ಭೀಮನ ಅಮಾವಾಸ್ಯೆ
ಆಷಾಢ ಮಾಸದ ಕೊನೆಯ ಅಮಾವಾಸ್ಯೆಗೆ ಭೀಮನ ಅಮಾವಾಸ್ಯೆ ಅಂತ ಕರೆಯುತ್ತಾರೆ. ಇದನ್ನು ತುಂಬಾ ಭಕ್ತಿಯಿಂದ ಆಚರಿಸುತ್ತಾರೆ. ಇದಕ್ಕೆ ಮಹಾಭಾರತದಲ್ಲಿ ಒಂದು ಕಥೆ ಇದೆ. ಒಂದು ಸಲ ಪಾಂಡವರು 12 ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತವಾಸ ಮುಗಿಸಿ ಹಸ್ತಿನಾಪುರಕ್ಕೆ ಬಂದಿದ್ದರು.
ಆಷಾಢ ಮಾಸದ ಅಮಾವಾಸ್ಯೆಯ ದಿನ ಭೀಮಸೇನನು ತಾಯಿ ಕುಂತಿಗೆ ತಾಯಿ ಇವತ್ತು ನನಗೆ ಏನಾದರೂ ವಿಶೇಷ ಅಡುಗೆ ಮಾಡಿ ಅಂದರು. ಕುಂತಿ ಅವರ ಮನೆಯಲ್ಲಿ ಅಷ್ಟು ಸಾಮಾಗ್ರಿ ಇಲ್ಲದಿದ್ದರೂ ಅಕ್ಕಿ ,ಬೆಲ್ಲ, ತೆಂಗಿನಕಾಯಿ ಹಾಕಿ ಉಂಡೆ ಮತ್ತು ಕಡುಬು ಮಾಡಿದಳು ಜೊತೆಗೆ ಹುಳಿ ಪಲ್ಯ ಭೀಮ ನಿಗೆ ಬಡಿಸಿದಳು. ಭೀಮನು ಅಷ್ಟು ತೃಪ್ತಿಇಂದ ಊಟ ಮಾಡಿ ತಾಯೆ ನಿನ್ನ ಕೈಯ ಅಡುಗೆಗಿಂತ ರುಚಿ ಯಾವುದು ಇಲ್ಲ ಅಂತ ಆಶೀರ್ವದಿಸಿದ. ಆ ದಿನವನ್ನು ಆಶಾಡ ಮಾಸದ ಕೊನೆಯ ಅಮಾವಾಸ್ಯೆಗೆ ಭೀಮನ ಅಮಾವಾಸ್ಯೆ ಅಂತ ಕರೆಯುತ್ತಾರೆ ಎಂದು ವದಂತಿ ಕೂಡ ಇದೆ. ಮತ್ತೊಂದು ಕತೆಯ ಪ್ರಕಾರ ಒಬ್ಬ ರಾಜನು ತನ್ನ ಮಗನ ಮದುವೆ ಮಾಡುವ ಮೊದಲೇ ತೀರಿಕೊಳ್ಳುತ್ತಾನೆ ಆದರೆ ಆ ರಾಜನ ಕೊನೆಯಾಸೆ ತನ್ನ ಮದುವೆಯಾಗಬೇಕೆಂಬುದು. ಮೃತ ದೇಹ ಕಂಡ ಊರಿನವರು ಹೆಣ್ಣು ಕೊಡಲು ಯಾರು ಮುಂದಾಗಲಿಲ್ಲ ಆಗ ಊರಿನ ಬಡ ಬ್ರಾಹ್ಮಣ ತನ್ನ ಮಗಳನ್ನು ವಿವಾಹ ಮಾಡಿಕೊಡಲು ಮುಂದಾದನು ಸತ್ತ ದೇಹದೊಂದಿಗೆ ತನ್ನ ಮಗಳನ್ನು ವಿವಾಹ ಮಾಡಿಕೊಡುತ್ತಾನೆ. ವಿವಾಹ ಮುಗಿದ ನಂತರ ಶವವನ್ನು ಸುಡಲು ಸ್ಮಶಾನಕ್ಕೆ ಹೋಗುವಾಗ ಗುಡುಗು ಬಂದಿತು. ಅವಳು ತನ್ನ ತಾಯಿ ಭೀಮನ ಅಮಾವಾಸ್ಯೆ ಪೂಜೆ ಮಾಡಿದ್ದು ಕಣ್ಣೆದುರು ಬಂದಿತು. ಆಗ ಅವಳು ತನ್ನ ಪತಿಯ ಪ್ರಾಣವನ್ನು ಉಳಿಸಿಕೊಳ್ಳಲು ಮಣ್ಣಿನ ದೀಪ ಹಚ್ಚಿ ಮಣ್ಣಿ ನಿಂದ ಶಿವ ಪಾರ್ವತಿ ಮತ್ತು ಭೀಮೇಶ್ವರನ ಮೂರ್ತಿ ಮಾಡಿ ಪೂಜಿಸಿದಳು ಅವಳ ಭಕ್ತಿಯನ್ನು ಕಂಡ ಶಿವ ಪಾರ್ವತಿ ಮತ್ತು ಭೀಮೇಶ್ವರ ಅವಳ ಪತಿಯನ್ನು ಬದುಕಿಸಿ ನೂರಾರು ಕಾಲ ಸುಖವಾಗಿರಿ ಎಂದು ಹರಸುತ್ತಾರೆ. ಇದರಿಂದ ಮದುವೆಯಾದ ಹೆಂಗಸರು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಮನೆಯ ಮುಂದೆ ರಂಗೋಲಿ ಹಾಕಿ ಹೆಂಗಸರು ಉಪವಾಸ ಇದ್ದು ಗಂಡನ ಕಾಲನ್ನು ದೇವರಂತೆ ಪೂಜಿಸುತ್ತಾರೆ ಇದರಿಂದ ಗಂಡನ ಆಯಸ್ಸು, ದೀರ್ಘವಾಗಿರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ. ಈ ಅಮಾವಾಸ್ಯೆ ದಿನದಂದು ಊಟ ಬಟ್ಟೆ ದಾನ ಮಾಡಿದರೆ ಗಂಡನ ಆಯಸ್ಸು ಇನ್ನಷ್ಟು ದೀರ್ಘವಾಗುತ್ತದೆ ಎಂದು ನಂಬಿಕೆ ಇದೆ. ಅಮಾವಾಸ್ಯೆಯನ್ನು ಅಮ್ಮ ಮಗನ ಪ್ರೀತಿ ಮತ್ತು ಹೆಂಡತಿಯರು ಗಂಡನಿಗಾಗಿ ಮಾಡುವ ಪ್ರಾರ್ಥನೆಯ ಹಬ್ಬ ಎಂದು ಕರೆಯುತ್ತಾರೆ.
ರಕ್ಷಿತಾ ನಾಯ್ಕ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ