*ಭಾರತ – ಪಾಕಿಸ್ತಾನ ಕ್ರಿಕೆಟ್ ಪಂದ್ಯ*
ಕ್ರಿಕೆಟ್ ಆಟವು "ಜೆಂಟಲ್ಮೆನ್ಸ್ ಗೇಮ್" ಎಂದು ಕರೆಯಲಾಗಗುತ್ತದೆ. ಆದರೆ ಕ್ರಿಕೆಟಿನಲ್ಲಿಯೇ ಅತ್ಯಂತ ಉತ್ಸಾಹ, ತೀವ್ರತೆ ಮತ್ತು ಭಾವನೆಗಳನ್ನು ಹುಟ್ಟಿಸುವ ಪಂದ್ಯ ಎಂದರೆ ಭಾರತ - ಪಾಕಿಸ್ತಾನ ಕ್ರಿಕೆಟ್ ಪಂದ್ಯ. ವಿಶ್ವದಾದ್ಯಂತ ಕೋಟಿ ಕೋಟಿ ಜನರು ಈ ಸ್ಪರ್ಧೆಯನ್ನು ನೋಡಲು ಕಾದು ಕುಳಿತಿರುತ್ತಾರೆ. ಈ ಪಂದ್ಯವು ಕೇವಲ ಕ್ರೀಡೆಯಲ್ಲ, ಅದು ಇತಿಹಾಸ, ಸಂಸ್ಕೃತಿ, ರಾಷ್ಟ್ರಾಭಿಮಾನ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ಬಿಟ್ಟುಗೂಡಿಸುವ ವಿಶಿಷ್ಟ ಸಂದರ್ಭವಾಗಿದೆ.
ಭಾರತ- ಪಾಕಿಸ್ತಾನ ಕ್ರಿಕೆಟ್ ನಡೆಯುವ ದಿನ ಸಾಮಾನ್ಯ ದಿನವಲ್ಲ. ಆ ದಿನವನ್ನು ಜನರು ಹಬ್ಬದಂತೆ ಆಚರಿಸುತ್ತಾರೆ. ಮನೆಮನೆಗಳಲ್ಲಿ ಟಿವಿ ಮುಂದೆ ಕುಟುಂಬದವರು ಸೇರುತ್ತಾರೆ. ಸ್ನೇಹಿತರು ಚಹಾ ಅಂಗಡಿಗಳಲ್ಲಿ, ಹೋಟೆಲುಗಳಲ್ಲಿ, ದೊಡ್ಡ ಪರದೆ ಮುಂದೆ ಕೂತು ಪಂದ್ಯ ವೀಕ್ಷಿಸುತ್ತಾರೆ. ಒಂದು ಸಿಕ್ಸರ್ ಬಿದ್ದಾಗ ಜನರು ಸಂತೋಷದಿಂದ ಕುಣಿದಾಡುತ್ತಾರೆ. ವಿಕೆಟ್ ಬಿದ್ದರೆ ನಿಟ್ಟುಸಿರು ಬಿಡುತ್ತಾರೆ. ಈ ಪಂದ್ಯವು ಜನರ ಬಡಿತವನ್ನು ನಿಯಂತ್ರಿಸುವ ಶಕ್ತಿ ಹೊಂದಿದೆ.
ಭಾರತದ ದಿಗ್ಗಜ ಬ್ಯಾಟ್ಸಮನ್ ಗಳು, ಬೌಲರ್ ಗಳು ಮೈದಾನದಲ್ಲಿ ತಮ್ಮ ಶ್ರೇಷ್ಠತೆಯನ್ನು ತೋರಿಸಲು ಪ್ರಯತ್ನಿಸುತ್ತಾರೆ. ಮತ್ತೊಂದು ಕಡೆ ಪಾಕಿಸ್ತಾನದ ಆಟಗಾರರು ಭಾರತವನ್ನು ಸೋಲಿಸಲು ಅನೇಕರಿಗೆ ಸವಾಲಾಗಿ ನಿಲ್ಲುತ್ತಾರೆ. ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ಎo. ಎಸ್. ಧೋನಿ, ವಿರಾಟ್ ಕೊಹ್ಲಿ ಮುಂತಾದವರು ಭಾರತಕ್ಕೆ ಅನೇಕ ಗೆಲುವುಗಳನ್ನು ತಂದಿದ್ದಾರೆ. ಭಾರತ - ಪಾಕಿಸ್ತಾನ ಪೈಪೋಟಿ ಪಂದ್ಯವು ಇತಿಹಾಸದಲ್ಲಿ ಸ್ಮರಣೀಯ ಕ್ಷಣಗಳನ್ನು ಮೂಡಿಸಿದೆ.
ಈ ಪಂದ್ಯದಲ್ಲಿ ಒಂದು ಚೆಂಡು,ಒಂದು ರನ್,ಒಂದು ಸಿಕ್ಸರ್,ಒಂದು ಕ್ಯಾಚ್ ಕೂಡ ನಿರ್ಣಯಕವಾಗುತ್ತದೆ. ಅಭಿಮಾನಿಗಳ ಭಾವನೆಗಳು ಕ್ಷಣ ಕ್ಷಣಕ್ಕೆ ಬದಲಾಗುತ್ತದೆ. ಮೊದಲಿಗೆ ಭಾರತದ ಬ್ಯಾಟ್ಸಮನ್ ಸಿಕ್ಸರ್ ಹೊಡೆದರೆ ಜನರ ಸಂತೋಷಕ್ಕೆ ಮಿತಿ ಇರುವುದಿಲ್ಲ. ಆದರೆ ತಕ್ಷಣ ವಿಕೆಟ್ ಬಿದ್ದರೆ ಆನಂದವು ದುಃಖಕ್ಕೆ ತಿರುಗುತ್ತದೆ. ಹೀಗಾಗಿ ಈ ಪಂದ್ಯವು ಅಭಿಮಾನಿಗಳ ಮನಸ್ಸಿನಲ್ಲಿ ರೋಲರ್ ಕೋಸ್ಟ್ ಪ್ರಯಾಣದಂತೆ.
ಭಾರತ - ಪಾಕಿಸ್ತಾನ ಪಂದ್ಯ ನಡೆಯುವಾಗ ಮಾಧ್ಯಮಗಳು ಅದನ್ನು ಭಾರಿ ಪ್ರಚಾರ ಮಾಡುತ್ತಾರೆ. ಸುದ್ದಿ ಚಾನೆಲ್ ಗಳು, ನ್ಯೂಸ್ ಪೇಪರ್ ಗಳು, ಸೋಷಿಯಲ್ ಮೀಡಿಯಾಗಳು ಅಂತೆ ಕಂತೆಗಳ ಕಥೆಗಳಿಂದ ತುಂಬಿರುತ್ತದೆ. ಪಂದ್ಯದ ಟಿಕೆಟ್ ಪಡೆಯಲು ಸಾಹಸ ನಡೆಸುತ್ತಾರೆ. ಕೆಲವು ಬಾರಿ ಟಿಕೆಟ್ ಬೆಲೆ ಸಾವಿರಗಳಲ್ಲಿ ಏರುತ್ತದೆ. ಪಂದ್ಯ ನೋಡಲು ಜನರೆಲ್ಲರೂ ಎಲ್ಲಾ ಕೆಲಸವನ್ನು ಬಿಟ್ಟು ಕುಳಿತುಕೊಳ್ಳುತ್ತಾರೆ .
ಪಂದ್ಯವು ಭಾವನಾತ್ಮಕ ಪ್ರತಿಕ್ರಿಯೆಗಳಿಂದ ಹಬ್ಬಿರುತ್ತದೆ. ಜನರು ಪಂದ್ಯವನ್ನು ಕೇವಲ ಮನೋರಂಜನೆಗೆ ತೆಗೆದುಕೊಳ್ಳದೆ ಭಾವನಾತ್ಮಕವಾಗಿ ತೆಗೆದುಕೊಂಡು ಹಾನಿಗಳನ್ನು ನಡೆಸುತ್ತಾರೆ.
ಈ ಪಂದ್ಯವು ವಿಶ್ವದಾದ್ಯಂತ ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯುತ್ತದೆ. ಕ್ರಿಕೆಟ್ ವಿಶ್ವಕಪ್ ನಲ್ಲೇ ಭಾರತ - ಪಾಕಿಸ್ತಾನ ಪಂದ್ಯಕ್ಕೆ ಅತಿ ಹೆಚ್ಚು ವೀಕ್ಷಕರನ್ನು ದಾಖಲಿಸಿದೆ.
ಭಾರತ - ಪಾಕಿಸ್ತಾನ ಪಂದ್ಯವು ಪಂದ್ಯವಲ್ಲ. ಅದು ಇತಿಹಾಸ, ಭಾವನೆ, ರಾಷ್ಟ್ರಾಭಿಮಾನ ಮತ್ತು ಕ್ರೀಡಾಸ್ಪೂರ್ತಿಯ ಜೀವಂತ ಪ್ರತಿರೂಪ. ಈ ಪಂದ್ಯವು ಜನರ ಮನಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತದೆ.
- ಸುಶ್ಮಿತಾ ನಾಯ್ಕ
ಪತ್ರಿಕೋದ್ಯಮ ವಿಭಾಗ. ಎಂ. ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ