ವಿಶ್ವವೇ ಬಾಂಬ್ ಸೈಕ್ಲೋನ್ ನಿಂದ ತತ್ತರಿಸುತ್ತಿದೆ‌-ನಾಗೇಶ್ ಹೆಗಡೆ - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಬುಧವಾರ, ಡಿಸೆಂಬರ್ 28, 2022

ವಿಶ್ವವೇ ಬಾಂಬ್ ಸೈಕ್ಲೋನ್ ನಿಂದ ತತ್ತರಿಸುತ್ತಿದೆ‌-ನಾಗೇಶ್ ಹೆಗಡೆ


ರಸಿ -ಬಿಸಿ ಪ್ರಳಯಕ್ಕೆ ಪೆಟ್ರೋಲ್, ಡೀಸೆಲ್ ಕಾರಣವಲ್ಲ ಬಂಡವಾಳಶಾಹಿ ಅರ್ಥವ್ಯವಸ್ಥೆಯೇ ಕಾರಣ.ಹೆಚ್ಚುತ್ತಿರುವ ಜಾಗತಿಕ ತಾಪಮಾನಗಳಿಂದ ವಾಯುಪದರ ಹಾಗೂ ಓಝೊನ್ ಪದರವು ನಾಶವಾಗುತ್ತಿದೆ.ಇನ್ನು ಕೆಲವು ವರ್ಷಗಳಲ್ಲಿ ಮನುಷ್ಯರಿಗೆ ಅಪಾಯ ತಪ್ಪಿದ್ದಲ್ಲ ಎಂದು ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಹೇಳಿದರು.

ಅವರು ಎಂ ಇ ಎಸ್ ನ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ IQAC ಸಹಭಾಗಿತ್ವದಲ್ಲಿ ಪತ್ರಿಕೋದ್ಯಮ ವಿಭಾಗ ಮತ್ತು ರಸಾಯನ ಶಾಸ್ತ್ರ ವಿಭಾಗದ ಸಹಯೋಗದಲ್ಲಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಬಾಂಬ್ ಸೈಕ್ಲೋನ್ ನಿಂದ ವಾಯುಮಂಡಲವು ದಿನದಿಂದ ದಿನಕ್ಕೆ ನಾಶವಾಗುತ್ತಿದೆ.ಅದಲ್ಲದೆ ಹಲವು ರಾಷ್ಟ್ರಗಳು ನಾಶವಾಗಿದೆ.ಹತ್ತು ವರ್ಷದಲ್ಲಿ ಪೆಟ್ರೋಲ್, ಡೀಸೆಲ್ ಬಂದ್ ಮಾಡಲು ಸರ್ಕಾರ ನಿರ್ಧರಿಸಿದೆ.ಸೌರವ್ಯೂಹದಲ್ಲಿ ಭೂಮಿ ಮಾತ್ರ ಜೀವಿಯನ್ನು ಹೊಂದಿರುವ ಗ್ರಹವಾಗಿದ್ದು.ಇದು 15 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಹೊಂದಿದೆ.ಕೊರೋನ, ಜಾಗತಿಕ ತಾಪಮಾನ, ಅಭಿವೃದ್ಧಿ ಅಲೆ ಈ ಮೂರು ರೀತಿ ಡೊಡ್ಡ ಅಪಾಯಗಳು ಭೂಮಿಗೆ ಬರುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಜರ್ಮನಿಯ ವಿಜ್ಞಾನಿ ಶ್ರೀಕಾಂತ್ ಭಟ್ ಮಾತನಾಡಿ ವಿಜ್ಞಾನಿಗಳು ಎದುರಿಸುವ ತೊಂದರೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಉಪಸಮಿತಿ ಅಧ್ಯಕ್ಷರಾದ ಎಸ್ ಕೆ ಭಾಗ್ವತ್ ಈ ಕಾರ್ಯಕ್ರಮ ತುಂಬಾ ವಿಶೇಷವಾದದ್ದು.ಉಪನ್ಯಾಸ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ತಮ್ಮ ಭವಿಷ್ಯದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ ಟಿ ಎಸ್ ಹಳೇಮನೆ ಸ್ವಾಗತಿಸಿ ಪ್ರಾಸ್ತಾವಿಸಿದರು.ಪತ್ರಿಕೋದ್ಯಮದ ಮುಖ್ಯಸ್ಥ ಪ್ರೊ ರಾಘವೇಂದ್ರ ಹೆಗಡೆ ಜಾಜೀಗುಡ್ಡ ನಿರೂಪಿಸಿದರು. ರಸಾಯನ ಶಾಸ್ತ್ರ ಮುಖ್ಯಸ್ಥ ಪ್ರೊ ಗಣೇಶ ಹೆಗಡೆ ವಂದಿಸಿದರು.

:-ಮಂಜುನಾಥ

:-ಕಾವ್ಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ