ಗೆಳೆತನ - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಬುಧವಾರ, ಜುಲೈ 6, 2022

ಗೆಳೆತನ

 ಚಂದ್ರಕಾಂತ ಶೆಟ್ಟಿ.                      
  ಬಿ.ಎ.೨ ಪತ್ರಿಕೋದ್ಯಮ ವಿಭಾಗ 



ಒಬ್ಬರು ಇನ್ನೊಬ್ಬರನ್ನು ನೋಡಿ ಅಸುಯೆ ಪಡುತ್ತಿರುವ, ಸಂಬಂಧಕ್ಕೆ ಬೆಲೆ ಇಲ್ಲದ ಈ ಲೋಕದಲ್ಲಿ, ಇದೆಲ್ಲವನ್ನೂ ಮೀರಿ ಬೆಳೆದ ಒಂದು ಅದ್ಭುತ ಸಂಬಂಧವೆ ಗೆಳೆ ತನ.ಇಲ್ಲಿ ಬಡವ  ಶ್ರೀಮಂತನ ಒಗ್ಗಟ್ಟು ಕೇವಲ ಸ್ನೇಹದಿಂದ ಮಾತ್ರ ಸಾಧ್ಯ.ಒಂದು ಕಂಪನಿಯ ಸಾಹುಕಾರನ ಗೆಳೆತನ ಚಿಕ್ಕ ಗೂಡು ಅಂಗಡಿಯವನ ಜೊತೆಗಿದ್ದರೆ ಅದು ನೀರಿನ ಮೇಲಿನ ಗುಳ್ಳೆ ಎಂದು ಹೇಳುವವರೆ  ಹೆಚ್ಚು. 

 ಒಂದು ಒಳ್ಳೆಯ ಸಂಬಂಧಕ್ಕೆ ಒಬ್ಬ ಉತ್ತಮ ಮನಸ್ಸಿನ ಗೆಳೆಯ ಮುಖ್ಯವೆ ಹೊರತು ಹಣ, ಅಂತಸ್ತಿನ ಅವಶ್ಯಕತೆ ಇರುವುದಿಲ್ಲ.ಸ್ನೇಹವೆಂಬುದು ಜಾತಿ, ಧರ್ಮವನ್ನು ಬಿಟ್ಟು ಒಳ್ಳೆಯ ರೀತಿಯಲ್ಲಿ ಸ್ಪಂದಿಸುವವರನ್ನು ಮಾತ್ರ ಬಯಸುತ್ತದೆ. 

   ಗೆಳೆತನಕ್ಕೆ ಲಿಂಗ ಭೇದವಿಲ್ಲ.ಹೆಣ್ಣಿನ ಜೋತೆ ಹೆಣ್ಣೆ ಸ್ನೇಹ ಬೆಳೆಸಬೇಕು,ಗಂಡಿನ ಜೋತೆ ಗಂಡೆ ಗೆಳೆಯನಾಗಬೇಕು ಎಂದು ಮಿತಿ ಇಲ್ಲ.ಗಂಡು ಹೆಣ್ಣಿನ ಸ್ನೇಹ ಒಳ್ಳೆಯ ಬಾಂಧವ್ಯದಿಂದ ದೀರ್ಘಾವಧಿಯ ಸಂಬಂದಕ್ಕೆ ಕಾರಣವಾಗುತ್ತದೆ. 

  ಹುಟ್ಟಿನಿಂದ ಬರುವ ಜಾತಿ ಸಂಬಂಧ ಮುರಿದು ಬಿಳುತ್ತಿದ್ದರು ಗೆಳೆತನದಿಂದ ಬರುವ ಸ್ನೇಹ ಸಂಬಂಧ ಬಾಳಿ-ಬದುಕುತ್ತಿವೆ.ಇದೆಲ್ಲದಕ್ಕಿಂತಲು ಅದ್ಭುತವಾದ ಗೆಳೆತನ ಪ್ರಾಣಿಗಳೊಂದಿಗೆ ಬೆಸೆಯುತ್ತದೆ.ಮನುಷ್ಯ -ಮನುಷ್ಯರ ಸ್ನೇಹ ಮುರಿದು ಬಿದ್ದುರು ಪ್ರಾಣಿ & ಮನುಷ್ಯರ ಸ್ನೇಹ ಶಾಶ್ವತವಾಗಿ ಉಳಿಯುತ್ತದೆ.

 ಗೆಳೆತನವನ್ನು ಬಲವಂತವಾಗಿ ಪಡೆದುಕೊಳ್ಳಲು ಸಾಧ್ಯವಿಲ್ಲ.ಜಗತ್ತಿನಲ್ಲಿ ಬಲವಂತವಾಗಿ ನಡೆಯುವ ಯಾವುದು ಶಾಶ್ವತವಲ್ಲ.ಬಲವಂತದ ಸ್ನೇಹ ಹಗ್ಗ ಹರಿದ  ಸೇತುವೆಯಂತೆ, ಯಾವುದೇ ಸಂದರ್ಭದಲ್ಲಿಯು ಮುರಿದು ಬಿಡಬಹುದು.

  ಗೆಳೆತನ ಹಣ ಅಥವಾ ಅಮೂಲ್ಯವಾದ ವಸ್ತು ಕೊಟ್ಟರೆ ಸಿಗುವುದಿಲ್ಲ.ಅದಕ್ಕೆ ಪ್ರೀತಿ, ವಿಶ್ವಾಸ, ನಂಬಿಕೆ, ಸ್ಪಂದನೆಯ ಅವಶ್ಯಕತೆ ಇರುತ್ತದೆ.ಈ ನಾಲ್ಕು, ನಾಲ್ಕು ಕಂಬಗಳಿದ್ದಂತೆ.ಇವು ಸರಿಯಾಗಿದ್ದರೆ ಗೆಳೆತನದ ಕೊಟೆ ಉದ್ದವಾಗಿ ಎತ್ತರವಾಗಿ ಬೆಳೆಯುತ್ತದೆ. 

                                   

     

                                          ಚಂದ್ರಕಾಂತ ಶೆಟ್ಟಿ.                      

                                            ಬಿ.ಎ.೨

                                            ಪತ್ರಿಕೋದ್ಯಮ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ