ಬಂದ ಬಂದ ಮೇಘರಾಜ - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಮಂಗಳವಾರ, ಏಪ್ರಿಲ್ 30, 2024

ಬಂದ ಬಂದ ಮೇಘರಾಜ

 


ಮಳೆರಾಯನ ಬರುವಿಕೆಗೆ ತಡವಾಗುತ್ತಿದ್ದಂತೆ ಕಪ್ಪೆಗಳು ಗೊಟರ್ ಗೊಟರ್ ಗುಟುರುಕ್ ಗುಟುರುಕ್ ಎನ್ನುತ್ತಾ ಮಳೆರಾಯನನ್ನು ಕರೆಯುವ ರೀತಿ. ಮತ್ತು ಅವುಗಳು ಎಲ್ಲೆಲ್ಲೋ ಅವಿತುಕೊಂಡು ಮೇಘಗಳು ಡಿಕ್ಕಿ ಹೊಡೆದು, ಗದ್ದಲವೆನಿಸಿ ಕಣ್ಣೀರು ಸುರಿಸುವ ಹೊತ್ತು ಕಪ್ಪೆಗಳಿಗೆ ಮಾತ್ರ ಗೊತ್ತು. ಆವಿರ್ಭವಿಸುವ  ಮೊದಲೇ ಅವುಗಳು ನಿದ್ರಾವಸ್ಥೆಯಿಂದ  ಹೊರಬಂದು ಊರಿಗೆಲ್ಲ ಸಾರುತ್ತವೆ. ಗಿಡಮರಗಳೇ, ಪಶು ಪಕ್ಷಿಗಳೇ, ಪ್ರಾಣಿಗಳೇ, ಮಳೆರಾಯನು ಬರಲಿದ್ದಾನೆ ಬರಲಿದ್ದಾನೆ  ಎಂದು. ಹೀಗೆ ದೊಡ್ಡ ದೊಡ್ಡ ಮಳೆ  ಬಂದರೆ ರೈತರು ಸಂತೋಷದಿಂದ ಕುಣಿಕುಣಿದಾಡುತ್ತಾರೆ. ಇದೇ ರೀತಿಯಾದಂತಹ ಮೊದಲ ಮಳೆಗೆ ಮೀನುಗಳೆಲ್ಲಾ ಮೊಟ್ಟೆ ಇಡಲು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹಾರಾಡುತ್ತಿರುತ್ತವೆ. ಇದೇ ಸಂತಸದಿಂದ ರೈತರು ಮಳೆಗೆ ಗದ್ದೆಗಳಿಗೆಲ್ಲ ನೀರಾದ ತಕ್ಷಣ ನೋಗ  ಮತ್ತು ನೇಗಿಲುಗಳನ್ನು ತೆಗೆದುಕೊಂಡು ಗದ್ದೆ ಹೂಡಲು ಹೋಗುತ್ತಾರೆ. ಹೀಗೆ ಕರಾವಳಿ ರೈತರು ಜಾಗರೂಕರಾಗಿ ತಮ್ಮ ಮಳೆಗಾಲದ ಕೆಲಸಕ್ಕೆ  ಮುಂದಾಗುತ್ತಾರೆ. ಹೌದು ಮಳೆಯ ಭಯಂಕರತೆಯನ್ನು ಭೇದಿಸಲು ಅರ್ಜುನನನ್ನು ನೆನಪಿಸಿಕೊಳ್ಳಬೇಕು. ಬಿರುಗಾಳಿಗೆ ಬಾಳೆ ಮರದ ಎಲೆಗಳು ಮೊದಲು ಸರಪರ - ದರಪರ ಸದ್ದು ಮಾಡಿ ನಿಪ್ಪಳವಾಗಿ ಪ್ರತಿಭಟಿಸುತ್ತವೆ. ತನ್ನೆಲ್ಲ ಎಲೆಗಳನ್ನು ಚೂರು ಮಾಡಿಕೊಳ್ಳುತ್ತವೆ. ಮಳೆರಾಯ ಆರ್ಭಟಕ್ಕೆಎಳೆಯ ಬೆಳೆದ ಕಾಯಿ ಇರುವ, ಈಗಷ್ಟೇ ಹೂ ಬಿಟ್ಟಿರುವ ಮರಗಳು ಮುರಿದು ಬೀಳುತ್ತವೆ ಹೀಗೆಲ್ಲಾ ಮೌನವಾಗಿಯೇ ಹೇಳುತ್ತವೆ ಬಾಳೆ ಮರಗಳು. ಮಳೆರಾಯನ ಆರ್ಭಟಕ್ಕೆ ಹಲವಾರು ಕಡೆ ಅನೇಕ ಆಸ್ತಿಪಾಸ್ತಿಗಳು ನಾಶವು ಆಗುತ್ತದೆ


 ಗಾಯತ್ರಿ ಎಂ.

 M. M.arts and science college sirsi.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ