ಯುವಕರ ಸ್ಫೂರ್ತಿಯ ಚಿಲುಮೆ ಯಶಸ್ವಿ ಜೈಸ್ವಾಲ್ - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಶುಕ್ರವಾರ, ನವೆಂಬರ್ 17, 2023

ಯುವಕರ ಸ್ಫೂರ್ತಿಯ ಚಿಲುಮೆ ಯಶಸ್ವಿ ಜೈಸ್ವಾಲ್

 

ಜೀವನದಲ್ಲಿ ಕನಸುಗಳನ್ನು ಕಾಣದ ವ್ಯಕ್ತಿಯಿಲ್ಲ ಆದರೆ ಕಂಡ ಕನಸನ್ನು ಸಾಕಾರಗೊಳಿಸಿಕೊಳ್ಳುವವರ ಸಂಖ್ಯೆ ತೀರಾ ಕಡಿಮೆ ಅಂತಹ ಕನಸನ್ನು ನನಸಾಗಿಸಿಕೊಂಡ ಮಹಾನ್ ವ್ಯಕ್ತಿಗಳಲ್ಲಿ ಯಶಸ್ವಿ ಜೈಸ್ವಾಲ್ ಕೂಡ ಒಬ್ಬರು


ಉತ್ತರಪ್ರದೇಶದ ಬದೊಲಿ ಎಂಬಲ್ಲಿ 2001ರ ಡಿಸೆಂಬರ್ 28ರಂದು ಮದ್ಯಮ ಬಡಕುಟುಂಬವೊಂದರಲ್ಲಿ ಜನಿಸಿದ ಯಶಸ್ವಿಗೆ ಚಿಕ್ಕಂದಿನಿಂದಲೇ ಕ್ರಿಕೆಟ್ ಎಂದರೆ ಎಲ್ಲಿಲ್ಲದ ಆಸಕ್ತಿ ಆದರೆ ಬಡತನ ಯಶಸ್ವಿಯ ಕ್ರಿಕೆಟ್ ಆಡುವ ಕನಸಿಗೆ ಆರಂಭದಲ್ಲಿ ತಣ್ಣೀರೆರಚಿತು ಇವರ ತಂದೆ ಭೂಪೆಂದ್ರ ಜೈಸ್ವಾಲ್ ಒಂದು ಪುಟ್ಟ ಹಾರ್ಡ್ವೇರ್ ಅಂಗಡಿ ಹೊಂದಿದ್ದು ಇಲ್ಲಿಂದ ಬರುವ ಹಣ ಮನೆ ನಿರ್ವಹಣೆಗೆ ಸಾಕಾಗದ ಸಂದರ್ಭದಲ್ಲಿ ಯಶಸ್ವಿಗೆ ಕ್ರಿಕೆಟ್ ಸಲಕರಣೆಗಳನ್ನು ಹೇಗೆ ತಾನೇ ಕೊಡಿಸಿಯಾರು? ಹೇಳಿ. 


ತಾನು ಇಲ್ಲಿಯೇ ಇದ್ದರೆ ಕನಸು ನನಸಾಗದು ಎಂದು ತಿಳಿದ ಜೈಸ್ವಾಲ್ ನೇರವಾಗಿ ಬಂದಿಳಿದಿದ್ದು ದೂರದ ಮುಂಬೈ ನಗರಕ್ಕೆ. ಮುಂಬೈಗೆ ಬಂದ ಆರಂಭಿಕ ದಿನಗಳಲ್ಲಿ ಹಾಲು ಡೆರಿಯೊಂದರಲ್ಲಿ ಕೆಲಸ ಮಾಡುತ್ತಾ ಕ್ರಿಕೆಟ್ ಅಭ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾನೆ ಆದರೆ ಕ್ರಿಕೆಟನಲ್ಲಿಯೇ ಹೆಚ್ಚಿನ ಗಮನ ಕೊಡುತ್ತಿದ್ದ ಯಶಸ್ವಿ ಕೆಲಸ ಸರಿಯಾಗಿ ಮಾಡುತ್ತಿಲ್ಲವೆಂದು ಡೆರಿಯ ಮಾಲೀಕ ಕೆಲಸದಿಂದ ಉಚ್ಛಾಟಿಸುತ್ತಾನೆ ಮತ್ತು ಆ ರಾತ್ರಿಯೇ ಅವನ ವಸ್ತುಗಳ ಸಮೇತ ಅಲ್ಲಿಂದ ನಿರ್ಗಮಿಸಲು ಆದೇಶಿಸುತ್ತಾನೆ ದಿಕ್ಕುತೋಚದಾದ ಜೈಸ್ವಾಲ್ ಒಂದು ರಾತ್ರಿ ಅಜಾದ್ ಮೈದಾನದ ಪುಟ್ಪಾತನಲ್ಲಿಯೇ ಮಲಗುತ್ತಾರೆ ಹೇಗೆ ಒಮ್ಮೆ ಅಜಾದ್ ಮೈದಾನದಲ್ಲಿ ಯಶಸ್ವಿಯ ಆಟ ಕಂಡ ಪಪ್ಪು ಎಂಬ ವ್ಯಕ್ತಿ ಮೈದಾನದ ಬಳಿಯಿದ್ದ ಟೆಂಟ್ ಒಂದರಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸಿಕೊಡುತ್ತಾನೆ ಒಮ್ಮೆ ಯಶಸ್ವಿಯೇ ಹೇಳಿದ ಪ್ರಕಾರ ಆ ಟೆಂಟನಲ್ಲಿ ಯಾವುದೇ ದೀಪವಾಗಲಿ ಶೌಚಾಲಯವಾಗಲಿ ಇರಲಿಲ್ಲ ಮತ್ತು ಮಳೆ ಬಂದಾಗಲೆಲ್ಲ ನೀರು ಪೂರ್ತಿ ಟೆಂಟಿನ ಒಳಕ್ಕೆ ಬರುತ್ತಿತ್ತು ಹೇಗೋ ಉಳಿದುಕೊಳ್ಳುವುದಕ್ಕೇನೋ ಅವಕಾಶ ಗಿಟ್ಟಿಸಿಕೊಂಡ ಜೈಸ್ವಾಲ್ ಗೇಣು ಹೊಟ್ಟೆಗಾಗಿ ದುಡಿಯುವುದು ಅನಿವಾರ್ಯವಾಯಿತು ಮತ್ತು ಇದಕ್ಕಾಗಿ ಸಂಜೆ ಸಮಯದಲ್ಲಿ ಪಾನಿಪುರಿ ಮಾರಲಾರಂಭಿಸಿದ ಕೆಲವೊಮ್ಮೆ ತಾನು ಯಾರೆದುರು ಜಯಿಸಿ ಬಂದಿದ್ದನೋ ಅವರಿಗೇ ಪಾನಿಪುರಿ ಮಾಡಿಕೊಡಬೇಕಾದ ಪ್ರಸಂಗ ಎದುರಾಗುತ್ತಿತ್ತು ಆದರೂ ಸ್ವಾಮಿ ವಿವೇಕಾನಂದರ ಏಳಿ ಎದ್ದೇಳಿ ಗುರಿಮುಟ್ಟುವ ತನಕ ನಿಲ್ಲದಿರಿ ಎಂಬಂತೆ ತನ್ನ ಹಠವನ್ನು ಬಿಡಲೇ ಇಲ್ಲ ಒಮ್ಮೆ ಅಭ್ಯಾಸದಲ್ಲಿ ತೊಡಗಿದ್ದ ಯಶಸ್ವಿಯ ಆಟವನ್ನು ಕಂಡು ಮನಸೋತ ಜ್ವಾಲಾ ಸಿಂಗ್ ಎಂಬ ವ್ಯಕ್ತಿ ಅವನ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತಾರೆ ಅಷ್ಟೇ ಅಲ್ಲದೆ ಯಶಸ್ವಿಗೆ ಅಗತ್ಯವಿದ್ದ ವಸತಿ ಆಹಾರ ಮತ್ತು ಶಿಕ್ಷಣವನ್ನು ಒದಗಿಸುವ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ ಜ್ವಾಲಾ ಸಿಂಗರ ಇದೊಂದು ಭೇಟಿ ಯಶಸ್ವಿಯ ಜೀವನವನ್ನೇ ಬದಲಾಯಿಸಿತು ಎನ್ನಬಹುದು


ಪ್ರಯತ್ನಕ್ಕೆ ತಕ್ಕ ಪ್ರತಿಫಲವೆಂಬಂತೆ 2019ರಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ತಂಡದ ಪರ ಆಡುವ ಅವಕಾಶ ಸಿಕ್ಕಿತು ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಂಡ ಜೈಸ್ವಾಲ್ ಅತ್ಯಂತ ಕಿರಿಯ ವಯಸ್ಸಿನಲ್ಲಿ ಲಿಸ್ಟ್ ಎ ಕ್ರಿಕೆಟಿನಲ್ಲಿ ದ್ವಿಶತಕ ಸಿಡಿಸಿದ ಮೊದಲ ಆಟಗಾರ ಎನಿಸಿಕೊಂಡರು 2020ರಲ್ಲಿ ಭಾರತೀಯ ಅಂಡರ್ 19 ತಂಡಕ್ಕೆ ಆಯ್ಕೆಯಾದ ಜೈಸ್ವಾಲ್ ಎದುರಾಳಿಗಳು ನಿಬ್ಬೆರಗಾಗುವಂತಹ ಪ್ರದರ್ಶನ ತೋರಿದರು ತನ್ನ ತಂಡ ಚಾಂಪಿಯನ್ಸ್ ಆಗುವಲ್ಲಿ ವಿಫಲವಾದರೂ ಅತೀ ಹೆಚ್ಚು ರನ್ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು ಇಲ್ಲಿಂದ ಹಿಂತಿರುಗಿ ನೋಡದ ಜೈಸ್ವಾಲ್ 2023ರ ಐಪಿಎಲ್ ನಲ್ಲಿ ಅತೀ ವೇಗದ ಅರ್ಧ ಶತಕ ಸಿಡಿಸುವುದರ ಜೊತೆಗೆ ಅತೀ ಹೆಚ್ಚಿನ ರನ್ ಗಳಿಸಿದವರಲ್ಲಿ ಒಬ್ಬರಾದರು


ಪಾನಿಪುರಿ ಮಾರುವವನಿಂದ ಭಾರತ ತಂಡದ ಕ್ರಿಕೆಟರ್ ಆಗಿ ಬದಲಾದ ಈತ ಯುವಕರ ನೆಚ್ಚಿನ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ ಅಂದು ಯಶಸ್ವಿ ತನ್ನಿಂದ ಟೆಂಟಿನಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ನಿರ್ಧರಿಸಿದ್ದಿದ್ದರೆ ಭಾರತ ತಂಡಕ್ಕಾಗಿ ಆಡುವ ಕನಸು ಕನಸಾಗಿಯೇ ಉಳಿಯುತ್ತಿತ್ತು ಸಾಧಿಸಬಲ್ಲೇ ಎಂಬ ಸದೃಢ ಮನಸ್ಸಿನಿಂದ ಪ್ರಯತ್ನ ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಯಶಸ್ವಿಯ ಜೀವನವೇ ಮಾದರಿ

ಶಶಿಧರ ಮರಾಠಿ 

ಪತ್ರಿಕೋದ್ಯಮ ವಿಭಾಗ 

ಎಂ ಎಂ ಮಹಾವಿದ್ಯಾಲಯ ಶಿರಸಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ