- ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಗುರುವಾರ, ಡಿಸೆಂಬರ್ 7, 2023

ಸಗಣಿ ನಮ್ಮಲ್ಲಿ ಎಂದಿಗೂ ಸಹ ಹಸುವಿಗೆ ಪೂಜನೀಯ ಸ್ಥಾನವನ್ನು ನೀಡಲಾಗಿದೆ. ಹೊಸದಾಗಿ ಮನೆ ಕಟ್ಟಿಸುವವರು ಗ್ರಹಪ್ರವೇಶದ ದಿನ ಗೋವನ್ನು ಮನೆಗೆ ಕರೆಸಿ ಅದಕ್ಕೆ ಪೂಜೆ ಮಾಡಿ ಆಥಿತ್ಯ ನೀಡುತ್ತಾರೆ. ಹಬ್ಬ ಹರಿದಿನಗಳು ಬಂದರೆ ಮನೆ ಮುಂದೆ ಸಗಣಿಯಿಂದ ಸಾರಿಸಿ ರಂಗೋಲಿಯನ್ನೀಡುವ ಸಂಪ್ರದಾಯ ಈಗಲೂ ಹಳ್ಳಿಗರ ಮನೆಯಲ್ಲಿ ಕಾಣಸಿಗುತ್ತದೆ. ಹಸುವಿನ ಸಗಣಿ ಅಂತ ಮೂಗು ಮುರಿಯಬೇಡಿ ಹೌದು ಈಗಿನ ಸಧ್ಯದ ಪರಿಸ್ಥಿತಿಯಲ್ಲಿ ಪೇಟೆಯ ಜನರು ಹಸುವಿನ ಸಗಣಿಯನ್ನು ಕಂಡು ಮೂಗು ಮುರಿಯುತ್ತಾರೆ. ಮತ್ತು ಅದನ್ನು ಕಂಡರೆ ಹೊಲಸು ಎಂಬ ಮನೋಭಾವ ಅವರಲ್ಲಿ. ಇಂತವರು ಹಸುವಿನ ಸಗಣಿ ನಿಷ್ಟ್ರಯೋಜಕವೆಂದು ತಿಳಿದರೆ ಇದು ನೀವು ಮಾಡುತ್ತಿರುವ ದೊಡ್ಡ ತಪ್ಪು.ದಯವಿಟ್ಟು ಇಂತಹ ಪೂಜನೀಯ ಸ್ಥಾನವನ್ನು ನೀಡಿದ ಸಗಣಿಯನ್ನು ಹೀಗೆ ಕೀಳಾಗಿ ನೋಡಬೇಡಿ. ಇದು ಒಂದಲ್ಲ ಒಂದು ರೀತಿಯಲ್ಲಿ ಉಪಯೋಗವಾಗುತ್ತದೆ. ಸುಮ್ಮನೆ ಹಾಗೇ ನಡೆದುಕೊಂಡು ಹೋಗುವಾಗ ರೋಡಿನಲ್ಲಿ ಬಿದ್ದಿರುವ ಸಗಣಿಯನ್ನು ನೋಡಿ ಇದು ವೆಸ್ಟ್ ಎಂದುಕೊಳ್ಳುತ್ತೇವೆ. ಆದರೆ ನಮ್ಮ ಊಹೆಗೂ ನಿಲುಕದ ಪ್ರಯೋಜನಗಳು ಸಗಣಿಯಿಂದ ಸಿಗುತ್ತದೆ. ಹಸುವಿನ ಗಂಜಳ ಎಲ್ಲದಕ್ಕಿಂತ ಶ್ರೇಷ್ಠ ಎನ್ನುವ ಭಾವನೆ ಈಗಲೂ ಇದೆ. ಅದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ ಸುಟ್ಟರೆ ನೋಸಲಿಗೆ ವಿಭೂತಿಯಾದ ತಟ್ಟದೇ ಹಾಕಿದರೆ ಮೇಲುಗೊಬ್ಬರವಾದ ಎನ್ನುವ ಹಾಡು ಸಗಣಿಯನ್ನು ಕಂಡಾಗ ನೆನಪಾಗುತ್ತದೆ. ಹೀಗೆ ಹಸುವಿನ ಸಗಣಿ ಒಂದಲ್ಲ ಒಂದು ರೀತಿಯಾಗಿ ಉಪಯೋಗಕ್ಕೆ ಬರುತ್ತದೆ. ಸಗಣಿಯಲ್ಲಿ ಚರ್ಮದ ಅನೇಕ ಸಮಸ್ಯೆಗಳನ್ನು ಬಗೆಹರಿಸುವ ಗುಣಗಳಿವೆ. ಇದರ ಜೊತೆಗೆ ಸಂಪ್ರದಾಯಕವಾಗಿ ಜೀರ್ಣ0ಗ ವ್ಯವಸ್ಥೆಯ ತೊಂದರೆ ಮತ್ತು ಉಸಿರಾಟದ ತೊಂದರೆಗಳನ್ನು ಸಹ ಸರಿಪಡಿಸುವ ಲಕ್ಷಣಗಳು ಸಗಣಿಯಲ್ಲಿ ಹೆಚ್ಚಾಗಿವೆ. ಹಾಗಾಗಿ ಬಹಳ ಹಿಂದಿನ ಕಾಲದಿಂದ ಆಯುರ್ವೇದ ಪದ್ಧತಿಯಲ್ಲಿ ಸಗಣಿಯ ಬಳಕೆ ಇದೆ. ಹಿಂದಿನ ಕಾಲದಿಂದಲೂ ಹಳ್ಳಿಗಳ ಕೆಲವರ ಮನೆಗಳಲ್ಲಿ ನಾವು ಬಯೋಗ್ಯಾಸಗಳನ್ನು ಕಾಣಬಹುದು. ಬಯೋಗ್ಯಾಸ್ ತಯಾರಾಗುವುದು ಸಗಣಿಯಿಂದಲೇ ಮತ್ತು ಸಗಣಿಯಿಂದ ಬಯೋಗ್ಯಾಸ್ ಉತ್ಪತ್ತಿ ಮಾತ್ರವಲ್ಲದೆ ವಿದ್ಯುತ್ ಶಕ್ತಿ ತಯಾರು ಮಾಡಲು ಬಳಸುತ್ತಾರೆ. ಹಾಗಾಗಿ ಸಗಣಿಯೆಂದರೆ ಮೂಗು ಮುರಿಯಬೇಡಿ ಅದರಿಂದ ತುಂಬಾ ಪ್ರಯೋಜನಗಳಿವೆ. ಗಾಯತ್ರಿ ಎಂ. M.M arts and science college sirsi.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ