ಮತದಾನ ನಮ್ಮೆಲ್ಲರ ಹಕ್ಕು - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಶನಿವಾರ, ಮೇ 4, 2024

ಮತದಾನ ನಮ್ಮೆಲ್ಲರ ಹಕ್ಕು

 

ಮತದಾನ ಮಾಡುವುದು ನಮ್ಮ ಜವಾಬ್ಧಾರಿ. ಇದು ನಮ್ಮ ಮೂಲಭೂತ ಕರ್ತವ್ಯಗಳಲ್ಲಿ ಒಂದಾಗಿದೆ. ಉತ್ತಮ ಭಾರತಕ್ಕಾಗಿ ಮತ ಚಲಾಯಿಸುವುದು ನಮ್ಮ ಕರ್ತವ್ಯ. ಚುನಾವಣೆ ದಿನ ಕೆಲವರು ಹೋಗಿ ಮತ ಚಲಾಯಿಸುತ್ತಾರೆ. ಆದರೆ ಇನ್ನು ಕೆಲವರು ಮತದಾನದ ದಿನ ವಿಶ್ರಾಂತಿ ಪಡೆಯುತ್ತಾರೆ. ಮತ್ತಷ್ಟು ಜನ ನಿರ್ದಿಷ್ಟ ಅಭ್ಯರ್ಥಿಗಳಿಗೆ ಮತ ಹಾಕಲು ಕಾಯುತ್ತಿರುತ್ತಾರೆ. 

                      ಕೆಲವರಿಗೆ ನಗರ ಜೀವನದ ನಡುವೆ ಮತದಾನದ ಮಹತ್ವ ಕಾಣೆಯಾಗಿದೆ. ಕೆಲವರು ಇದ್ದಲ್ಲಿಯೇ ಕೂತು ಸರ್ಕಾರ ಹಾಗೆ ಮಾಡಬೇಕು,ಹೀಗೆ ಮಾಡಬೇಕು ಎಂದು ಸಲಹೆ ನೀಡುತ್ತಾರೆ ಹೊರತು ಮತ ಹಾಕಲು ಹೋಗುವುದಿಲ್ಲ. ಈಗೀಗ ಮತದಾನ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಬೇರೆ ಬೇರೆ ಊರಲ್ಲಿ ಇರುವವರು ಮತದಾನ ಮಾಡಲು ಊರಿಗೆ ಬರದೆ ಅಲ್ಲಿಯೇ ಉಳಿದು ಬಿಡುತ್ತಾರೆ. ಮತದಾನ ಮಾಡುವವರ ಸಂಖ್ಯೆ ಕಡಿಮೆ ಆದಂತೆ ದೇಶದ ಮೇಲೆ ಪರಿಣಾಮ ಬೀರುತ್ತದೆ. 

                   ಮತದಾನ ಹಕ್ಕು ಎಲ್ಲರಿಗೂ ಸಮಾನವಾಗಿದೆ. 18 ವರ್ಷ ತಲುಪಿದ ಪ್ರತಿಯೊಬ್ಬ ವ್ಯಕ್ತಿಯ ಹಕ್ಕು. ಸಂವಿಧಾನ ನಮಗೆ ಬೇಕಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮತ್ತು ಬದಲಾವಣೆ ಮಾಡುವ ಹಕ್ಕನ್ನು ನಮಗೆ ನೀಡಿದೆ. ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ ಹಾಗೆ ಗೆದ್ದು ಬಂದ ಅಭ್ಯರ್ಥಿಗಳು ತಮ್ಮ ಕೆಲಸವನ್ನು ಹಾಗೆ ಸರಿಯಾದ ರೀತಿ ಮಾಡಬೇಕಿರುತ್ತದೆ. ಮತದಾನದ ಮೂಲಕ ಬದಲಾವಣೆ ರಚಿಸಬಹುದು. ಮತದಾನವು ನಮ್ಮ ದೇಶದ ಭವಿಷ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವ ಪ್ರಮುಖ ಕರ್ತವ್ಯವಾಗಿದೆ. 

                      ಮತದಾನದ ಬಗ್ಗೆ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಜಾಗೃತಿ ಮೂಡಿಸಬೇಕು. ಅದರಲ್ಲೂ ಶಾಲಾ ಮಕ್ಕಳಿಗೆ ಮತದಾನದ ಬಗ್ಗೆ ತಿಳಿಸಬೇಕು. ಮತದಾನದ ಪ್ರಾಮುಖ್ಯತೆ ಮಹತ್ವವನ್ನು ಸರಿಯಾದ ರೀತಿಯಲ್ಲಿ ಹೇಳಬೇಕು. ಈಗಿನ ಕಾಲದಲ್ಲಿ 80 ವರ್ಷದವರು ಮತ ನೀಡಲು ಹೋಗುತ್ತಾರೆ. ಆದರೆ ಕೆಲವೊಂದಷ್ಟು ಜನ ಮತ ಹಾಕಲು ಹೋಗುವುದಿಲ್ಲ. 

                      ಎಲ್ಲ ಕಡೆಗಳಲ್ಲಿಯೂ ಚುನಾವಣೆ ಪ್ರಚಾರಕ್ಕಾಗಿ ಅಭ್ಯರ್ಥಿಗಳು ಹಳ್ಳಿ , ನಗರಗಳಲ್ಲಿ ತಿರುಗಾಡಿ ತಮಗೆ ಮತ ಹಾಕುವಂತೆ ಹೇಳುತ್ತಾರೆ. ಅಭ್ಯರ್ಥಿಗಳ ಪರ ಬೇರೆ ನಾಯಕರು ಕೂಡ ಪ್ರಚಾರ ಮಾಡುತ್ತಾರೆ. ಚುನಾವಣೆಯನ್ನು ಎಲ್ಲ ರಾಜ್ಯ , ದೇಶಗಳಲ್ಲಿ ಕೂಡ ಮಾಡಲಾಗುತ್ತದೆ. ಎಲ್ಲರಲ್ಲೂ ಮತದಾನದ ಬಗ್ಗೆ ಜಾಗೃತಿ ಮೂಡಿಸಬೇಕು. 

              ಚುನಾವಣೆಯ ದಿನ ಎಲ್ಲರೂ ಹೋಗಿ ಮಾತ ಹಾಕುವಂತೆ ಆಗಬೇಕು. 


                                  ವೇದಾ ಭಟ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ