- ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಶುಕ್ರವಾರ, ಏಪ್ರಿಲ್ 12, 2024

ಯುಗಾದಿ... ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕ್ಕೆ ಹೊಸ ಹರುಷಕ್ಕೆ ಹೊಸತು ಹೊಸತು ತರುತಿದೆ... ಯುಗಾದಿ ಎಂದರೇ ಹೊಸ ವರ್ಷ. ಹಿಂದುಗಳು ಆಚರಿಸುವ ಹಬ್ಬಗಳಲ್ಲಿ ಇದು ಕೂಡ ಒಂದು. ಭಾರತೀಯರ ಸಂಪ್ರದಾಯದಲ್ಲಿ ಮೊದಲು ಬರುವ ಹಬ್ಬವೆಂದರೆ ಅದುವೇ ಯುಗಾದಿ. ಋತುಗಳ ರಾಜ ವಸಂತ ಕಾಲಿಡುವ ಶುಭ ಗಳಿಗೆ ಇದಾಗಿದೆ. ಶಿಶಿರ ಋತುವಿನಲ್ಲಿ ಎಲ್ಲಾ ಗಿಡ, ಮರಗಳಲ್ಲಿ ಎಲೆಗಳು ಉದುರಿ ಬರಡಾಗಿರುತ್ತದೆ. ಮತ್ತೆ ಗಿಡ ಮರಗಳಿಗೆ ಜೀವ ಬರುವುದು ಈ ವಸಂತ ಮಾಸದಲ್ಲಿಯೇ. ಈ ಹಬ್ಬದಂದು ಹೊಸ ಪಂಚಾಂಗವನ್ನು ಓದಿ ಈ ವರ್ಷ ಹೇಗಿರುತ್ತದೆ, ಮುಂದೆ ಆಗು ಹೋಗುಗಳ ಕುರಿತು ಆಚಾರ ವಿಚಾರ ಸಂಪ್ರದಾಯಗಳ ಕುರಿತು ಲೆಕ್ಕಚಾರವನ್ನು ತಿಳಿಯುವುದು ಹಿರಿಯರಿಂದ ಬಂದಂತಹ ಒಂದು ಪದ್ಧತಿ. ಈ ದಿನಗಳಲ್ಲಿ ಗಿಡ ಮರಗಳಲ್ಲಿ ಎಲೆಗಳು ಚಿಗುರೊಡೆದು, ಸುಂದರವಾದ ಹೂವುಗಳು ಅರಳಿ ತನ್ನ ನೈಜ ಸೊಬಗನ್ನು ಎಲ್ಲೆಡೆ ಪ್ರಸರಿಸುತ್ತದೆ. ನಿಸರ್ಗ ಮಾತೆಯು ಹಸುರಿನ ಹೊದಿಕೆ ಯಿಂದ ಕಂಗೊಳಿಸುತ್ತಿರುತ್ತವೆ. ಈ ದಿನಗಳಲ್ಲಿ ಪರಿಸರವನ್ನು ಕಣ್ತುಂಬಿಕೊಳ್ಳುವುದು ಒಂದು ರೀತಿಯ ಸ್ವರ್ಗವೇ ಸರಿ. ಆಚರಿಸುವ ರೀತಿ - ಯುಗಾದಿಯಂದು ಮನೆಮಂದಿಯೆಲ್ಲಾ ಹೊಸ ಬಟ್ಟೆಯನ್ನು ಧರಿಸಿ, ಮನೆ ಮುಂದೆ ರಂಗೋಲಿಯನ್ನು ಹಾಕಿ ಮನೆಯನ್ನು ಮಾವಿನ ತೋರಣಗಳಿಂದ ಅಲಂಕರಿಸಲಾಗುತ್ತದೆ. ನಂತರ ಮನೆಯವರೆಲ್ಲಾ ಸೇರಿ ಬೇವು ಬೆಲ್ಲವನ್ನು ತಿಂದು ಹಬ್ಬದ ವಿಶೇಷ ಖಾದ್ಯ ಗಳಾದ ಹೋಳಿಗೆ, ಮಾವಿನಕಾಯಿ ಚಿತ್ರಾನ್ನದ ಊಟವನ್ನು ಸವಿಯುತ್ತಾರೆ. ಹೀಗೆ ಈ ಹಬ್ಬವು ತನ್ನದೇ ಆದ ವೈಶಿಷ್ಟ್ಯತೆ ಯಿಂದ ಕೂಡಿದೆ. ಈ ವರ್ಷವೂ ಎಲ್ಲರ ಬಾಳಲ್ಲಿ ಬೇವು ಬೆಲ್ಲದಂತೆ ಸುಖ ದುಃಖ ಗಳು ಸಮನಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ... ಸಮರ್ಥ ಹೆಗಡೆ ಬಿ. ಎ ದ್ವಿತೀಯ ವರ್ಷ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ