡಿದ ನಂತರ  ಜಾರಿಗೆ ತರಲಾಯಿತು. ಸ್ವತಂತ್ರಾ ನಂತರ 1950ರಲ್ಲಿ ಎಲ್ಲೆಡೆ ಮೀಸಲಾತಿಯನ್ನು ಅಳವಡಿಸಲು ಆರಂಭಿಸಿದರು. ಮೀಸಲಾತಿಯು ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಕೀಳರಿಮೆಯನ್ನು ಹೋಗಲಾಡಿಸಲು ಜಾರಿತರಲಾಯಿತು. ಮೇಲ್ವರ್ಗಗಳ  ದಬ್ಬಾಳಿಕೆಯಿಂದ ಬಳಲುತ್ತಿದ್ದ ಕೆಳವರ್ಗ ವನ್ನು ಮೇಲೆತ್ತಲು ಮೀಸಲಾತಿಯನ್ನು ಬಳಸಿದರು. ಸಂವಿಧಾನವು ಶೇ.15  ಮತ್ತು ಶೇ.7.5  ರಷ್ಟು‌ ಮೀಸಲಾತಿಯನ್ನು ಸರ್ಕಾರಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಸಾರ್ವಜನಿಕ ಕ್ಷೇತ್ರದ ಉದ್ಯಮಗಳಲ್ಲಿ ನೀಡಿದೆ.


                              ಮೀಸಲಾತಿಯು  ಅಲ್ಪ ಸಂಖ್ಯಾತರು, ಎಸ್ಸಿ ಎಸ್ಟಿ, ಮುಂತಾದ ಸಮುದಾಯವನ್ನು ಮೇಲೆತ್ತಲು ಉಪಕಾರಿಯಾಗಿ, ಕಡಿಮೆ ಅವಕಾಶ  ಪಡೆದವರಿಗೆ ವರದಾನವಾಗಿ ಪರಿಣಮಿಸಿದೆ.   ಮೀಸಲಾತಿ ಅಡಿಯಲ್ಲಿ ರೂಪಿಸಲಾದ ಯೋಜನೆಯಿಂದ ವಿವಿಧ ವಲಯಗಳಲ್ಲಿ ಮುಂಬರಲು ಸಹಾಯವಾಯಿತು.‌

ಅಂದಿನ ಕಾಲದಲ್ಲಿ ಮೇಲ್ವರ್ಗದ ಜನರಿಂದ ನಡೆಯುತ್ತಿದ್ದ ತಾರತಮ್ಯವನ್ನು, ತಿರಸ್ಕೃತ ಭಾವವನ್ನು ಹೋಗಲಾಡಿಸಲು ಅನುಕೂಲವಾಗಿ, ನಿರುದ್ಯೋಗ, ಅನಕ್ಷರತೆಯಂತಹ ವಿಚಾರಗಳಲ್ಲಿ  ದೇಶ ಮುಂಬರಲು ಮೀಸಲಾತಿ ಅವಕಾಶ ಮಾಡಿಕೊಟ್ಟಿತು.     ಆದರೆ 

          "ಕಾಲಾಯ ತಸ್ಮೈ ನಮಃ" ಎಂಬಂತೆ

ಮೀಸಲಾತಿ ವ್ಯವಸ್ಥೆಯು ರಾಜಕೀಯವಾಗಿ ಮಾರ್ಪಟ್ಟಿದೆ.

ಯಾವುದೇ ಚುನಾವಣೆ ಬಂದರೂ ಮೀಸಲಾತಿ ಒಂದು ಬ್ರಹ್ಮಾಸ್ತ್ರ ವಾಗಿದೆ.ಸಾಂವಿಧಾನಿಕವಾಗಿ ನಿರ್ದಿಷ್ಟ ಅವಧಿವರೆಗೆ ಇರಬೇಕಿದ್ದ ಮೀಸಲಾತಿ ವ್ಯವಸ್ಥೆ ರಾಜಕೀಯ ಲಾಭಕ್ಕಾಗಿ ಮುಂದುವರಿಯುತ್ತಾ ಸಾಗಿದೆ.‌ ಹೆಚ್ಚಾದರೆ ಅಮೃತವೂ ವಿಷ ಎಂಬಂತೆ ಮೀಸಲಾತಿಯಲ್ಲಿಯೂ ಇದೇ  ಆಗಿದೆ.

ಮೀಸಲಾತಿ ದೆಸೆಯಿಂದ ಎಷ್ಟೋ  ಉತ್ತಮ ವಿದ್ಯಾರ್ಹತೆ ಮತ್ತು ಕೌಶಲ್ಯ ಪಡೆದವರಿಗೆ ವಿದೇಶ ಮತ್ತು ಖಾಸಗಿ ಕಂಪನಿಗಳೇ  ಆಸರೆ. ಒಂದು ವೇಳೆ ಉತ್ತಮ ಕೌಶಲ್ಯ ಹೊಂದಿದವರಿಗೆ ಪ್ರಾಧಾನ್ಯತೆ ಸಿಕ್ಕಿದ್ದರೆ  ದೇಶ ಸಾಲದ ಕೂಪದಲ್ಲಿ ಇರುತ್ತಿರಲಿಲ್ಲವೇನೋ.... ಎಲ್ಲಾ ವಿಧಿಲಿಖಿತ.

 ಮೀಸಲಾತಿಯಿಂದ ಎಷ್ಟೇ ಕಡಿಮೆ ಅಂಕ ಪಡೆದ ವಿದ್ಯಾರ್ಥಿಯಾದರು ಉತ್ತಮ ಸರ್ಕಾರಿ ಉದ್ಯೋಗಕ್ಕೆ  ಸೇರಿಬಿಡುತ್ತಾನೆ. ಅದೇ ಉತ್ತಮ ಅಂಕ ಪಡೆದವನು ಉತ್ತಮ ಕೆಲಸಕ್ಕೆ  ತಡಕಾಡುವ ಪರಿಸ್ಥಿತಿ ಬಂದೊದಗಿದೆ.

ಅದಕ್ಕೂ ಮಿಗಿಲಾಗಿ ಮೀಸಲಾತಿ ಶಿಕ್ಷಣದ‌ಗುಣಮಟ್ಟ ವನ್ನು ಕಡಿಮೆ ಗೊಳಿಸಿ, ಯಾವ ವರ್ಗಕ್ಕೆ ಮೀಸಲಾತಿ ಸೌಲಭ್ಯಗಳು ದೊರೆಯ ಬೇಕಿತ್ತೋ ಅವರಿಗೆ ದೊರೆಯದೇ ಭೃಷ್ಟ ಅಧಿಕಾರಿಗಳ ಪಾಲಾಗಿ,ವಂಚಿತ ವರ್ಗದ ಆಕ್ರೋಶದಿಂದ ಸಮಾಜದ ಶಾಂತಿ,ಸೌಹಾರ್ದತೆ ಕೆಡಲು ಅನುವು ಮಾಡಿಕೊಡುತ್ತದೆ.

 ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜನರು ತೊಂದರೆ       ಅನುಭವಿಸುವಂತಾಗಿದೆ.  ಜಾತಿ ಆಧಾರಿತ ಮೀಸಲಾತಿಯಿಂದ ಸಮಾಜದಲ್ಲಿ ಕೇವಲ‌‌  ಕೆಲ‌ ಜಾತಿಯವರಿಗೆ ಮಾತ್ರ ಪ್ರಾಮುಖ್ಯತೆ ದೊರಕುವಂತಾಗುತ್ತಿರುವದರಿಂದ ಸಾಂವಿಧಾನಿಕವಾಗಿ ಬಂದ ಸಮಾನತೆ ಅರ್ಥಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದರೆ ತಪ್ಪಾಗಲಾರದೇನೋ.

ಶಿಕ್ಷಣ ದಿಂದ ಉದ್ಯೋಗ ಪಡೆವ ವರೆಗೂ ಮೀಸಲಾತಿ  ಪಡೆದು, ಉದ್ಯೋಗದಲ್ಲಿ ಬಡ್ತಿ ಪಡೆವಾಗಲೂ ಆ ನೀತಿ ಮುಂದುವರೆಸುವದ ರಿಂದ ಆರ್ಥಿಕವಾಗಿ ಹಿಂದುಳಿದ, ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಕಡಿಮೆಯಾಗಿ ಅನೈತಿಕ‌ ಚಟುವಟಿಕೆಗಳಲ್ಲಿ,ಅವ್ಯವಹಾರಗಳಲ್ಲಿ ಆಸಕ್ತಿ ಮೂಡಲು ಕಾರಣವಾಗಬಹುದಾಗಿದೆ‌. 


                ಹಿಂದೊಂದು ಕಾಲದಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗಗಳ ಶೋಷಣೆ ನಡೆಯುತ್ತಿತ್ತು.ಆದರೆ ಈಗ ಕಾಲ ಬದಲಾಗಿದೆ. ಸಾಮಾಜಿಕ ವ್ಯವಸ್ಥೆಯಲ್ಲೂ ಗಮನಾರ್ಹ ಬದಲಾವಣೆ ಕಂಡುಬರುತ್ತಿದೆ. ಹಿಂದೆ ಯಾರೋ ಮಾಡಿದ ತಪ್ಪಿಗೆ ಮೇಲ್ವರ್ಗ‌ ಜನರನ್ನು ಶಿಕ್ಷಿಸುವದು ಸಮಂಜಸವಲ್ಲ. ಬದಲಿಗೆ ನಿಜವಾಗಿ ಯಾರಿಗೆ ಅವಶ್ಯಕತೆ ಇದೆಯೋ ಅವರಿಗೇ ಸಿಗುವಂತಾಗ ಬೇಕು‌.

ಅಂದರೆ, ಧರ್ಮ- ಜಾತಿ ಆಧಾರಿತ ಮೀಸಲಾತಿ ಕೈ ಬಿಟ್ಟು ಆರ್ಥಿಕವಾಗಿ ದುರ್ಬಲರಾದವರನ್ನು ಸಬಲರನ್ನಾಗಿಸುವ ಮೀಸಲಾತಿ ನೀತಿ ಜಾರಿ ಬರಬೇಕಾಗಿದೆ‌ ಹಾಗಾದಾಗ ಮಾತ್ರ ಮೀಸಲಾತಿ ವ್ಯವಸ್ಥೆಗೆ ಒಂದು ಅರ್ಥ ದೊರೆಯುತ್ತದೆ.



       ಚಿನ್ಮಯ್ ಸ ಹೆಗಡೆ

        ಪತ್ರಿಕೋದ್ಯಮ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ