" ನಮ್ಮ ಕಾರವಾರ " - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಶುಕ್ರವಾರ, ನವೆಂಬರ್ 10, 2023

" ನಮ್ಮ ಕಾರವಾರ "



ದಕ್ಷಿಣ ಭಾರತದ ಕರಾವಳಿಯ ಕಾಳಿ ನದಿ ಮುಖಭಾಗದಲ್ಲಿ ಕಾರವಾರ ನೆಲೆಗೊಂಡಿದೆ. ಬಂದರು ನಗರವಾಗಿರುವ ಕಾರವಾರವು ಕೃಷಿ, ಉತ್ಪಾದನೆ ಹಾಗೂ ಪ್ರವಾಸೋದ್ಯಮ ದ ಪ್ರಮುಖ ಕೇಂದ್ರ ಬಿಂದುವಾಗಿದೆ. ಪೂರ್ವದಲ್ಲಿ ಸಹ್ಯಾದ್ರಿ ಮತ್ತು ನಿತ್ಯಹರಿದ್ವರ್ನ ಕಾಡುಗಳಿಂದ ಆವ್ರುತವಾಗಿದೆ ಹಾಗೂ ಪಶ್ಚಿಮದಲ್ಲಿ ಅರಬ್ಬೀ ಸಮುದ್ರ ಮತ್ತು ಉತ್ತರಕ್ಕೆ ಕಾಳಿ ನದಿ ಹೊಂದಿದೆ.


ಕಾರವಾರವನ್ನು ' ಕರ್ನಾಟಕದ ಕಾಶ್ಮೀರ ' ಎಂದು  ರವೀಂದ್ರ ನಾಥ್ ಟ್ಯಾಗೋರ್ ಅವರು ಕರೆದಿದ್ದಾರೆ. ಈ ಪ್ರದೇಶಕ್ಕೆ ಮೊದಲು ಕಾಡವಾಡ ಎಂಬ ಹೆಸರಿತ್ತು. ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಅವರಿಗೆ ' ಡ ' ಪದದ ಉಚ್ಚಾರಣೆ ಆಗದ ಕಾರಣ ಕಾರವಾರ ಎಂಬ ಹೆಸರು ಬಂದಿತು.


ಕನ್ನಡ ಮುಗಿದು ಕೊಂಕಣಿ ಪ್ರಾರಂಭವಾಗುವ ಜಾಗ ಇದು. 1882 ರಲ್ಲಿ ಕಾರವಾರ ಜಿಲ್ಲಾ ನ್ಯಾಯಧೀಶರ ಹುದ್ದೆಗೆ ಸತ್ಯಂದ್ರ ನಾಥ್ ಟ್ಯಾಗೋರ ಅವರನ್ನು ನೇಮಿಸಲಿತು, ಆಗ ಅವರ ತಮ್ಮ ರವೀಂದ್ರ ನಾಥ್ ಟ್ಯಾಗೋರ ಅವರು ತಮ್ಮ ಬಹುಸಮಯವನ್ನು ಕಾರವಾರ ಕಡಲ ತೀರದಲ್ಲಿ ಕಳೆಯುತ್ತಿದ್ದರು. ಅಷ್ಟೇ ಅಲ್ಲದೆ ಅವರ ಅನೇಕ ಕವನಸಂಕಲನ ಬರೆಯಲು ಈ ಜಾಗ ಸ್ಫೂರ್ತಿಯಾಯಿತು.


ಸ್ವಚ್ಛ ಮತ್ತು ನಿಶ್ಯಭ್ದವಾದ ಈ ತೀರ ವನ್ನು ರವೀಂದ್ರ ನಾಥ್ ಕಡಲ ತೀರ ಎಂದು ಕರೆಯುತ್ತಾರೆ. ಈ ಕಡಲ ತೀರವು ಶಾಂತಿ ಹಾಗು ಪ್ರಶಾಂತಿಯೊಂದಿಗೆ ಮನಸಿಗೆ ಮುದ ನೀಡುತ್ತದೆ.ಇದರ ಪಕ್ಕದಲ್ಲಿ ವಸ್ತುಸಂಗ್ರಹಾಲಯ ಮತ್ತು ಮೀನು ಸಂಗ್ರಹಾಲಯ ಕಾಣಸಿಗುತ್ತವೆ.


ಇದು ಕೇವಲ ಬಂದರು ಪ್ರದೇಶವಾಗಿರದೆ ಕೈಗಾರಿಕಾ ಪ್ರದೇಶವು ಹೌದು. ಇಲ್ಲಿ ಕೈಗಾ ಅಣು ವಿದ್ಯುತ್ ಸ್ಥಾವರ ಇದೆ. ಇಷ್ಟೆಲ್ಲ ವಿಶೇಷಗಳಿಂದ ತುಂಬಿದ ಕಾರವಾರವು ನಮ್ಮ ಹೆಮ್ಮೆ.


ಅರ್ಚನಾ.ನಾಯ್ಕ್ 

B.A  2nd

ಪತ್ರಿಕೋದ್ಯಮ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ