ದಾರಿ ತಪ್ಪಿರುವುದು ಶಿಕ್ಷಣ ವ್ಯವಸ್ಥೆಯೋ ವಿಧ್ಯಾರ್ಥಿಗಳೊ - ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಬುಧವಾರ, ಜನವರಿ 18, 2023

ದಾರಿ ತಪ್ಪಿರುವುದು ಶಿಕ್ಷಣ ವ್ಯವಸ್ಥೆಯೋ ವಿಧ್ಯಾರ್ಥಿಗಳೊ



ಶಿಕ್ಷಣ ಒಂದು ಅಮೂಲ್ಯವಾದ ಸಂಪತ್ತು ಅದನ್ನು ಅಷ್ಟು ಶ್ರದ್ದೆ ಇಂದ ಭಕ್ತಿಯಿಂದ  ಹಿಂದಿನ ಗುರುಕುಲ ಅಥವಾ  ಶಿಕ್ಷಣ ಪದ್ಧತಿಯಲ್ಲಿ ನಾವು ಕಾಣಬಹುದು. ಪ್ರಸ್ತುತ ಶಿಕ್ಷಣ  ಎಂಬುದು ಮಾರಾಟ ಮಾಡುವ ವಸ್ತುವಿನಂತೆ ಗೋಚರಿಸುತ್ತಿರುವುದು ಖೇದದ ಸಂಗತಿ. ಹಿಂದೊಂದು ಕಾಲದಲ್ಲಿ ಗುರುವಿಗೆ  ತನ್ನ ಕೈ ಬೆರಳನ್ನೇ ಕತ್ತರಿಸಿ ಕೊಟ್ಟ ಉದಾಹರಣೆ ಕಾಣಬಹುದು ಅದೇ ಈಗಿನ ಪ್ರಸಕ್ತ ಸಾಲಿನ  ಗುರು ಕಣ್ಣಲತೆ ಇಂದ ದೂರವಾದರೆ  ಅವಾಚ್ಯ ಮಾತುಗಳ ಮೂಲಕ ನಿಂದಿಸುವುದು  ವಿಧ್ಯಾರ್ಥಿಗಳಿಗೆ  ರೂಢಿ ಆಗಿರುವುದೋ  ಎಂಬುದು ಒಂದು  ಪ್ರಶ್ನಾರ್ಥಕವಾಗಿದೆ.

                                   ಈ ಹಿಂದೆ ಶಿಕ್ಷಣ ಪದ್ಧತಿಯು ಕಠಿಣ ಮತ್ತು ನಿಷ್ಟೆಯನ್ನು ಬಾಯಸುತ್ತಿತ್ತು ಸದ್ಯದ ಮಟ್ಟಿಗೆ  ಶಿಕ್ಷಣ ಇದನ್ನು ಬಯಸದೆ ಹಣ  ಅಂತಸ್ತು ಅಧಿಕಾರಗಳನ್ನು ಬಯಸುತ್ತದೆ ಎನ್ನುವುದಕ್ಕಿಂತ ಅವುಗಳ ಪ್ರಭಾವ  ಶಿಕ್ಷಣವನ್ನು  ತನ್ನ ಕಪಿ ಮುಷ್ಟಿಯಲ್ಲಿ  ಇರಿಸಿವೆ ಎಂದರೆ ತಪ್ಪಗಲಾರದು.ರಾಜಕೀಯ ಎಂಬ ರಕ್ತ ಬೀಜಸೂರರು  ಪವಿತ್ರ ದ್ರವ್ಯವದೊಳಹೊಕ್ಕಿ ಕೆಟ್ಟ ಗೆದ್ದಲು ಹುಳುಗಳಂತೆ ಹಣಕ್ಕಾಗಿ  ಕಡಿದು ಕಡಿದು ಆದರ ಪವಿತ್ರತೆ ಅಥವಾ ಅದರ  ಗಟ್ಟಿ ತನವನ್ನು ಸಡಿಲವಾಗಿಸಿ ಗಾಳಿಯಲ್ಲಿ ತೂರಿ ಬಿಡುತ್ತಿರುವುದು ದುರ್ದೈವವೇ ಸರಿ.

                                         ಶಿಕ್ಷಣ ಒಂದು ಸರಿಯಾದ ಮಾರ್ಗ ತೋರುತ್ತದೆಯೇ ಹೊರತು ದಾರಿ ತಪ್ಪಿಸುತ್ತಿರಲಿಲ್ಲ ಈಗಿನ ದಿನಮಾನದಲ್ಲಿ ರಾಜಕೀಯ ಬಕಾರಸುರರು ಒಳಹೊಕ್ಕಿ ಅಲ್ಲಿಯೂ  ಜಾತಿ ಧರ್ಮಗಳ ಒಳಜಗಳ ಗಳನ್ನು ತಂದಿಟ್ಟು  ಶಿಕ್ಷಣದ  ಪವಿತ್ರತೆಯನ್ನು ಬೀದಿ ಪಾಲು ಮಾಡಿದ ಹುಚ್ಚು ಹೊಲಸು ರಾಜಕಾರಣಿಗಳು. ಮೂಲತಹ ನಮಗೆ ಆದರ ಅರಿವಿದ್ದರೆ ನಾವು  ಗೌರವಿಸುತ್ತೇವೆ ನಮಗೆ ಅರಿವಿಲ್ಲದಿದ್ದರೆ  ನಾವೆಲ್ಲಿ ಗೌರವ ಭಾವನೆ  ತೋರಲು ಸಾಧ್ಯ ಎಂಬುದಕ್ಕೆ ರಾಜಕೀಯ ನಾಯಕರೇ ಸಾಕ್ಷಿ. 

                                     ಸನಾತನ ಧರ್ಮಗಳಲ್ಲಿ ಶಿಕ್ಷಣ ಪದ್ಧತಿಯಲ್ಲಿ ಯಾವುದೇ ರಾಜಕೀಯ ದಂತಹ ಹುಚ್ಚು ಹೊಲಸು ದೊಂಬರಾಟಗಳಿರಲಿಲ್ಲ  ಶ್ರದ್ದೆ ಭಕ್ತಿ ಮತ್ತು ವಿನಾಯತೆ ಯಿಂದ  ಅಭ್ಯಸಿಸುತ್ತಿದ್ದರೂ ಇದಕ್ಕೆಒಂದು ಉದಾಹರಣೆ ನೀಡಬೇಕೆಂದರೆ  ಏಕಾಲವ್ಯನ ಕತೆಯನ್ನು ನಾವು ಕಾಣಬಹುದು. ಅತ ಗುರುವಿಂದ ತಿರಸ್ಕರಿಸಿದರು ಅವನ ಅಗಾಧ ಭಕ್ತಿ ಮತ್ತು ಗುರು ಭಕ್ತಿಯಿಂದ ಸಕಲ ವಿಧ್ಯಾ ಪ್ರವೀಣ್ಯನಾಗಿಮಾಡಿತು. ಅಂತಹ ಭಕ್ತಿ ಶ್ರದ್ದೆಯಾಗಲಿ ಕಾಣಲು ಪ್ರಸ್ತುತತೆಯಲ್ಲಿ ಸಾಧ್ಯವಿಲ್ಲ.

                                      ಒಟ್ಟಿನಲ್ಲಿ ಹೇಳುವುದಾದರೆ ಶಿಕ್ಷಣದ  ಗತಿ ಬದಲಾದಂತೆ ವಿಧ್ಯಾರ್ಥಿಗಳು ದಾರಿ ತಪ್ಪಿರುವುದು ಸಹಜ ಸಂಗತಿಯಾಗಿದೆ.

Akshay R Bhat

BA 2ND

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ