- ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಶುಕ್ರವಾರ, ಮೇ 24, 2024

 ಎಕ್ಕಿ ಗಿಡದ ಮಹತ್ವ 


         ಎಕ್ಕದ ಗಿಡ ಎಲ್ಲರಿಗೂ ಚಿರಪರಿಚಿತ.ಎಕ್ಕದ ಎಲೆ ಹಾಗೂ ಹೂವುಗಳಿಗೆ ಪೂಜಾ ವಿಧಿ ವಿಧಾನಗಳಲ್ಲಿ ಅತ್ಯಂತ ಅಗ್ರ ಹಾಗೂ ಶ್ರೇಷ್ಠ ಸ್ಥಾನವಿದೆ. ಹಿಂದು ಪುರಾಣದಲ್ಲಿ ಈ ಗಿಡಕ್ಕೆ ವಿಶೇಷ ಸ್ಥಾನಮಾನವಿದೆ.

              ರಥಸಪ್ತಮಿಯ ದಿನದಂದು ಎಕ್ಕದ ಗಿಡದ ಎಲೆಗಳನ್ನು ಧರಿಸಿ ನದಿಯಲ್ಲಿ ಸ್ನಾನ ಮಾಡಿದರೆ ಪುಣ್ಯಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.ಈ ಗಿಡದಲ್ಲಿ ಎರಡು ಬಗೆಗಳಿದ್ದು ಒಂದು ಗಿಡ ಬಿಳಿ ಹೂಗಳನ್ನು ಬಿಟ್ಟರೆ ಮತ್ತೊಂದು ಗಿಡ ನೀಲಿ ಹೂಗಳನ್ನು ಬಿಡುತ್ತದೆ. ಬಿಳಿ ಎಕ್ಕ ಗಿಡದ ಎಲೆಗಳನ್ನು ವಿಶೇಷವಾಗಿ ಗಣೇಶ ಪೂಜೆಗೆ ಬಳಸುತ್ತಾರೆ ಜೊತೆಗೆ ಪರಮೇಶ್ವರನ ಪೂಜೆಗೂ ಎಕ್ಕದ ಹೂವುಗಳನ್ನು ಬಳಸಲಾಗುತ್ತದೆ.ತುಳಸಿ ಗಿಡಕ್ಕೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ  ಎಕ್ಕಿ ಗಿಡಕ್ಕೆ ಇದೆ.

                   ಕೇವಲ ಪೂಜೆ ಮತ್ತು ಧಾರ್ಮಿಕವಾಗಿ ಮಾತ್ರವಲ್ಲದೆ ಆಯುರ್ವೇದದಲ್ಲೂ ಎಕ್ಕದ ಗಿಡಕ್ಕೆ ವಿಶೇಷ ಸ್ಥಾನವಿದೆ ಇದರ ಎಲೆಗಳನ್ನು ಅನಾದಿಕಾಲದಿಂದಲೂ ಔಷಧವಾಗಿ ಬಳಸಲಾಗುತ್ತದೆ.   ಎಕ್ಕಿ ಗಿಡಕ್ಕೆ ಅರ್ಕ ಅಥವಾ ದೇವರೇಖಾ ಎಂಬ ಹೆಸರಿನಿಂದ ಕರೆಯುತ್ತಾರೆ ಎಕ್ಕದ ಗಿಡ ಔಷದ ಗುಣಗಳಿಂದ ಶ್ರೀಮಂತವಾಗಿದೆ ಚರ್ಮ  ಸುಕ್ಕುಗಟ್ಟಿದರೆ ,ಅಥವಾ ವಿಷದ ಮುಳ್ಳು ತಾಗಿದರೆ,  ಚೇಳು ಕಡಿದಾಗ, ಮತ್ತು

  ಕಾಲುಬಾಯಿ ಜ್ವರ ಬಂದಾಗ ಈ ಎಕ್ಕಿ ಗಿಡ ಸಹಾಯಕವಾಗುತ್ತದೆ.

         ಈ ಸಸ್ಯದ ಬಹು ಉಪಯೋಗಗಳ ಬಗ್ಗೆ ಯುವ ಸಮುದಾಯಕ್ಕೆ ಅಷ್ಟಾಗಿ ಅರಿವಿಲ್ಲ ಔಷಧ ಗುಣವುಳ್ಳ ಈ ಸಸ್ಯ ಪ್ರಭೇದವನ್ನು ಯಾರು ನೆಟ್ಟಿ ಬೆಳೆಸುವುದಿಲ್ಲ ಬದಲಿಗೆ ಪ್ರಕೃತಿದತ್ತವಾಗಿ ಬೆಳೆಯುವ 

 ಎಕ್ಕದ ಗಿಡವನ್ನು "ರಸ್ತೆ ಬದಿ ಸಂಜೀವಿನಿ "ಎಂದರು ತಪ್ಪಾಗಲಾರದು. ಎಕ್ಕದ ಗಿಡವನ್ನು ಸ್ವಲ್ಪ  ಚಿವುಟಿದರೂ ಧಾರಾಳವಾಗಿ ಚಿಮ್ಮುವಷ್ಟು ಹಾಲು ಇರುತ್ತದೆ ಈ ಹಾಲು ಬಾರಿ  ಖಾರವಿದ್ದು ಕಣ್ಣಿಗೆ ಸಿಡಿದರೆ ಅಪಾಯ ಆದರೆ ಈ ಹಾಲು ಅಪಾಯಕಿಂತಲೂ ಹೆಚ್ಚು ಔಷಧದ ಗುಣ ಹೊಂದಿದೆ.  ಮುಖದಲ್ಲಿ ಚರ್ಮ ಸುಕ್ಕುಗಟ್ಟಿದ ರೀತಿಯ ಕಪ್ಪು ಕಲೆಗಳು ಕಾಣಿಸಿಕೊಂಡಾಗ ಎಕ್ಕದ ಹಾಲಿನ ಜೊತೆ ಆ ಗಿಡದ ಬೇರನ್ನು ಅರೆದು ನಿಂಬೆರಸದ ಜೊತೆ ಬೆರೆಸಿ ಮುಖಕ್ಕೆ ಹಚ್ಚಿದರೆ ಕಪ್ಪು ಕಲೆಗಳು ಮಾಯವಾಗುತ್ತವೆ.

             ಎಕ್ಕಿಗಡದಿಂದ ಹಲವಾರು ಪ್ರಯೋಜನಗಳಿವೆ ಆದರೆ ಈಗಿನ ಯುವಜನತೆ ಹೆಚ್ಚಾಗಿ ಅದರ ಬಗ್ಗೆ ತಿಳಿದು ಕೊಳ್ಳುತ್ತಿಲ್ಲ.

  

ಎಂ. ಎಂ  ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ

ಸೌಭಾಗ್ಯ ತಳವಾರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ