*ಯೋಗದಿಂದ ರೋಗ ಮುಕ್ತರಾಗಿ*
ಯೋಗ ಎಂಬ ಶಬ್ದವು ಸಂಸ್ಕೃತ ಭಾಷೆಯ ಯುಜ್ ಎಂಬ ಪದದಿಂದ ಬಂದಿದೆ.ಪ್ರತಿನಿತ್ಯ ಯೋಗ ಮಾಡುವುದರಿಂದ ಮನಸ್ಸು ಹಗುರವಾಗಿರುತ್ತದೆ. ಬಿಡುವೇ ಇಲ್ಲದ ಪರಿಸ್ಥಿತಿ ಈಗಿನ ಜನರದ್ದಾಗಿದೆ. ಪ್ರತಿನಿತ್ಯ ಕಂಪ್ಯೂಟರ್ ಮುಂದೆ ಕೂತು ಕೂತು ಅತಿಯಾದ ಬೊಜ್ಜುತನ ,ಸೋಮಾರಿತನ ,ಮಾನಸಿಕ ಸಮಸ್ಯೆಗಳು ಕಾಡುತಿದೆ. ಡಿಜಿಟಲ್ ಯುಗದತ್ತ ಹೆಜ್ಜೆ ಹಾಕುತ್ತಿರುವ ಮಾನವ ತನ್ನ ಆರೋಗ್ಯದ ಕಡೆ ಗಮನಹರಿಸುತ್ತಿಲ್ಲ ಎಂಬುದು ವಿಷಾದಕರವಾಗಿದೆ.
ವಿದ್ಯಾರ್ಥಿಗಳ ಜೀವನಕ್ಕೆ ಆಟ,ಪಾಠದ ಜೊತೆ ಮನರಂಜನೆ ಅವಶ್ಯಕವಾಗಿರಬೇಕು . ವಿದ್ಯಾರ್ಥಿಗಳು ಕೇವಲ ಓದುತ್ತಾ ಇದ್ದರೆ ಸಾಲದು .ದೈಹಿಕ ಪರಿಶ್ರಮ ಕೂಡ ಬೇಕು. ನಮ್ಮ ದೇಹಕ್ಕೆ ದಂಡನೆ ಕೊಟ್ಟಷ್ಟು ನಾವು ಹೆಚ್ಚು ಆರೋಗ್ಯವಂತರಾಗಿರುತ್ತೇವೆ. ಮಕ್ಕಳ ಮನಸ್ಸು ಯಾವಾಗಲೂ ಚಂಚಲಮಯವಾಗಿದ್ದು, ಯೋಗ ಮಾಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ.
ಅಭಿವೃದ್ಧಿಯತ್ತ ಸಾಗುತ್ತಾ ಸಾಗುತ್ತಾ ನಮ್ಮ ಆಹಾರಶೈಲಿಯೂ ಬದಲಾಗುತ್ತಿದೆ . ಜನರಿಗೆ ಮನೆಯಲ್ಲಿ ತಿಂಡಿ ತಿನ್ನುವುದಕ್ಕಿಂತ ಹೊರಗಡೆ ಹೋಗಿ ಆ ಧೂಳಲ್ಲಿ ತಿಂದರೆ ಮಾತ್ರ ತೃಪ್ತಿ.ಆ ಅಂಗಡಿಯ ತಿನಿಸುಗಳಿಗೆ ನಮ್ಮ ಜನ ಎಷ್ಟು ಮರುಳಾಗುತ್ತಾರೆಂದರೆ ಬೇರೆ ಬೇರೆ ಕಾಯಿಲೆ ಬಂದರೂ ಪರವಾಗಿಲ್ಲ ಆ ಹಾಳಾದ ತಿನಿಸನ್ನು ಮಾತ್ರ ಬಿಡುವುದಿಲ್ಲ.ಈಗಿನ ಯುವಜನತೆ ಫಾಸ್ಟ್ ಫುಡ್ ಗಳಿಗೆ ಹೆಚ್ಚಿನ ಒಲವನ್ನು ತೋರಿಸುತ್ತಿದ್ದಾರೆ.ಹೆಚ್ಚಿನದಾಗಿ ಕುರುಕಲು ತಿಂಡಿಗಳನ್ನು, ಫಾಸ್ಟ್ ಫುಡ್ , ಕೋಲ್ಡ್ ಡ್ರಿಂಕ್ ಇಷ್ಟ ಪಡುತ್ತಾರೆ.ಅವುಗಳು ಕೆಮಿಕಲ್ ಯುಕ್ತವಾಗಿರುತ್ತವೆ. ಇವು ನಮ್ಮ ದೇಹಕ್ಕೆ ಹಾನಿಕಾರಕವಾಗಿದವೆ. ದೊಡ್ಡ ದೊಡ್ಡ ಕಂಪನಿಗಳು ತಮ್ಮ ಲಾಭಕ್ಕಾಗಿ ಕೆಮಿಕಲ್ ಯುಕ್ತ ಆಹಾರ ಪದಾರ್ಥಗಳನ್ನು ಮಾರಾಟಕ್ಕೆ ತರುತ್ತಿದ್ದಾರೆ.ಅವುಗಳನ್ನು ನಾವು ಸೇವಿಸಿ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದಲ್ಲದೇ ಹಣವನ್ನು ವ್ಯರ್ಥ ಮಾಡುತ್ತಿದ್ದೇವೆ.
ಅಂಗಡಿಯ ತಿನಿಸುಗಳನ್ನು ತಿನ್ನುವುದಕ್ಕಿಂತ ಹಣ್ಣು ಹಂಪಲು ತಿಂದರೆ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ.
ಯೋಗವು ಪುರಾತನಕಾಲದಿಂದಲೂ ಬಂದಿದೆ. ವಿದೇಶಿಯರು ಯೋಗವನ್ನು ಕಲಿಯಲು ನಮ್ಮ ದೇಶಕ್ಕೆ ಬರುತ್ತಿದ್ದಾರೆ.ಆದರೆ ನಾವೇ ನಮ್ಮ ಪುರಾತನವಾದ ಯೋಗಾಭ್ಯಾಸ ಮರೆತಿದ್ದೇವೆ. ಹಲವಾರು ರೋಗಗಳಿಗೆ ಯೋಗವು ಮದ್ದಾಗಿದೆ. ವೈದ್ಯರು ಗುಣಪಡಿಸಲಾಗದ ರೋಗವನ್ನು ಗುಣಪಡಿಸುವ ಶಕ್ತಿ ಯೋಗದಲ್ಲಿದೆ. ವಿದೇಶಿಗರು ಯೋಗವನ್ನು ನಮ್ಮಲ್ಲಿ ಕಲಿತು ಅವರ ದೇಶದಲ್ಲಿ ಹೋಗಿ ಯೋಗ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ಹಣವನ್ನು ಗಳಿಸುತ್ತಿದ್ದಾರೆ.ಯೋಗ ಕಲಿಸಿದ ನಾವು ರೋಗಗಳಿಗೆ ಆಹ್ವಾನ ಕೊಡುತ್ತಿದ್ದೇವೆ.
ಇತ್ತೀಚೆಗೆ ಅತಿಯಾದ ಒತ್ತಡ ಆತಂಕದಂತಹ ಮಾನಸಿಕ ಸಮಸ್ಯೆಗಳು ಜನರಲ್ಲಿ ಕಾಡುತ್ತಿವೆ . ಯೋಗವು ಶಾರೀರಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ನಮ್ಮ ಆಹಾರ ಶೈಲಿಯಿಂದ ನಾವು ಬೇರೆ ಬೇರೆ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಪ್ರತಿನಿತ್ಯ ಒಂದು ಗಂಟೆ ಯೋಗ ಮಾಡಿ ರೋಗದಿಂದ ದೂರವಿರಿ. ಯೋಗ ಮಾಡುವುದರಿಂದ ಬೊಜ್ಜುತನ ಕಡಿಮೆಯಾಗುತ್ತದೆ, ದೀರ್ಘಕಾಲದ ನೋವು ಶಮನವಾಗುತ್ತದೆ, ರಕ್ತದ ಒತ್ತಡ ಮತ್ತು ರಕ್ತದ ಹರಿವು ಸುಧಾರಿಸುತ್ತದೆ, ಮುಖದ ಸೌಂದರ್ಯ ಹೆಚ್ಚುತ್ತದೆ, ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಯೋಗವು ಆರೋಗ್ಯವನ್ನು ಉತ್ತಮ ವಾಗಿಡಲು ಸಹಕರಿಸುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ