- ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಗುರುವಾರ, ಮೇ 2, 2024

 "ಮಂಜುಗುಣಿ ಒಂದು ಪ್ರವಾಸೋದ್ಯಮ ತಾಣ"

    

              ಮಂಜುಗುಣಿ ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನಲ್ಲಿರುವ ಊರು. ಸುಮಾರು ಶಿರಸಿಯಿಂದ ೧೬ ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ವೆಂಕಟರಮಣ ಮತ್ತು ಪದ್ಮಾವತಿಯರ ದೇವಸ್ಥಾನ ಪ್ರಸಿದ್ಧವಾಗಿದೆ. ಇದನ್ನು ಕರ್ನಾಟಕದ ತಿರುಪತಿ ಎಂದು ಕರೆಯುತ್ತಾರೆ.ಸಹ್ಯಾದ್ರಿಯ  ತಪ್ಪಲಿನಲ್ಲಿರುವ ಈ ಊರಿನಲ್ಲಿ, ಚಳಿಗಾಲದ ಸಮಯದಲ್ಲಿ ದಟ್ಟವಾದ ಮಂಜು ಮುಸುಕಿರುವುದರಿಂದ ಈ ಪ್ರದೇಶವನ್ನು"ಮಂಜುಗುಣಿ"ಎಂದು ಕರೆಯಲಾಗುತ್ತದೆಂದು ಹೇಳಲಾಗುತ್ತದೆ.                           


ಸುಂದರ ಕಲ್ಲಿನ ಕೆತ್ತನೆಗಳೊಂದಿಗೆ ಅಪರೂಪದ ಸಾಲಿ ಗ್ರಾಮಗಳು  , ವಿಶಾಲ ರಥ ಬೀದಿ, ಸುಂದರ ಕೆತ್ತನೆಯ ಮರದ ಬೃಹತ್ ರಥ, ಗೋ ಶಾಲೆ, ಅಶ್ವ ಶಾಲೆ, ಮಾರುತಿ ದೇವಸ್ಥಾನ ಮತ್ತು ಶ್ರೀ ಚಕ್ರತೀರ್ಥಕೆರೆ ಇಲ್ಲಿನ ವಿಶೇಷ ಆಕರ್ಷಣೆಗಳಾಗಿವೆ. ಅಲ್ಲದೆ 

ಇತ್ತೀಚಿಗೆ ದೇವರ ಕಾಡು ಎಂಬ ಉದ್ಯಾನವನವು ನಿರ್ಮಾಣವಾಗುತ್ತಿದೆ. ಈ ದೇವಸ್ಥಾನದಲ್ಲಿ ಪ್ರತಿನಿತ್ಯವೂ ಅನ್ನ ಸಂತರ್ಪಣೆ ನಡೆಯುತ್ತದೆ.


ಇಲ್ಲಿ ಶ್ರೀವೆಂಕಟರಮಣ ದೇವಸ್ಥಾನ ಪ್ರಸಿದ್ಧ ದೇವಸ್ಥಾನವಾಗಿದ್ದು  ಇದು ಒಂದು ಪ್ರವಾಸೋದ್ಯಮ ತಾಣವಾಗಿರುವುದರಿಂದ ಹಲವಾರು ಜನರು ಬರುತ್ತಾರೆ. ಪ್ರಶಾಂತವಾದ ವಾತಾವರಣವನ್ನು ಹೊಂದಿದೆ. ಭಕ್ತಾದಿಗಳ ಮನಸ್ಸಿಗೆ ಮುದ ನೀಡುವ ಸ್ಥಳವಾಗಿದೆ. ಇಲ್ಲಿರುವ ಮುಖ್ಯ ವಿಗ್ರಹವು 1000 ವರ್ಷಗಿಂತಲೂ ಹಳೆಯದು ಎಂದು ಊಹಿಸಲಾಗಿದೆ. ಇಲ್ಲಿನ ವಿಗ್ರಹದ ವಿಶೇಷವೆಂದರೆ ಭಕ್ತರಿಗೆ ಭರವಸೆ ಮತ್ತು ರಕ್ಷಣೆಯ ಸಂಕೇತವಾಗಿ ಭಗವಂತನ ಬಾಣ ಮತ್ತು ಬಿಲ್ಲು ಹಿಡಿದಿದ್ದಾನೆ. ಅವನ ಪತ್ನಿ ಪದ್ಮಾವತಿ ದೇವಿಯು ಬಲ ಭಾಗದಲ್ಲಿ ಇರುತ್ತಾಳೆ. ನವರಂಗ ಸಭಾಂಗಣವು ಹಲವಾರು ಸ್ತಂಭಗಳನ್ನು ಹೊಂದಿದ್ದು, ಸುಂದರವಾಗಿ ಕೆತ್ತಿದ ದೇವತೆಗಳ ಮತ್ತು ಪ್ರತಿ ಸಂದರ್ಶಕರ ಗಮನವನ್ನು ಸೆಳೆಯುತ್ತದೆ. ದೇವಸ್ಥಾನದ ಸಂಕೀರ್ಣದಲ್ಲಿ ಶ್ರೀ ಚಕ್ರ ತೀರ್ಥ ಎಂಬ ಸಣ್ಣ ಸರೋವರ ಇದೆ.


ಇಲ್ಲಿನ ಇನ್ನೊಂದು ವಿಶೇಷತೆ ಎಂದರೆ ರಥೋತ್ಸವ. ಇಲ್ಲಿ ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ ಆಚರಿಸಲಾಗುವ ಹಬ್ಬವಾಗಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಅತಿ ದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ಕರ್ನಾಟಕದ ವಿವಿಧ ಭಾಗಗಳಿಂದ ಸಾವಿರಾರು ಜನರು ಈ ದೇವಸ್ಥಾನಕ್ಕೆ ಆಗಮಿಸುತ್ತಾರೆ.



ಚಂದನಾ ಜಿ

BA 4th sem

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ