ಗೋವಿನ ಬಾಳು - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಬುಧವಾರ, ಏಪ್ರಿಲ್ 17, 2024

ಗೋವಿನ ಬಾಳು

ಮೊನ್ನೆ ಹಾಗೆ ಹಳೆಯ ಪುಸ್ತಕಗಳನ್ನು ಸರಿಯಾಗಿ ಇಡುವಾಗ ನಮ್ಮಕ್ಕ ಓದಲು ಎಂದು ತಂದಿಟ್ಟ ಎಸ್. ಜಿ. ನರಸಿಂಹಾಚಾರ್ಯರ ಕವನ ಗೋವಿನ ಬಾಳು ಕಣ್ಣಿಗೆ ಬಿತ್ತು. ನಿಜ ಹೇಳ ಬೇಕೆಂದರೆ ಓದಿನಲ್ಲಿ ಅಷ್ಟೇನು ಆಸಕ್ತಿ ಹೊಂದಿರುವ ಜೀವಿ ನಾನಲ್ಲ. ಆದರೂ ಏನಾಯಿತೋ ಗೊತ್ತಿಲ್ಲ ಓದಿ ಬಿಡೋಣ ಎಂದು ಪುಸ್ತಕ ತೆಗೆದು ಓದಲು ಪ್ರಾರಂಭಿಸಿದೆ.ಆಹಾ! ಎಂತಾ ಅದ್ಭುತ ಪದ್ಯವದು ಒಮ್ಮೆಲೇ ಭಾರತದ ಸನಾತನ ಧರ್ಮ ಕಣ್ಣೆದುರು ಬಂದಂತಾಯಿತು. ಗೋವು ಮನುಕುಲದ ಆರಂಭದಿಂದಲೂ, ಮನುಷ್ಯರ ಪ್ರೀತಿಪಾತ್ರವಾದ ಪ್ರಾಣಿಯಾಗಿತ್ತು. ಭಾರತೀಯರ ನಾಗರಿಕ ಪರಂಪರೆಯಲ್ಲಿ ಗೋವಿನ ಬಳಕೆಯ ಮಹತ್ವ ಗೋಚರವಾಗುತ್ತದೆ. ದಿನನಿತ್ಯ ಚಟುವಟಿಕೆಗಳಲ್ಲಿ ಸಮಾಭಾಗಿಯಾಗಿದ್ದ ಗೋವನ್ನು ತಾಯಿಯಾಗಿ, ದೇವರಾಗಿ ಪೂಜಿಸುವ ಸಂಸ್ಕೃತಿ ಬೆಳೆಯುತ್ತಾ ಬಂತು. ಕಾಮದೇನುವಿಗೆ ಜನ್ಮ ಕೊಟ್ಟ ತಾಯಿಯ ಸ್ಥಾನವನ್ನು ನೀಡಿದ, ಹಿರಿಮೆ ಪರಂಪರೆ ನಮ್ಮದು. ಗೋವು ತಾನು ಹುಟ್ಟಿದ ಸಂದರ್ಭದಿಂದ ಹಿಡಿದು ಸಾಯುವ ವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ಮನುಷ್ಯನಿಗೆ ನೇರವಾಗುತ್ತಲೇ ಇರುತ್ತದೆ. "ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ, ಸುಟ್ಟರೇ ನೊಸಲಿಗೆ ವಿಭೂತಿಯಾದೆ, ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ" ಎಂದು ಗೋವಿನ ಸಗಣಿಯ ಮಹತ್ವವನ್ನು ಎಸ್. ಜಿ. ನರಸಿಂಹಚಾರ್ಯರು ತಮ್ಮ ಕವನದಲ್ಲಿ ತಿಳಿಸಿದ್ದಾರೆ. ಬರಿ ಅಷ್ಟಕ್ಕೇ ಮಾತ್ರವಲ್ಲದೆ ದನದ ಸಗಣಿ ಕ್ರಷಿ ಭೂಮಿಗೆ ಅತ್ಯುತ್ತಮ ಗೊಬ್ಬರ. ಕೈಗಾರಿಕೆಗಿಂತ ಮೊದಲು, ಕೃಷಿಕರು ಮೂಲಭೂತವಾದ ಗೊಬ್ಬರವನ್ನಾಗಿ ದನದ ಸಗಣಿಯನ್ನು ಭಾರತದ ಕೃಷಿಕರು ಬಳಸುತ್ತಿದ್ದರು. ಕೇವಲ ಸಗಣಿಯನ್ನು ಮಾತ್ರವಲ್ಲದೆ ಗೋಮೂತ್ರವನ್ನು ಸಹ ಕೃಷಿ ಭೂಮಿಗೆ ಕೀಟನಾಶಕವಾಗಿ ಉಪಯುಕ್ತವಾಗುತ್ತದೆ. ಭಾರತೀಯ ಕೃಷಿ ಪರಂಪರೆಯ ವಿಶೇಷತೆ ಗೋಚರವಾಗುವುದೇ ಸಾವಯವ ಗೊಬ್ಬರ ಬಳಕೆಯಿಂದ. ಇಂತಹ ಅಗಾದ ಪರಂಪರೆಯ ಮಹತ್ವದ ಮೈಲುಗಲ್ಲುಗಳಾಗಿ ಗೊಸಂತತಿ ಕೃಷಿಕರ ಒಡನಾಡಿಯಾಗಿದೆ. ಉಳುವ, ಗಾಡಿ ಎಳೆಯಲು, ನೀರಾವರಿಗೆ, ಗೊಬ್ಬರವಾಗಿ ಕೀಟನಾಶಕವಾಗಿ ಗೋವುಗಳು ಕೃಷಿಯಲ್ಲಿ ರೈತರ ಸಕ್ರಿಯ ಪಾಲುದಾರರು ಅಂದರೆ ತಪ್ಪಾಗದು. ಗೋವುಗಳು ಕೇವಲ ಕೃಷಿಯಲ್ಲಿ ಮಾತ್ರ ನೇರವಾಗಿಲ್ಲ. ತಾಯಿ ಹೇಗೆ ತನ್ನ ಮಗುವಿಗೆ ಎದೆ ಹಾಲನ್ನು ಉಣಿಸಿ ಪೋಷಿಸುತ್ತಾಳೆಯೋ ಅದೇ ರೀತಿ ತಾನಿರುವ ಮನೆಯ ಪ್ರತಿಯೊಬ್ಬರೂ ತನ್ನ ಮಕ್ಕಳು ಎಂದು ಪೋಷಿಸುತ್ತಿದ್ದಾಳೆ. ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಗೋವು ಮನುಷ್ಯನಿಗೆ ನೇರವಾದರೂ ಅದು ತನ್ನ ಜೀವನ ಪೂರ್ತಿ ನಮಗೆ ನೆರಯಾಗಿದೆ ಎಂಬುದನ್ನು ಮರೆತು ಅದರ ಜೀವನದ ಕೊನೆಗಾಲದಲ್ಲಿ ಅದನ್ನು ಸರಿಯಾಗಿ ನೋಡಿ ಕೊಳ್ಳುವ ಬದಲು ಅದನ್ನು ಮೂರು ಕಾಸಿಗೆ ಮಾರಿ ತಿನ್ನುತ್ತಿದ್ದಾನೆ. ಕಾಲ ಕಳೆದಂತೆ ಪಶ್ಚಿಮಾತ್ಯ ಪರಂಪರೆಯನ್ನು ಅನುಸರಿಸುತ್ತ ನಮ್ಮ ನಿಜ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಎಂ. ಎಂ. ಮಹಾವಿದ್ಯಾಲಯ ಶಿರಸಿ ವಾಣಿ ದಾಸ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ