'ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಕಾರ್ಯಕ್ರಮ - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಬುಧವಾರ, ಏಪ್ರಿಲ್ 17, 2024

'ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಕಾರ್ಯಕ್ರಮ

'




ಶಿರಸಿ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದೊಂದು ಮತ ವಿಶೇಷ ಮೌಲ್ಯವಿದೆ. ಮಹತ್ವವಿದೆ.ಭಾರತದ ಇತಿಹಾಸದಲ್ಲಿ ಕೇವಲ ಒಂದು ಮತದ ಕೊರತೆಯಿಂದ ಜನಪರ ಸರ್ಕಾರ ಕುಸಿತ ಬಿದ್ದಿರುವ ಅದೆಷ್ಟೋ ಉದಾಹರಣೆ ಇದೆ ಎಂದು ಎಬಿವಿಪಿ ಕರ್ನಾಟಕ ಉತ್ತರದ ರಾಜ್ಯ ಕಾರ್ಯದರ್ಶಿಗಳಾದ ಸಚಿನ್ ಕುಳಗೇರಿ ನುಡಿದರು.


                  ಅವರು ಶಿರಸಿಯ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಸ್ಥೆ ಅಡಿಯಲ್ಲಿ ನಡೆದ ನೆಷನ್ ಫಸ್ಟ್ ವೋಟಿಂಗ್ ಮಸ್ಟ್ ಎಂಬ ಕಾರ್ಯಕ್ರಮದಲ್ಲಿ ವಕ್ತಾಯರಾಗಿ  ಮಾತನಾಡುತ್ತಿದ್ದರು.


            ರಾಷ್ಟ್ರದ ಪುನರ್ ನಿರ್ಮಾಣದ ಪವಿತ್ರ ಕರ್ತವ್ಯದಲ್ಲಿ ಯುವ ಜನಾಂಗದ ಪಾತ್ರ ಮಹತ್ತರವಾಗಿದೆ. ಸ್ವಾಮಿ ವಿವೇಕಾನಂದರು ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ  ಎಂದು ಕರೆಯನ್ನು ನೀಡಿದ್ದು ದೇಶದ ಯುವ ಜನಾಂಗಗಳನ್ನು ಕುರಿತಾಗಿಯೇ ಇಂದು ಭಾರತವು ವಿಶ್ವದ ಅತಿಹೆಚ್ಚಿನ ಯುವ ಜನಾಂಗವನ್ನು ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮಿದೆ.


             2024ರ ಲೋಕಸಭಾ ಚುನಾವಣೆಯಲ್ಲಿ ಸುಮಾರು 986.8 ಮಿಲಿಯನ್ ಭಾರತೀಯ ಮತದಾರರು ಮತ ಚಲಾಯಿಸಬಹುದು ಎಂದು ಭಾರತೀಯ ಚುನಾವಣಾ ಆಯೋಗ ಪ್ರಕಟಿಸಿದೆ.  ಇದರಲ್ಲಿ   18-29 ವರ್ಷದೊಳಗಿನ ಎರಡು ಕೋಟಿಗೂ ಹೆಚ್ಚು ಮತದಾರರು ಇರುವುದು ವಿಶೇಷ ಅದಕ್ಕಾಗಿ ಪ್ರತಿಯೊಬ್ಬ ವಯಸ್ಕ ಮತದಾರರು ಅಸಡ್ಡೆಯನ್ನು ತೋರದೆ ಮತ ಚಲಾಯಿಸುವ ಮೂಲಕ ಸಶಕ್ತ ಭಾರತವನ್ನು ನಿರ್ಮಿಸುವ ಕರ್ತವ್ಯ ನಮ್ಮದಾಗಿದೆ ಎಂದರು.


           ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ. ಎನ್. ಭಟ್ ಮಾತನಾಡಿ ಭಾರತದಲ್ಲಿ ಸದ್ಯ 4650ಕೋಟಿಗೂ ಹೆಚ್ಚು ಕಪ್ಪು ಹಣವನ್ನು ಹಿಡಿಯಲಾಗಿದೆ. ಈ ಎಲ್ಲಾ ಅಕ್ರಮಗಳು ನಿಲ್ಲಬೇಕೆಂದರೆ ಪ್ರತಿಯೊಬ್ಬ ಮತದಾರರು ಎಚ್ಚೆತ್ತುಕೊಂಡು ತಮ್ಮ ಅಮೂಲ್ಯ ಮತವನ್ನು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಮಾತಚಲಾಯಿಸಿ ಪ್ರಜಾಪ್ರಭುತ್ವಕ್ಕೆ ಒಂದು ಅರ್ಥ ಬರುವಂತೆ ಮಾಡಬೇಕು ಎಂದರು.


           ಎಬಿವಿಪಿಯ ರಾಷ್ಟೀಯ ಕಾರ್ಯಕಾರಣಿ ಸದಸ್ಯ ಕುಮಾರ ದರ್ಶನ್ ಹೆಗಡೆ ಸ್ವಾಗತಿಸಿದರು. ಎಬಿವಿಪಿಯ ಶಿರಸಿ ಜಿಲ್ಲಾ ಸಂಚಾಲಕರಾದ ಕುಮಾರ ಗೌಡ ವಂದಿಸಿದರು. ಕುಮಾರಿ ಜಿ. ಸ್ನೇಹಾ ನಿರೂಪಿಸಿದಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ