ಯಶಸ್ಸಿನ ಮೂಲ ಸ್ವಅವಲೋಕನ - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಸೋಮವಾರ, ಮೇ 20, 2024

ಯಶಸ್ಸಿನ ಮೂಲ ಸ್ವಅವಲೋಕನ


ಸಿಂಹಾವಲೋಕನ ಎಂಬ ಪದವನ್ನು ಸಾಮಾನ್ಯವಾಗಿ ನಾವು ಅನೇಕ ಕಡೆಗಳಲ್ಲಿ ಕೇಳಿರಬಹುದು, ಬಳಸಿರಬಹುದು. ಅಂದರೆ ಸಿಂಹವು ತಾನು ನಾಲ್ಕು ಹೆಜ್ಜೆ ಮುಂದೆ ಸಾಗಿದ ನಂತರ ಒಮ್ಮೆ ಅದು ನಡೆದು ಬಂದಂತಹ ಹಾದಿಯನ್ನು ಅವಲೋಕಿಸುತ್ತದೆ. ಪ್ರಾಣಿಗಳೆ ಇಂತಹ ಗುಣವನ್ನು ಅಳವಡಿಸಿಕೊಂಡಿರುವಾಗ ಪ್ರಾಣಿಗಳಲ್ಲಿಯೇ ಅತ್ಯಂತ ಬುದ್ದಿವಂತ ಪ್ರಾಣಿ ಎಂದು ಹೆಸರುವಾಸಿಯಾಗಿರುವ ಮನುಷ್ಯ ಇಂಥ ಗುಣವನ್ನು ಅಳವಡಿಸಿಕೊಳ್ಳದಿದ್ದರೆ ಹೇಗೆ? ಅದರಲ್ಲೂ ಇಂದಿನ ಕಲಿಯುವ ಮಕ್ಕಳು ಇದನ್ನು ಪಾಲಿಸುವುದು ಅತಿ ಮುಖ್ಯ.


ವಿದ್ಯಾರ್ಥಿಯು ತಾನು ಅಧ್ಯಯನ ಮಾಡಿದ್ದನ್ನು ಸಿಂಹಾವಲೋಕನ ಮಾಡಿಕೊಳ್ಳಲೇಬೇಕು. ಇದನ್ನು ಇನ್ನಷ್ಟು ಸರಳವಾಗಿ ಹೇಳುವುದಾದರೆ 'ಸ್ವ ಅವಲೋಕನ' ಎನ್ನಬಹುದು. ಸ್ವ ಅವಲೋಕನ ಮಾಡುವುದರ ಮೂಲಕ ವಿದ್ಯಾರ್ಥಿ ತನ್ನ ಅಧ್ಯಯನ ಮಟ್ಟವನ್ನು ತಿಳಿಯಬಹುದು.


ಸ್ವ ಅವಲೋಕನ ಎಂಬುದು ಕೇವಲ ವಿದ್ಯಾಭ್ಯಾಸಕ್ಕೆ ಸಂಬಂಧ ಪಟ್ಟ ವಿಷಯವಲ್ಲ, ಇದು ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಅಂತರಂಗದ ಒಳಗೆ ಒಮ್ಮೆಲೆ ಬಗ್ಗಿ ನೋಡಲು ನೆರವು ಮಾಡುವ ಪರಿ, ಸಾಧನ ಎನ್ನಬಹುದು. ಇದರಿಂದ ವ್ಯಕ್ತಿ ತನ್ನ ಜೀವನದ ಗುರಿ ಏನು? ತಾನು ಎಲ್ಲಿರಬೇಕಾಗಿತ್ತು? ಈಗ ಎಲ್ಲಿದ್ದೇನೆ? ಈಗಾಗಲೇ ನಡೆದು ಬಂದ ಹಾದಿಯಲ್ಲಿ ಅದ ತಪ್ಪುಗಳೇನೆಂಬುದನ್ನು ತಿಳಿದು ಅದನ್ನು ತಿದ್ದಿಕೊಳ್ಳಬಹುದು.


ಸ್ವ ಅವಲೋಕನ ಒಂದು ರೀತಿಯಲ್ಲಿ ನಮ್ಮೊಂದಿಗೆ ನಾವೇ ಸ್ಪರ್ದಿಸಲು ಪ್ರೇರಣೆ ಒದಗಿಸುತ್ತದೆ. ಇದು ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಅಗತ್ಯ. ಸ್ವ ಅವಲೋಕನಕ್ಕೆ ಒಳಪಡುವಾಗ ವ್ಯಕ್ತಿ ಪ್ರಾಮಾಣಿಕನಾಗಿರಬೇಕು. ಏನು ತಪ್ಪಾಗಿದೆ ಎಂಬುದನ್ನು ಮುಚ್ಚುಮರೆಯಿಲ್ಲದೇ ಒಪ್ಪಿಕೊಳ್ಳಬೇಕು. ಇದೆಲ್ಲಾ ಒಮ್ಮೆಲೆ ಆಗುವ ಕೆಲಸವಲ್ಲ ತನಲ್ಲಿ ಬದಲಾವಣೆ ಸಾಧ್ಯ ತಾನು ತನ್ನ ಜೀವನದಲ್ಲಿ ಈ ಹೊಸ ಬದಲಾವಣೆಯನ್ನು ಖಂಡಿತವಾಗಿಯೂ ಮಾಡಿಕೊಳ್ಳಬಲ್ಲೆ ಎಂಬುದುದನ್ನು ಮನದಟ್ಟು ಮಾಡಿಕೊಂಡು ಮನಸ್ಸಿಗೂ ಕಾಲಕ್ಕೂ ಸಮಯ ನೀಡಬೇಕು. ಆಗ ಮಾತ್ರ ಸ್ವ ಅವಲೋಕನಕ್ಕೆ ಬೆಲೆ ಕೊಟಂತಾಗುತ್ತದೆ.




            ವಾಣಿ ದಾಸ್  

ಎಂ. ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಶಿರಸಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ